ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ವ್ಯಕ್ತಿಯೊಬ್ಬನಿಗೆ ಅಪರಿಚಿತರಿಂದ ಇರಿತ!

ಹಂಚಿಕೊಳ್ಳಿ
WhatsApp Facebook X Telegram

Shivamogga Mar 5, 2024 Man stabbed , Doddapete police station limits|  ಶಿವಮೊಗ್ಗದಲ್ಲಿ ಮಾರಿಹಬ್ಬದ ಸಂಭ್ರಮ ಮನೆ ಮಾಡುತ್ತಿದೆ. ಇದರ ನಡುವೆ ಸಲ್ಲದ ಘಟನೆಯೊಂದು ನಡೆದಿದೆ. ಮಿಳಘಟ್ಟದ ನಿವಾಸಿ ಎನ್ನಲಾದ ವ್ಯಕ್ತಿಯೊಬ್ಬರಿಗೆ ಇರಿದಿರುವ ಬಗ್ಗೆ ವರದಿಯಾಗಿದೆ. 48 ವರ್ಷದ ಕಾರ್ತಿಕ್ ಎಂಬವರಿಗೆ  ಹರಿತವಾದ ಆಯುಧದಿಂದ ಇರಿಯಲಾಗಿದೆ. 

ಅಪರಿಚಿತ ಇಬ್ಬರು ವ್ಯಕ್ತಿಗಳು ಶಿವಮೊಗ್ಗ ನಗರ ರಾಯಲ್ ಆರ್ಕೇಡ್ ಹೋಟೆಲ್ ಹಿಂಭಾಗದ ರಸ್ತೆಯಲ್ಲಿ  ಕಾರ್ತಿಕ್ ಎಂಬವರ  ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಆ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಕಾರ್ತಿಕ್​ರವರ ಕೈಗೆ ಗಾಯವಾಗಿದೆ. ಅವರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ  ಅಡ್ಮಿಟ್ ಮಾಡಲಾಗಿದೆ. ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ಘಟನೆ ನಡೆದಿದ್ದು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಇನ್ನೂ ಘಟನೆಯ ನೈಜತೆ ಹಾಗೂ ಇನ್ನಷ್ಟು ವಿವರಗಳ ಲಭ್ಯವಾಗಿಲ್ಲ

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor