THIRTHAHALLI

ತೀರ್ಥಹಳ್ಳಿ ಮಾಳೂರು ಮೂಲದ ಕನ್ನಡ ಕಿರುತೆರೆ ಸಂಭಾಷಣೆಕಾರ ಟಿ.ಜಿ. ನಂದೀಶ್ ಅಕಾಲಿಕ ಮರಣ! ನಡೆದ ಘಟನೆ ವಿವರ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಮಾಳೂರು ಗ್ರಾಮದ ನಿವಾಸಿ ಕನ್ನಡ ಚಲನಚಿತ್ರ ಹಾಗೂ ಕಿರುತೆರೆ ವಲಯದಲ್ಲಿ ಸಂಭಾಷಣೆಕಾರ ಮತ್ತು ಲೇಖಕರಾಗಿ ಗುರುತಿಸಿಕೊಂಡಿದ್ದ ಟಿ.ಜಿ. ನಂದೀಶ್ (37) ಅವರು ನಿನ್ನೆದಿನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಇತ್ತೀಚೆಗೆ ನಿಧನರಾದ ದಿಲೀಪ್​ರಾಜ್​ ಜೊತೆಗೂ ಪಾರು ಧಾರವಾಹಿಯಲ್ಲಿ ಕೆಲಸ ಮಾಡಿದ್ದರು.

ಕನ್ನಡ ಕಿರುತೆರೆ ಸಂಭಾಷಣೆಕಾರ ಟಿ.ಜಿ. ನಂದೀಶ್

ಇನ್ನೂ ಮನೆಯಿಂದಲೇ ಕೆಲಸ ಮಾಡುತ್ತಿದ್ದ ನಂದೀಶ್​ರವರಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅವರನ್ನು ಕುಟುಂಬದ ಸದಸ್ಯರು ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರು. ಆದರೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ

ತೀರ್ಥಹಳ್ಳಿ ತಾಲೂಕಿನ ಮಾಳೂರಿನವರಾದ ನಂದೀಶ್​ ‘ಚಿತ್ತಾರ’ ಸಂಸ್ಥೆಯೊಡನೆ ಸೇರಿ ಅನೇಕ ಧಾರಾವಾಹಿಗಳು ಮತ್ತು ಚಿತ್ರಗಳಿಗೆ ಕಥೆ ಬರೆದಿದ್ದರು. ಮಾಳೂರಿನಲ್ಲಿದ್ದುಕೊಂಡೇ ಕಥೆಗಳನ್ನು ಬರೆಯುತ್ತಿದ್ದ ನಂದೀಶ್​ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.

ನಂದೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವರ ಸ್ವಗ್ರಾಮ ಮಾಳೂರಿನ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗಿದೆ. ಗುರುವಾರ ಮಧ್ಯಾಹ್ನ 12:30 ಕ್ಕೆ ಅಲ್ಲಿಯೇ ಅಂತ್ಯಸಂಸ್ಕಾರ ನಡೆಯಲಿದೆ. ನಂದೀಶ್​ರ ಅಕಾಲಿಕ ನಿಧನಕ್ಕೆ ಚಿತ್ರಸಾಹಿತಿ ಕವಿರಾಜ್ ಸೇರಿದಂತೆ ಚಿತ್ರರಂಗ ಹಾಗೂ ಕಿರುತೆರೆಯ ಗಣ್ಯರು, ನಿರ್ದೇಶಕರು ಮತ್ತು ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.


ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ