BANGALORE NEWS TODAY

ನಟಿ ರುಕ್ಕಿಣಿ ವಸಂತ್ ಫೋಟೋ ಕೇಸ್​! ಶಿವಮೊಗ್ಗದ ಓರ್ವ ಸೇರಿ ಮೂವರ ಸೆರೆ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Rukmini Vasanth Deepfake Video Case

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬೆಂಗಳೂರು/ ರುಕ್ಮಿಣಿ ವಸಂತ್​ / ಬೆಂಗಳೂರು ಸೈಬರ್​ ಕ್ರೈಂ ಪೊಲೀಸರಿಂದ ಶಿವಮೊಗ್ಗಕ್ಕೆ ಸಂಬಂಧಿಸಿದ ಸುದ್ದಿಯೊಂದು ಮಲೆನಾಡುಟುಡೆಗೆ ತಲುಪಿದೆ.ಇತ್ತೀಚೆಗೆ ಸಿನಿಮಾ ನಟಿಯರ ಎಐ ಕಲ್ಪಿತ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವ ವಿಕೃತಿಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ಕಾಂತಾರಾ ನಟಿ ರುಕ್ಮಿಣಿ ವಸಂತ್​​ರವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಇದ್ದಕ್ಕಿದ್ದಂತೆ ವೈರಲ್​ ಆಗಿತ್ತು. ತೀರಾ ಅವರದ್ದೇನಾ ಈ ವಿಡಿಯೋ ಎಂಬ ಚರ್ಚೆ ವ್ಯಾಪಕವಾಗುವ ಮಟ್ಟಿಗೆ ಹರಿದಾಡಿದ ಬೆನ್ನಲ್ಲೆ ವಿಡಿಯೋ ಬಗ್ಗೆ ಸ್ವತಃ ನಟಿ ರುಕ್ಷಿಣಿ ವಸಂತ್​ ಸ್ಪಷ್ಟತೆ ನೀಡಿ, ಇದೊಂದು ಫೇಕ್​ ಎಐ ಮೇಡ್​ ದೃಶ್ಯ. ಇದರ ವಿರುದ್ಧ ಕೇಸ್ ಮಾಡುವುದಾಗಿ ಹೇಳಿ ದೂರು ಕೊಟ್ಟಿದ್ದರು. ಇದೀಗ ಬೆಂಗಳೂರು ಪೊಲೀಸರು ಪ್ರಕರಣದ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಈ ಪೈಕಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಓರ್ವರು ಆರೋಪಿ.

ಎಐ ತಂತ್ರಜ್ಞಾನ ಬಳಸಿ ನಟಿ ರುಕ್ಕಿಣಿ ವಸಂತ್ (Rukmini Vasanth Deepfake Video Case) ಅವರ ಫೋಟೋ ಹಾಗೂ ವಿಡಿಯೋ ವನ್ನು ಅಶ್ಲೀಲವಾಗಿ ಮಾರ್ಪಡಿಸದ ಆರೋಪದ ಅಡಿಯಲ್ಲಿ ಬೆಂಗಳೂರು ಸೈಬರ್ ಕ್ರೈಂ ಠಾಣೆ ಪೊಲೀಸರು ಒಟ್ಟು ಮೂವರನ್ನು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಚಿಲಕಮುಖಿ ಗ್ರಾಮದ ರವಿಕುಮಾರ್ (24), ಶಿವಮೊಗ್ಗದ ತೀರ್ಥಹಳ್ಳಿ ಮೂಲದ, ಸದ್ಯ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ನಿವಾಸಿ ಚಂದ್ರಕಾಂತ್ (33), ಮಹಾಲಕ್ಷ್ಮೀ ನಗರ 4ನೇ ಮುಖ್ಯ ರಸ್ತೆ, ಮಂಜುನಾಥ ನಗರ (ನ್ಯೂ ಎನ್ಯನ್), ನಾಗಸಂದ್ರ ಪೋಸ್ಟ್ ನಿವಾಸಿ ರಂಜಿತ್ (25) ಬಂಧಿತರು. ಘಟನೆ ಸಂಬಂಧ ಮೂರು ಫೋನ್​ಗಳನ್ನು ಸೀಜ್ ಮಾಡಲಾಗಿದ್ದು, ತನಿಖೆ ಬೆಂಗಳೂರು ನಗರ ಸೈಬರ್‌ಕ್ರೈಂ ಪೊಲೀಸ್ ಠಾಣೆಯಲ್ಲಿ ಮುಂದುವರಿದಿದೆ.

Whatsapp / https://chat.whatsapp.com/JrsZ8He4nN600n0r3tJItz

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ