ಹೆಂಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆದ ವ್ಯಕ್ತಿ ಕಾಡಿನಲ್ಲಿ ಪತ್ತೆಯಾದನಾ?

ಹಂಚಿಕೊಳ್ಳಿ
WhatsApp Facebook X Telegram

Shivamogga Mar 5, 2024   Aavige village , Byakodu, Sagar taluk  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಬ್ಯಾಕೋಡು ಸಮೀಪದ ಕಾಡಿನಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಈ ಶವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ಬ್ಯಾಕೋಡು ಸಮೀಪ ಪತ್ನಿಯ ಕೊಲೆ ಮಾಡಿ ಎಸ್ಕೇಪ್ ಆದವನ ಶವ ಇದೆ ಇರಬೇಕು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಬ್ಯಾಕೋಡು ಸಮೀಪದ ಆವಿಗೆಯಲ್ಲಿ ಶನಿವಾರ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಊರಿನ ಗ್ರಾಮಸ್ಥರು ಕಟ್ಟಿಗೆಗಾಗಿ ಕಾಡಿಗೆ ತೆರಳಿದ ಸಂದರ್ಭದಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ.  ಕಾರ್ಗಲ್ ಠಾಣಾ ಪೊಲೀಸ್ ನವರು ಸ್ಥಳಕ್ಕಾಗಮಿಸಿ, ಮಹಜರ್ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಶವದ ಗುರುತು ಪತ್ತೆಗೆ ಡಿಎನ್​ಎ ಪರೀಕ್ಷೆಗೆ ಮಾದರಿ ಕಳಿಸಿದ್ದಾರೆ. 

 

20 ಜನವರಿ 2024 ರಂದು ಗ್ರಾಮದ ನೀಲಾವತಿ ಎಂಬ ಮಹಿಳೆಯನ್ನು ಪತಿ ಲೋಕೇಶ್ ಎಂಬುವನು ಕುಡಿದ ಅಮಲಿನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದ. ನಂತರ ಆರೋಪಿ ಲೋಕೇಶನು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದರು.  ಸದ್ಯ ಪತ್ತೆಯಾಗಿರುವ ಶವ ಆತನದ್ದೆ ಇರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor