ಶಿವಮೊಗ್ಗ : ಬಿ.ಹೆಚ್​. ರಸ್ತೆಯಲ್ಲಿ ಸಿಕ್ಕ ಪರ್ಸ್​, ವಿನೋಬನಗರ ಪೊಲೀಸ್ ಸ್ಟೇಷನ್​ ತಲುಪಿದ ಕಥೆ

ಹಂಚಿಕೊಳ್ಳಿ
WhatsApp Facebook X Telegram
ವಿನೋಬನಗರ ಪೊಲೀಸ್ ಠಾಣೆಗೆ

Vinobanagar Police Station / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರೋಡ್​ನಲ್ಲಿ ಯಾರಾದ್ರೂ ಏನಾದ್ರೂ ಮಿಸ್​ ಆಗಿ ಬೀಳಿಸಿಕೊಂಡು ಹೋದರೆ, ಸಾಮಾನ್ಯವಾಗಿಯೇ ಅದನ್ನ ಎತ್ತಿ ಮೊದಲು ಜೇಬಿಗೆ ಹಾಕ್ಕೊಳ್ತಿವಿ. ಆ ಸಂದರ್ಭದಕ್ಕೆ ಏನೂ ಸಹ ಸಹಜವಾಗಿಯೇ ಅನಿಸೋದಿಲ್ಲ. ಮೇಲೆ ಹೆಕ್ಕಿದ್ದು ಸಿಕ್ಕಿದ್ದ ವಸ್ತುವನ್ನಲ್ಲವೇ ಎಂದು ನಮಗೆ ನಾವೇ ಸಮಾಧಾನ ಹೇಳಿಕೊಳ್ಳುವುದು ಸಹ ಊಂಟು. ಮೇಲಾಗಿ ಜೇಬಿಗೆ ಬಿದ್ದ ಆ ವಸ್ತು ಹಣವಾದರಂತೂ ಇವತ್ತು ಅದೃಷ್ಟ ಇತ್ತು ಅಂದ್ಕೊಳ್ತೀವಿ. ಯಾರದ್ದೋ ಏನೋ ಪಾಪ ಬೀಳಸ್ಕೊಂಡು ಹೋಗಿದ್ದಾರೆ ಅಂತಾ ಬೇಜಾರು ಮಾಡ್ಕೊತ್ತೀವಿ. ಆದರೆ ಆ ಹಣವನ್ನ ಅದರ ಮಾಲೀಕರಿಗೆ ಮಾತ್ರ ವಾಪಸ್ ಕೊಡುವ ಪ್ರಯತ್ನ ಮಾಡೋದಕ್ಕೆ ಮನಸ್ಸು ಸುತಾರಾಮ್ ಬಿಡೋದಿಲ್ಲ. ಸದ್ಯ ಇಷ್ಟುದ್ದದ ಪೀಠಿಕೆ ಏಕೆ ಅಂದರೆ, ಇಲ್ಲೊಬ್ಬರು ಈ ಪೀಠಿಕೆಗೆ ವ್ಯತಿರಿಕ್ತ ಎಂಬಂತೆ, ತಮಗೆ ಸಿಕ್ಕ ದುಬಾರಿ ಮೌಲ್ಯದ ವಸ್ತುಗಳಿದ್ದ ಪರ್ಸ್​ನ್ನ ತಾವಿಟ್ಟುಕೊಳ್ಳದೇ ಪೊಲೀಸರಿಗೆ ಕೊಟ್ಟು, ಅದರ ಮಾಲೀಕರಿಗೆ ತಲುಪಿಸಿ ಅಂತಾ ಮನವಿಮಾಡಿದ್ದಾರೆ.

ನಿಜ, ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಹಿತರಕ್ಷಣಾ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾದ ಉಪಾಧ್ಯಕ್ಷ ಬಿ.ಆರ್. ಸಂತೋಷ್ ನಾಯಕ್ ರಿಗೆ ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಒಂದು ಪರ್ಸ್​ ಸಿಕ್ಕಿತ್ತು. ಅವರ ಮುಂದೆ ಹೋಗ್ತಿದ್ದವರೇ ಅದನ್ನ ಆಕಸ್ಮಿಕವಾಗಿ ಬೀಳಿಸಿಕೊಂಡು ಹೋಗಿದ್ರು. ಪರ್ಸ್​ ಬಿದ್ದಿದ್ದನ್ನು ನೋಡಿ, ಅವರನ್ನ ಕರೆಯುವಷ್ಟರಲ್ಲಿ ಪಾಸಾಗಿದ್ದರು. ಹಾಗಾಗಿ ಪರ್ಸ್ ಮತ್ಯಾರದ್ದೋ ಕೈ ಸೇರುವುದು ಬೇಡ ಎಂದು ಕೊಡಂ ಸಂತೋಷ್​ ನಾಯಕ್​ ಅದನ್ನ ಎತ್ತಿಕೊಂಡು ಚೆಕ್ ಮಾಡಿದ್ದಾರೆ. ಅದರಲ್ಲಿ ಮಹತ್ವದ ದಾಖಲೆಗಳಿರುವುದು ಗೊತ್ತಾಗಿದೆ. ಹಾಗಾಗಿ ತಡ ಮಾಡದೇ ವಿನೋಬನಗರ ಪೊಲೀಸ್ ಠಾಣೆಗೆ (Vinobanagar Police Station) ತೆರಳಿ ಪರ್ಸ್ ನೀಡಿ ಅದರ ಮಾಲೀಕರಿಗೆ ತಲುಪಿಸಿ ಎಂದು ಹೇಳಿ ವಾಪಸ್​ ಆಗಿದ್ದಾರೆ. ಸದ್ಯ ಪೊಲೀಸರು ಪರ್ಸ್​ನ್ನು ಅದರ ಮಾಲೀಕರಿಗೆ ಒಪ್ಪಿಸುವ ಜವಬ್ದಾರಿ ನಿರ್ವಹಿಸ್ತಿದ್ದಾರೆ.

Whatsapp / https://chat.whatsapp.com/JrsZ8He4nN600n0r3tJItz

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor