ಜಸ್ಟ್ 2 ದಿನದಲ್ಲಿ ಕುವೆಂಪು ವಿವಿ ಕುಲಸಚಿವರು ಬದಲು! ಶಿವಮೊಗ್ಗದಲ್ಲಿ ಅಧಿಕಾರಿಗಳಿಗೆ ಮ್ಯೂಸಿಕಲ್ ಚೇರ್​!

ಹಂಚಿಕೊಳ್ಳಿ
WhatsApp Facebook X Telegram

Shivamogga | Feb 2, 2024 | ಕುವೆಂಪು ವಿಶ್ವವಿದ್ಯಾಲಯ ಆಡಳಿತ ಕುಲ ಸಚಿವರಾಗಿ ಕೆಎಎಸ್ ಅಧಿಕಾರಿ ಪಿ.ಶಿವರಾಜು ಅವರನ್ನು ನೇಮಿಸಿ ಜ.31 ರಂದು ಆದೇಶ ಹೊರಡಿಸಿದ್ದ ಸರ್ಕಾರ, ಅವರು ಅಧಿಕಾರ ಸ್ವೀಕರಿಸುವ ಮುನ್ನವೇ ಪುನಃ ಆದೇಶ

ಬದಲಿಸಿದೆ. ಇದೀಗ ಪಿ.ಶಿವರಾಜು ಬದಲಿಗೆ ಕುವೆಂಪು ವಿಶ್ವವಿದ್ಯಾಲಯ ಆಡಳಿತ ಕುಲಸಚಿವರ ಸ್ಥಾನಕ್ಕೆ ಕೆಎಎಸ್ ಅಧಿಕಾರಿ (ಕಿರಿಯ ಶ್ರೇಣಿ) ಎಚ್.ವಿ. ವಿಜಯಕುಮಾ‌ರ್ ಅವರನ್ನು ನೇಮಿಸಿ ಆದೇಶಹೊರಡಿಸಲಾಗಿದೆ.

ಕಳೆದ ಜ.31ರಂದು ಕೆಎಎಸ್ ಅಧಿಕಾರಿ ಪಿ.ಶಿವರಾಜು ಅವರನ್ನು ನೇಮಿಸಿದ್ದ ಸರ್ಕಾರ, ಇದೀಗ ತನ್ನ ನಿರ್ಧಾರವನ್ನು ಬದಲಾಯಿಸಿದೆ.. ನೂತನ ಕುಲಸಚಿವ ವಿಜಯಕುಮಾರ್ ಯಾವಾಗ ಅಧಿಕಾರ ಸ್ವೀಕಾರ ಎಂಬುದು ನಿರ್ಧಾರವಾಗಿಲ್ಲ

ಜ.31ರ ಆದೇಶದಲ್ಲಿ ವಿಜಯಕುಮಾರ್ ಅವರನ್ನು ಯಾದಗಿರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಆಗಿ ನೇಮಿಸಲಾಗಿತ್ತು. ಈ ಬದಲಾವಣೆಗೆ ಕಾರಣ ಏನೆಂಬುದನ್ನು ಮಾತ್ರ ಸ್ಪಷ್ಟಪಡಿಸಿಲ್ಲ. 

ನೇಮಕಗೊಂಡ ಅಧಿಕಾರಿ ಅಧಿಕಾರ ಸ್ವೀಕರಿಸಲು 8ರಿಂದ 10 ದಿನ ಅವಕಾಶವಿದೆ. ವಿಜಯಕುಮಾ‌ರ್ ಅವರು ಯಾವಾಗ ಅಧಿಕಾರ ಸ್ವೀಕರಿಸುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿದು ಬಂದಿದೆ. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor