ಪ್ರಧಾನಿ, ಸಚಿವರ ಹೆಸರಿನಲ್ಲಿ ನಕಲಿ ವಿಡಿಯೊ ಹರಿಬಿಟ್ಟು ವಂಚನೆ: ಎಐ ಬಳಸಿ ಆಮಿಷ, ನಂಬದಿರಿ

ಹಂಚಿಕೊಳ್ಳಿ
WhatsApp Facebook X Telegram
PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga
PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga

PM Modi AI Deepfake ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹಾಗೂ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ-2 ಶಕ್ತಿಕಾಂತ್ ದಾಸ್ ಅವರ ನಕಲಿ ವಿಡಿಯೊಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರದ ಪಿಐಬಿ ಫ್ಯಾಕ್ಸ್ ಚೆಕ್ ವಿಭಾಗವು ಎಚ್ಚರಿಕೆ ನೀಡಿದೆ.

ಶಿವಮೊಗ್ಗ : ತುಂಗಾ ಜಲಾಶಯದ ಒಳಹರಿವು ಹಾಗೂ ಹೊರಹರಿವು ಎಷ್ಟಿದೆ ಇವತ್ತು ? 

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಈ ನಕಲಿ ವಿಡಿಯೊಗಳನ್ನು ಸೃಷ್ಟಿಸಲಾಗಿದ್ದು, ಕ್ವಾಂಟಮ್ ಎಐ ಎಂಬ ಹೂಡಿಕೆ ವೇದಿಕೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ಭಾರೀ ಮೊತ್ತದ ಆಮಿಷಗಳನ್ನು ಒಡ್ಡಲಾಗುತ್ತಿದೆ. ಫೇಸ್‌ ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಯೋಜಿತಜಾಹೀರಾತುಗಳ ಮೂಲಕ ಈ ವಿಡಿಯೊಗಳನ್ನು ಹರಿಬಿಡಲಾಗುತ್ತಿದೆ. ವಿಡಿಯೊದಲ್ಲಿ ಕೇವಲ 22,000 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ತಿಂಗಳಿಗೆ 30 ಲಕ್ಷ ರೂಪಾಯಿಗಳವರೆಗೆ, ವಾರಕ್ಕೆ 5 ಲಕ್ಷ ರೂಪಾಯಿ ಹಾಗೂ ದಿನಕ್ಕೆ 1 ಲಕ್ಷ ರೂಪಾಯಿಗಳವರೆಗೆ ಆದಾಯ ಗಳಿಸಬಹುದು ಎಂದು ನಂಬಿಸುವ ಪ್ರಯತ್ನ ಮಾಡಲಾಗಿದೆ.

ಈ ವಿಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಸಚಿವರುಗಳು ಸ್ವತಃ ಈ ಹೂಡಿಕೆ ಯೋಜನೆಗೆ ಬೆಂಬಲ ಸೂಚಿಸಿ ಮಾತನಾಡುವಂತೆ ಕೃತಕವಾಗಿ ಧ್ವನಿ ಹಾಗೂ ತುಟಿಗಳ ಚಲನೆಯನ್ನು ಸೃಷ್ಟಿಸಲಾಗಿದೆ.ಈ ವಿಡಿಯೊ ಸಂಪೂರ್ಣವಾಗಿ ನಕಲಿಯಾಗಿದ್ದು, ಭಾರತ ಸರ್ಕಾರವಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿ, ನಿರ್ಮಲಾ ಸೀತಾರಾಮನ್, ಡಾ. ಎಸ್.ಜೈಶಂಕರ್ ಸೇರಿದಂತೆ ಯಾವುದೇ ಸಚಿವರು ಇಂತಹ ಯಾವುದೇ ಹೂಡಿಕೆ ಯೋಜನೆ ಅಥವಾ ವೇದಿಕೆಯನ್ನು ಪ್ರಚಾರ ಮಾಡಿಲ್ಲ. ಬೆಂಬಲಿಸಿಲ್ಲ ಹಾಗೂ ಅಧಿಕೃತವಾಗಿ ಅನುಮೋದಿಸಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ. ವಂಚಕರು ಜನರನ್ನು ಯಾಮಾರಿಸಿ ಹಣ ಲೂಟಿ ಮಾಡುವ ದುರುದ್ದೇಶದಿಂದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಇಂತಹ ನಕಲಿ ವಿಡಿಯೊಗಳನ್ನು ಹಾಗೂ ಅಸಾಧ್ಯವಾದ ಲಾಭದ ಆಮಿಷಗಳನ್ನು ಸೃಷ್ಟಿಸುತ್ತಿದ್ದಾರೆ.

ಸಾರ್ವಜನಿಕರು ಆನ್‌ಲೈನ್‌ನಲ್ಲಿ ಹರಿದಾಡುವ ಇಂತಹ ಯಾವುದೇ ವಿಡಿಯೊಗಳನ್ನು ಅಥವಾ ಮಾಹಿತಿಯನ್ನು ನಂಬಿ ತಮ್ಮ ಹಣವನ್ನು ಹೂಡಿಕೆ ಮಾಡಬಾರದು ಹಾಗೂ ತಮ್ಮ ವೈಯಕ್ತಿಕ ಮತ್ತು ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸೂಚಿಸಲಾಗಿದೆ. ಯಾವುದೇ ಸರ್ಕಾರಿ ಯೋಜನೆ ಅಥವಾ ಹೂಡಿಕೆಗಳ ಬಗ್ಗೆ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಮಾತ್ರ ಪರಿಶೀಲಿಸಬೇಕು. ಭಾರತ ಸರ್ಕಾರಕ್ಕೆ ಸಂಬಂಧಿಸಿದಂತೆ ಇಂತಹ ಯಾವುದೇ ಅನುಮಾನಾಸ್ಪದ ವಿಡಿಯೊಗಳು ಅಥವಾ ಮಾಹಿತಿಗಳು ಕಂಡುಬಂದಲ್ಲಿ ಸಾರ್ವಜನಿಕರು ಪಿಐಬಿ ಫ್ಯಾಕ್ಸ್ ಚೆಕ್ ವಿಭಾಗದ ವಾಟ್ಸಪ್ ಸಂಖ್ಯೆ 8799711259 ಅಥವಾ ಇಮೇಲ್ ಐಡಿ factcheck a pib.gov. in ಗೆ ವರದಿ ಮಾಡುವ ಮೂಲಕ ಆನ್ ಲೈನ್ ವಂಚನೆಗಳನ್ನು ತಡೆಯಲು ಸಹಕರಿಸುವಂತೆ ಕೋರಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor