Seenappa Shetty Circle Road ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಟ್ರಾಫಿಕ್ ಪೊಲೀಸ್ / ಸಿಟಿಯಲ್ಲಿ ಪುಟ್ಪಾತ್ ಒತ್ತುವರಿ ತೆರವು, ವಾಹನ ನಿಲುಗಡೆಯ ವ್ಯವಸ್ಥೆ, ಸುಗಮ ಸಂಚಾರದ ಕ್ರಮಗಳನ್ನು ಕೈಗೊಳ್ಳುತ್ತಿರುವ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇದೀಗ ಮತ್ತೊಂದು ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಗೋಪಿ ಸರ್ಕಲ್ ಎಂದು ಕರೆಸಿಕೊಳ್ಳುವ ಸೀನಪ್ಪ ಶೆಟ್ಟಿ ಸರ್ಕಲ್ನಲ್ಲಿ ಕಮಲಾ ನೆಹರು ಕಾಲೇಜು ಅಥವಾ ಪಾಲಿಕೆಗೆ ಹೋಗುವ ದಾರಿಗೆ ಹೋಗುವುದು ವಾಹನ ಸವಾರರಿಗೆ ತ್ರಾಸದ ಕೆಲಸವಾಗಿತ್ತು.
ಏಕೆಂದರೆ ಐದು ದಾರಿ ಕೂಡುವ (Seenappa Shetty Circle Road ) ಸರ್ಕಲ್ನಲ್ಲಿ ಜೆಪಿಎನ್ ರಸ್ತೆಗೆ ತೆರಳುವುದಕ್ಕೆ ಅಷ್ಟೆನು ಸಮಸ್ಯೆಯಾಗುತ್ತಿರುತ್ತಿಲಿಲ್ಲ. ಆದರೆ ಸರ್ಕಲ್ಗೆ ತಾಗಿಕೊಂಡೆ ಇರುವ ಪೋಸ್ಟ್ ಆಫೀಸ್ ಪಕ್ಕದ ರಸ್ತೆಗೆ ವಾಹನ ಸವಾರರು ಟರ್ನ್ ತೆಗೆದುಕೊಳ್ಳುವುದು ಕಷ್ಟವಾಗುತ್ತಿತ್ತು. ಕೋರ್ಟ್ ಸರ್ಕಲ್ ಕಡೆಯಿಂದ ಬರುವ ಉಳಿದ ಕಡೆಗೆ ಹೋಗುವ ವಾಹನಗಳು ಮುಂದೆ ನಿಲ್ಲಿಸುತ್ತಿದ್ದರು, ಇದರಿಂದ ಎದುರುಗಡೆಯಿಂದ ಬರುವ ವಾಹನಗಳಿಗೆ ದಾರಿ ಸಿಗುತ್ತಿರಲಿಲ್ಲ.
ಹೀಗಾಗಿ ಈ ಸಮಸ್ಯೆ ಕ್ಲಿಯರ್ ಮಾಡಲು ಈ ಮೊದಲು ಶಿವಮೊಗ್ಗ ಟ್ರಾಫಿಕ್ ಪೊಲೀಸರು ಈ ಭಾಗದಲ್ಲಿ ಬ್ಯಾರಿಕೇಡ್ ರಿಮೂವ್ ಮಾಡಿ, ಸರ್ಕಲ್ನಲ್ಲಿ ಸಿಗ್ನಲ್ ಸ್ಟಾಪ್ನ್ನ ಸ್ವಲ್ಪ ಹಿಂದಕ್ಕಿರಿಸಿದರು. ಈ ಸಣ್ಣ ಕ್ರಮದಿಂದ ದೊಡ್ಡ ತ್ರಾಸು ಸರಿಯಾಗಿತ್ತು. ಆದರೆ ಪೋಸ್ಟ್ ಆಫೀಸ್ ಪಕ್ಕದ ರಸ್ತೆಯಲ್ಲಿ ಹೋಗುವ ಬರುವ ವಾಹನಗಳ ನಡುವೆ ಜಾಮ್ ಆಗುತ್ತಿತ್ತು. ಇದೀಗ ಈ ಸಮಸ್ಯೆಗೂ ಮುಕ್ತಿಕೊಟ್ಟಿದೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್
ದಿನಾಂಕ 19-06-2026 ರಂದು ಶಿವಮೊಗ್ಗ ನಗರದ ಪ್ರಮುಖ ಜಂಕ್ಷನ್ ಆಗಿರುವ ಗೋಪಿ ಸರ್ಕಲ್ ಅಂದರೆ ಸೀನಪ್ಪ ಶೆಟ್ಟಿ ಸರ್ಕಲ್ ನಿಂದ ಕಮಲಾ ನೆಹರು ಕಾಲೇಜು ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನಗಳ ನಿಯಂತ್ರಣಕ್ಕಾಗಿ ಕ್ರಮ ಕೈಗೊಂಡಿದೆ. ಈ ಮಾರ್ಗದಲ್ಲಿ ರಸ್ತೆಯ ಮಧ್ಯಭಾಗದಲ್ಲಿ ಡಿವೈಡರ್ ಮಾದರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಹೋಗುವ ಹಾಗು ಬರುವ ವಾಹನಗಳಿಗೆ ದಾರಿ ಸ್ಪಷ್ಟವಾಗಿ ತೋರಿಸಲಾಗಿದೆ.
ಈ ರಸ್ತೆಯು ನಗರದ ಪ್ರಮುಖ ಸಂಪರ್ಕ ಕೊಂಡಿಯಾಗಿರುವುದರಿಂದ ಸದಾ ವಾಹನಗಳ ಓಡಾಟವಿರುತ್ತದೆ. ಆದ್ದರಿಂದ ವಾಹನ ಸವಾರರು ಶಿಸ್ತುಬದ್ಧವಾಗಿ ತಮ್ಮ ಪಥದಲ್ಲಿಯೇ ಚಲಿಸಲು ಅನುಕೂಲವಾಗುವಂತೆ ಡಿವೈಡರ್ ರೂಪದಲ್ಲಿ ಬ್ಯಾರಿಕೇಡ್ ಜೋಡಿಸಲಾಗಿದೆ. ಇದರ ಜೊತೆಗೆ ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗಬಾರದು ಎಂಬ ದೃಷ್ಟಿಯಿಂದ ಸದರಿ ರಸ್ತೆಯ ಎರಡೂ ಬದಿಗಳಲ್ಲಿ ಕಟ್ಟುನಿಟ್ಟಿನ ನೋ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಯಲ್ಲಿಡಲಾಗಿದೆ.
ದೇವರಾಜ್, ಇನ್ಸ್ಪೆಕ್ಟರ್ , ಶಿವಮೊಗ್ಗ ಟ್ರಾಫಿಕ್ ಪೊಲೀಸ್
ಸದ್ಯ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಈ ರಸ್ತೆಯಲ್ಲಿ ನೋ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದಾರೆ. ಹಾಗಾಗಿ ಯಾವುದೇ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಬಾರದು. ಹಾಗೊಂದು ವೇಳೆ ಮಾಡಿದರೆ ಕ್ಯಾಮರಾ ಪೈನ್ ಹಾಕೋದು ಗ್ಯಾರಂಟಿ. ಇನ್ನೂ ಸಂಚಾರಿ ಪೊಲೀಸರ ಈ ಕ್ರಮ ವಾಹನ ಸವಾರರ ಶ್ಲಾಘನೆಗೆ ಕಾರಣವಾಗಿದೆ.
Whatsapp / https://chat.whatsapp.com/JrsZ8He4nN600n0r3tJItz
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
