last Rites : ಚಟ್ಟಕ್ಕೆ ಹೆಗಲುಕೊಟ್ಟರು, ಚಿತೆಗೆ ಅಗ್ನಿ ಕೊಟ್ಟರು, ಮನೆ ಹಿರಿಯನಿಗೆ ಹೆಣ್ಣುಮಕ್ಕಳಿಂದ ಅಂತಿಮ ವಿಧಿ ವಿಧಾನ!

ಹಂಚಿಕೊಳ್ಳಿ
WhatsApp Facebook X Telegram
last Rites
last Rites done by womans team in sagara
last Rites : ಅಂತಿಮ ವಿಧಿವಿದಾನದ ವೇಳೆಯಲ್ಲಿ ಪುರುಷರ ಮೃತರ ಚಟ್ಟವನ್ನು ಹೊತ್ತುಕೊಂಡು ಸಾಗುವುದು ಹಿಂದಿನಿಂದ ಬಂದಿದೆ.ಇಲ್ಲಿ ಮಹಿಳೆಯರು ಚಟ್ಟವನ್ನು ಏಕೆ ಹೊತ್ತುಕೊಂಡು ಸಾಗುವುದಿಲ್ಲ ಎಂಬುದಕ್ಕೆ ನಾನಾ ಉತ್ತರಗಳಿವೆ. ಇದರ ನಡುವೆ ನಿನ್ನೆ ದಿನ ನೌಕಾಪಡೆಯ ಮಹಿಳಾ ಯೋಧರು ಹುತಾತ್ಮ ಯೋಧನ ಪಾರ್ಥಿವ ಶರೀರವಿದ್ದ ಪೆಟ್ಟಿಗೆಯನ್ನು ಹೊತ್ತುಕೊಂಡು ಸಾಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಇದರ ಜೊತೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕುನ ಘಟನೆಯೊಂದು ಇದೀಗ ಮಹಿಳೆಯರು ಮೃತರ ಚಟ್ಟ ಹೊತ್ತು ಸಾಗಿ, ಅಂತ್ಯಕ್ರಿಯೆಯನ್ನು ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

last Rites /ಸಾಗರ ತಾಲ್ಲೂಕು 

ಸಾಗರ ತಾಲ್ಲೂಕುನ ಸೊರಬ ರಸ್ತೆಯಲ್ಲಿರುವ ನಿವಾಸಿಯೊಬ್ಬರ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ಪುರುಷರ ಬದಲು ಕುಟುಂಬದ ಮಹಿಳೆಯರು ನಡೆಸಿದ್ದಾರೆ.  ಇಲ್ಲಿನ ನಿವಾಸಿ ಗೋಪಾಲ ರಾಮಚಂದ್ರ ಭಟ್ಟರು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆಯನ್ನು ಖುದ್ದ ತಾವಾಗಿ ನಡೆಸಲು ಮನೆಯ ಹೆಣ್ಣುಮಕ್ಕಳು ಮುಂದಾದರು. ಮಹಿಳೆಯರ ನಿರ್ದಾರಕ್ಕೆ ಕುಟುಂಬಸ್ಥರು ಸಾಥ್ ನೀಡಿದರು. ಚಟ್ಟಕ್ಕೆ ಹೆಗಲು ಕೊಡುವುದರಿಂದ ಹಿಡಿದು ಅಂತ್ಯಕ್ರಿಯೆವರೆಗೂ ಮನೆಯ ಹೆಣ್ಣುಮಕ್ಕಳೆ ಎಲ್ಲವನ್ನು ನಿಬಾಯಿಸಿದರು. ಇಲ್ಲಿನ ಮಾರಿಕಾಂಬಾ ರುದ್ರಭೂಮಿಯಲ್ಲಿ ಮೃತ ಅಂತ್ಯಕ್ರಿಯೆ ನಡೆಯಿತು. ಘಟನೆ ವಿಶೇಷ ಎನಿಸಿದ್ದಷ್ಟೆ ಅಲ್ಲದೆ ಬದಲಾವಣೆಯ ಅಗತ್ಯತೆಯನ್ನು ಖಾತರಿಪಡಿಸಿತು. 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor