ಕೇವಲ ರಿಲೀಸ್ ಡೇಟ್ ಮಾತ್ರವಲ್ಲ, ಸಕ್ಸಸ್ ಕೂಡಾ ರಿಪೀಟ್ ಆಗುತ್ತಾ?: ಕರಾವಳಿ ಮತ್ತು ಸು ಫ್ರಮ್ ಸೋ ಲಿಂಕ್ ಏನು?

ಹಂಚಿಕೊಳ್ಳಿ
WhatsApp Facebook X Telegram
Karavali Movie Release Date Connection With Su From So
Karavali Movie Release Date Connection With Su From So

Karavali Movie ಕಳೆದ ಬಾರಿ ಜುಲೈ 24 ರಂದು ರಿಲೀಸ್ ಆದಂತಹ ಸು ಫ್ರಂ ಸೋ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ? ಕಿರಿಯರಿಂದ ಹಿಡಿದು ಹಿರಿಯರ ವರೆಗೆ ನಕ್ಕು ನಲಿಸಿ ನೂರಾರು ಕೋಟಿ ಬಾಚಿಕೊಂಡು ಪ್ರೇಕ್ಷಕರಿಂದ ಶಭಾಷ್ ಗಿರಿ ಪಡೆದ ಚಿತ್ರವದು. ಇದೀಗ ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ಹಾಗೆಯೇ ರಾಜ್ ಬಿ ಶೆಟ್ಟಿ ಅಭಿನಯಿಸುತ್ತಿರುವ ಕರಾವಳಿ ಚಿತ್ರ ರಿಲೀಸ್ ಗೆ ರೆಡಿಯಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ

ಇದೀಗ ‘ಕರಾವಳಿ’ಗೂ ಸು ಫ್ರಂ ಸೋ ಚಿತ್ರಕ್ಕೂ ಹೋಲಿಕೆ ಯಾಕಪ್ಪಾ ಅಂತ ನೋಡೋದಾದ್ರೆ, ‘ಕರಾವಳಿ’ ಚಿತ್ರವೂ ಸಹ ‘ಸು ಫ್ರಂ ಸೋ’ ಚಿತ್ರ ರಿಲೀಸ್ ಆದ ದಿನವೇ ಅಂದರೆ ಜೂನ್ 24, 2026 ರಂದು ರಿಲೀಸ್ ಆಗ್ತಾ ಇದೆ. ಈ ಕುರಿತು ಒಂದು ಸಣ್ಣ ಟೀಸರ್ ಝಲಕ್ ಮೂಲಕ ಚಿತ್ರತಂಡ ಅಧಿಕೃತವಾಗಿ ಚಿತ್ರದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ.ಆ ಚಿತ್ರ ರಿಲೀಸ್ ಆಗಿರೋದು, ಈ ಚಿತ್ರ ರಿಲೀಸ್ ಆಗ್ತಿರೋದು ಒಂದೇ ದಿನ ಇರ್ಬೋದು. ಆದರೆ ಆ ಚಿತ್ರ ಮಾಡಿದ ಹಾವಳಿ ಕಲೆಕ್ಷನ್ ಹಾಗೆಯೇ ರೀಚ್ ಅನ್ನು ಕರಾವಳಿ ಚಿತ್ರವೂ ಮಾಡುತ್ತಾ? ಈ ವಿಚಾರ ನಮ್ ತಲೆಗೆ ಬಂದಿದ್ದು ಈ ರಿಲೀಸ್ ಡೇಟ್ ಅನೌನ್ಸ್ ಮೆಂಟ್ ಟೀಸರ್ ನೋಡ್ದಾಗ. ನೀವು ಒಮ್ಮೆ ಟೀಸರ್ ನೋಡಿದ್ರೆ ಈ ಪ್ರಶ್ನೆ ನಿಮ್ ತಲೇಲಿ ಕೂಡಾ ಬರುತ್ತೆ.

Karavali Movie ಟೀಸರ್ ನಲ್ಲಿ ಏನಿದೆ? Su from so ಹೋಲಿಕೆ ಏಕೆ?

ಈಗ KVN ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ರಿಲೀಸ್ ಆಗಿದೆ. ಹೆಚ್ಚು ಕಮ್ಮಿ 1 ನಿಮಿಷ ಇರುವಂತಹ ಈ ಟೀಸರ್ ನ ಆರಂಭದಲ್ಲಿ ಕೋಣದ ಮೇಲೆ ಮಹಿಷನ ವೇಷ ಹಾಕಿರುವ ವ್ಯಕ್ತಿಯ ದೃಶ್ಯವಿದೆ. ನಂತರ ಯಕ್ಷಗಾನದಲ್ಲಿ ಬರುವ ಧ್ವನಿಯಲ್ಲೇ ಮಗನೇ ಮಹಿಷ ಎಂಬ ಡೈಲಾಗ್ ನಿಂದ ಟೀಸರ್ ಆರಂಭವಾಗುತ್ತೆ. ನಂತರ ಕಂಬಳದ ದೃಶ್ಯ, ಕೋಣದ ದೃಶ್ಯಗಳು ಕಾಣಸಿಗುತ್ತೆ. ಇದರ ನಡುವೆ ಟ್ವಿಸ್ಟ್ ಎಂಬಂತೆ ರಾಜ್ ಬಿ ಶೆಟ್ಟಿಯವರ ಸು ಫ್ರಂ ಸೋ ಸಿನಿಮಾ ರಿಲೀಸ್ ಆದಾಗ ಆ ಚಿತ್ರಕ್ಕೆ ಪ್ರೇಕ್ಷಕರು ಕೊಟ್ಟಂತಹ ರಿವ್ಯೂ ಹಾಗೆಯೇ ಥಿಯೇಟರ್ ನಲ್ಲಿ ತುಂಬಿದ್ದ ಜನಸಾಗರವನ್ನು ತೋರಿಸಲಾಗುತ್ತದೆ. ಇದೊಂದು ಕರಾವಳಿ ಭಾಗದ ಚಿತ್ರವಾಗಿದ್ದು, ಸು ಫ್ರಂ ಸೋ ಚಿತ್ರ ಬಿಡುಗಡೆ ಆದ ದಿನವೇ ಬಿಡುಗಡೆಯಾಗಲಿದೆ ಎಂದು ಮೂವಿ ರಿಲೀಸಿಂಗ್ ಡೇಟ್ ಅನ್ನು ಅನೌನ್ಸ್ ಮಾಡಲಾಗುತ್ತದೆ.

ಇದೀಗ ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನು ಲಿಂಕ್ ಅಂತ ನೋಡೋದಾದ್ರೆ, ಸು ಫ್ರಂ ಸೋ ಚಿತ್ರದ ನಿರ್ಮಾಪಕ ಹಾಗೆಯೇ ನಟ ರಾಜ್ ಬಿ ಶೆಟ್ಟಿ ಕರಾವಳಿ ಚಿತ್ರದಲ್ಲಿ ಮಾವೀರ ಎಂಬ ಪಾತ್ರವನ್ನು ಮಾಡ್ತಾ ಇದ್ದಾರೆ. ಇದರ ನಡುವೆ ರಾಜ್ ಬಿ ಶೆಟ್ಟಿಯವರ ಸು ಫ್ರಂ ಸೋನ ಮಾರ್ಕೆಟಿಂಗ್ ಸ್ಟ್ರಾಟಜಿಯನ್ನು ಇಲ್ಲಿಯೂ ಸಹ ಚಿತ್ರತಂಡ ಉಪಯೋಗಿಸುವಂತೆ ಕಾಣಿಸ್ತಾ ಇದೆ.

ಹೌದು, ಸು ಫ್ರಂ ಸೋ ಚಿತ್ರವನ್ನು ರಾಜ್ ಬಿ ಶೆಟ್ಟಿ ವಿಭಿನ್ನವಾಗಿ ಪ್ರಮೋಷನ್ ಮಾಡಿದ್ರು. ಚಿತ್ರ ರಿಲೀಸ್ ಆಗೋ 2-3 ದಿನದ ಹಿಂದೆ ಪೇಯ್ಡ್ ಪ್ರೀಮಿಯರ್ ಶೋ ಬಿಟ್ಟು ಜನಕ್ಕೆ ರೀಚ್ ಮಾಡಿದ್ರು. ಚಿತ್ರ ಥಿಯೇಟರ್ ನಲ್ಲಿ ಜನಕ್ಕೆ ರೀಚ್ ಆಗೋ ಮುನ್ನ ಪೇಯ್ಡ್ ಪ್ರೀಮಿಯರ್ ಶೋ ನೋಡಿದ ಪ್ರೇಕ್ಷಕರ ವರ್ಡ್ ಆಫ್ ಮೌತ್ (ಜನರ ಬಾಯಿಂದ ಬಾಯಿಗೆ) ಇಂದು ಹೆಚ್ಚಾಗಿ ರೀಚ್ ಆಗಿತ್ತು. ಒಳ್ಳೆ ಸ್ಟೋರಿ ಮಾಡಿ ಜನರ ಬಾಯಿಗೆ ಬಿದ್ರೆ ಸಾಕಲ್ವಾ, ಏನೇ ಆದ್ರೂ ಚಿತ್ರವನ್ನು ಬ್ಲಾಕ್ ಬಸ್ಟರ್ ಮಾಡ್ತಾರೆ ಅನ್ನೋದಕ್ಕೆ ಈ ಚಿತ್ರ ಉದಾಹರಣೆ ಆಗಿತ್ತು. ಅದೇ ರೀತಿ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿ ಬಾಕ್ಸ್ ಆಫೀಸ್ ನಲ್ಲಿ ನೂರು ಕೋಟಿ ರೂಪಾಯಿಗಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು. ಇದೀಗ ಮಲಯಾಳಂನಲ್ಲೂ ಸಹ ಡಬ್ ಆಗಿ ಅಲ್ಲಿಯೂ ಸದ್ದು ಮಾಡ್ತಾ ಇದೆ.

ಈ ಹಿಂದೆಲ್ಲ ಒಂದು ಚಿತ್ರ ರಿಲೀಸ್ ಆಗಿ ಸೂಪರ್ ಹಿಟ್ ಆಗಬೇಕೆಂದರೆ ಅದರಲ್ಲಿ ಟೈರ್ 1 ಹಿರೋಗಳಿರಬೇಕು, ಅದಕ್ಕೆ ಕೋಟ್ಯಂತರ ರೂಪಾಯಿ ಬಜೆಟ್ ಹಾಕಬೇಕು, ಸೋಶಿಯಲ್ ಮೀಡಿಯಾ ಪ್ರಮೋಷನ್ ಬಹುಮುಖ್ಯ ಎಂಬುದು ಚಿತ್ರ ನಿರ್ಮಿಸುವವರ ನಂಬಿಕೆ ಆಗಿತ್ತು. ಆದರೆ ಯಾವಾಗ ಈ ಸು ಫ್ರಂ ಸೋ ಚಿತ್ರ ಹಾಗೆಯೇ ಕಾಂತಾರ ರಿಲೀಸ್ ಆಗಿ ಜನರ ಬಾಯಿಂದ ಬಾಯಿ ಅಂದ್ರೆ’ವರ್ಡ್ ಆಫ್ ಮೌತ್ ಅಂತಾರಲ್ಲ, ಆ ರೀತಿ ಸಿನಿಮಾ ಚೆನ್ನಾಗಿದೆ ಎಂಬ ಮಾತು ಕೇಳಿಬಂತೋ, ಆ ಎಲ್ಲಾ ಲೆಕ್ಕಾಚಾರವನ್ನು ಈ ಚಿತ್ರಗಳು ತಲೆಕೆಳಗಾಗಿಸಿದವು. ಯಾವ ಪ್ರಮೋಷನ್, ಯಾವ ದೊಡ್ಡ ಬಜೆಟ್, ಯಾವ ದೊಡ್ಡ ಹೀರೋನೂ ಅಗತ್ಯವಿಲ್ಲದೆ, ಸ್ಟೋರಿ ಒಂದು ಚೆನ್ನಾಗಿದ್ದು ಜನರಿಗೆ ಇಷ್ಟವಾದರೆ ಆ ಚಿತ್ರದ ಸಕ್ಸಸ್ ಅನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ ಅನ್ನೋದನ್ನ ಈ ಎಲ್ಲಾ ಚಿತ್ರಗಳು ಪ್ರೂವ್ ಮಾಡಿದ್ವು.

ಇದೀಗ ಅಂಬಿ ನಿಂಗ್ ವಯಸ್ಸಾಯ್ತೋ ಎಂಬ ಚಿತ್ರವನ್ನು ನಿರ್ದೇಶಿಸಿ ಸೈ ಅನಿಸಿಕೊಂಡ ನಿರ್ದೇಶಕ ಗುರುದತ್ ಗಾಣಿಗ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಗ್ರೇಟ್ ಕಮ್ ಬ್ಯಾಕ್ ಗೆ ಕಾಯ್ತಾ ಇರುವಂತಹ ಪ್ರಜ್ವಲ್ ದೇವರಾಜ್ ಈ ಚಿತ್ರದ ಪ್ರಮುಖ ನಟ. ಒಂದೆಡೆ ಗುರುದತ್ ಗಾಣಿಗರ ಮೇಲಿನ ಭರವಸೆ, ಹಾಗೆಯೇ ಪ್ರಜ್ವಲ್ ಗ್ರೇಟ್ ಕಂಬ್ಯಾಕ್ ಮಾಡ್ತಾರೆ ಎಂದು ಕಾಯ್ತಿರೋ ಅಭಿಮಾನಿಗಳಿಗೆ ಚಿತ್ರವನ್ನು ರೀಚ್ ಮಾಡ್ಸೋಕೆ ಪ್ರಮೋಷನ್ ಬಹಳಾ ಮುಖ್ಯ ಆಗುತ್ತೆ ಅಲ್ವಾ… ಹಾಗಾಗಿ ಚಿತ್ರ ಪ್ರಮೋಷನ್ ಗೆ ‘ಸು ಫ್ರಂ ಸೋ’ ಮಾರ್ಕೆಟಿಂಗ್ ಸ್ಟ್ರಾಟಜಿಯನ್ನೇ ಹಿಡಿಯುತ್ತಾ ಅಥವಾ ವಿಭಿನ್ನವಾಗಿ ಏನನ್ನಾದರೂ ಪ್ರಯತ್ನಿಸುತ್ತಾ ಎನ್ನುವುದನ್ನ ಕಾದು ನೋಡಬೇಕಿದೆ.

ಸು ಫ್ರಂ ಸೋ’ ರೀತಿಯೇ ಈ ಚಿತ್ರಕ್ಕೂ ಕೂಡ ಪೇಯ್ಡ್ ಪ್ರೀಮಿಯರ್ ಮಾಡಿ ಚಿತ್ರ ಏನಾದ್ರೂ ಉತ್ತಮ ರಿವ್ಯೂ ಪಡೆದ್ರೆ, ಪ್ರಜ್ವಲ್ ದೇವರಾಜ್ ಗ್ರೇಟ್ ಕಂಬ್ಯಾಕ್ ಮಾಡಿದ್ರಲ್ಲಿ ಯಾವುದೇ ಅನುಮಾನವಿಲ್ಲ.ಚಿತ್ರದಲ್ಲಿ ರಮೇಶ್ ಇಂದಿರಾ, ಮಿತ್ರ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ನಟಿಸುತ್ತಿದೆ. ‘ಕರಾವಳಿ’ ಬ್ಲಾಕ್‌ಬಸ್ಟರ್ ಆಗುತ್ತಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹೊಸ ಬಗೆಯ ಪ್ರಚಾರ ತಂತ್ರಗಳು ಮತ್ತು ನುರಿತ ತಾರಾಗಣವನ್ನು ಹೊಂದಿರುವ ‘ಕರಾವಳಿ’ ಚಿತ್ರ, ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಸಂಚಲನ ಮೂಡಿಸುವ ನಿರೀಕ್ಷೆಯಲ್ಲಿದೆ. ಕರಾವಳಿಯ ಸೊಗಡಿನ ಈ ಕಥೆ ಪ್ರೇಕ್ಷಕರ ಮನ ಗೆಲ್ಲುವುದೇ ಎಂಬುದನ್ನು ತಿಳಿಯಲು ಜೂನ್ 24 ರವರೆಗೆ ಕಾಯಲೇಬೇಕು.

ವರದಿ : ಪ್ರತಾಪ್​ ತೀರ್ಥಹಳ್ಳಿ

Karavali Movie Release Date Connection With Su From So

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor