ಸಿಎಂ ಭೇಟಿಯಾಗಿ ಬಂದ ಬೆನ್ನಲ್ಲೆ, ಕಿಮ್ಮನೆ ರತ್ನಾಕರ್​ರಿಗೆ ಮಹತ್ವದ ಸ್ಥಾನ!

ಹಂಚಿಕೊಳ್ಳಿ
WhatsApp Facebook X Telegram
ಸಿಎಂ ಭೇಟಿಯಾಗಿ ಬಂದ ಬೆನ್ನಲ್ಲೆ, ಕಿಮ್ಮನೆ ರತ್ನಾಕರ್​ರಿಗೆ ಮಹತ್ವದ ಸ್ಥಾನ! Kimmane Ratnakar Appointed to Congress SIR Vigilance Committee in Karnataka
ಸಿಎಂ ಭೇಟಿಯಾಗಿ ಬಂದ ಬೆನ್ನಲ್ಲೆ, ಕಿಮ್ಮನೆ ರತ್ನಾಕರ್​ರಿಗೆ ಮಹತ್ವದ ಸ್ಥಾನ! Kimmane Ratnakar Appointed to Congress SIR Vigilance Committee in Karnataka

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಚುನಾವಣಾ ಆಯೋಗ ಪ್ರಸ್ತುತ ನಡೆಸುತ್ತಿರುವ ವಿಶೇಷ ತೀವ್ರ ಮತ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ವಿವಾದಕ್ಕೆ ಕಾರಣವಾಗಿದೆಯಷ್ಟೆ ಅಲ್ಲದೆ, ಈ ಸಂಬಂಧ ರಾಜಕೀಯ ಚರ್ಚೆಗಳು ಸಹ ತೀವ್ರಗೊಳ್ಳುತ್ತಿದೆ. ಈ ಮಧ್ಯೆ ಎಸ್​ಐಆರ್​ ಬಗ್ಗೆ ನಿಗಾ ವಹಿಸಲು ವಿಶೇಷ ಕಣ್ಣಾವಲು ಸಮಿತಿಯೊಂದನ್ನು ರಚಿಸಿದೆ. ವಿಶೇಷ ಅಂದರೆ ಈ ಸಮಿತಿಯ ಸದಸ್ಯರನ್ನಾಗಿ ತೀರ್ಥಹಳ್ಳಿಯ ಮಾಜಿ ಸಚಿವಕಿಮ್ಮನೆ ರತ್ನಾಕರ್ ಅವರನ್ನು ನೇಮಕ ಮಾಡಲಾಗಿದೆ.

ಕಿಮ್ಮನೆ ರತ್ನಾಕರ್​ರಿಗೆ ಮಹತ್ವದ ಸ್ಥಾನ!

ಎಸ್​ಇಆರ್​ ಪ್ರಮುಖವಾಗಿ ಮುಸ್ಲಿಂ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಮತದಾನದ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುತ್ತಿದೆ ಮತ್ತು ಹಕ್ಕು ನಿರಾಕರಣೆ ಮಾಡುತ್ತಿದೆ ಎಂಬುದು ಇಂಡಿಯಾ (INDIA) ಮೈತ್ರಿಕೂಟದ ಪ್ರಮುಖ ಆರೋಪವಾಗಿದೆ. ಮತ್ತು ವೋಟ್​ ಚೋರಿ ಆರೋಪವನ್ನ ಬಂಗಾಳ ಚುನಾವಣೆಯಲ್ಲಿಯು ಕಾಂಗ್ರೆಸ್​ ವರಿಷ್ಟ ರಾಹುಲ್ ಗಾಂಧಿ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಎಸ್​ಇಆರ್ ವಿಚಾರಕ್ಕೆ ಸಂಬಂಧಿಸಿದಂತೆ  ಕಣ್ಣಾವಲು ಸಮಿತಿಯನ್ನು ರಚನೆ ಮಾಡಲಾಗಿದೆ. 

ಅಂದಹಾಗೆ,  ಕಣ್ಣಾವಲು ಸಮಿತಿಯಲ್ಲಿ ಒಟ್ಟು 28 ಮಂದಿ ಇರಲಿದ್ದಾರೆ. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಮಿತಿಯಲ್ಲಿ ಕಿಮ್ಮನೆ ರತ್ನಾಕರ್ ಅವರೊಂದಿಗೆ, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್, ಖ್ಯಾತ ವಕೀಲ ಹಾಗೂ ಪತ್ರಕರ್ತ ಸಿ.ಎಸ್. ದ್ವಾರಕನಾಥ್, ಮಾಜಿ ಸಚಿವ ಜಯಪ್ರಕಾಶ್ ಹೆಗಡೆ, ಎಲ್. ಹನುಮಂತಯ್ಯ ಮತ್ತು ಮಾಜಿ ಸಚಿವ ಉಗ್ರಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಇನ್ನೂ ಕೆಲ ದಿನಗಳ ಹಿಂದಷ್ಟೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್​, ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಬಂದಿದ್ದರು. ಈ ವೇಳೆ ಕ್ಷೇತ್ರಕ್ಕೆ ಸಂಬಂಧಿಸಿದ ಮನವಿಗಳನ್ನ ಮಾಡಿದ್ದ ಕಿಮ್ಮನೆ ರತ್ನಾಕರ್​, ಕೆಲವು ವಿಚಾರಗಳ ಬಗ್ಗೆಯು ಸಿಎಂ ಜೊತೆ ಸಮಾಲೋಚಿಸಿದ್ದರು. ಈ ಭೇಟಿ ಬೆನ್ನಲ್ಲೆ ಅವರನ್ನು ಸಮಿತಿ ಸದಸ್ಯರನ್ನಾಗಿ ಸೇರಿಸಲಾಗಿದೆ..

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಸಿಎಂ ಭೇಟಿಯಾಗಿ ಬಂದ ಬೆನ್ನಲ್ಲೆ, ಕಿಮ್ಮನೆ ರತ್ನಾಕರ್​ರಿಗೆ ಮಹತ್ವದ ಸ್ಥಾನ!  Kimmane Ratnakar Appointed to Congress SIR Vigilance Committee in Karnataka
ಸಿಎಂ ಭೇಟಿಯಾಗಿ ಬಂದ ಬೆನ್ನಲ್ಲೆ, ಕಿಮ್ಮನೆ ರತ್ನಾಕರ್​ರಿಗೆ ಮಹತ್ವದ ಸ್ಥಾನ! Kimmane Ratnakar Appointed to Congress SIR Vigilance Committee in Karnataka

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor