ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ: ಯಾವಾಗಿನವರೆಗೆ ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

: ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಸಕ್ರೆಬೈಲು ಆನೆ ಬಿಡಾರಕ್ಕೆ ಇಂದಿನಿಂದ ಕೆಲ ದಿನಗಳ ಕಾಲ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಕುರಿತು ‘ಮಲೆನಾಡು ಎಕ್ಸ್‌ಕ್ಲೂಸಿವ್’ಗೆ ಮಾಹಿತಿ ಲಭ್ಯವಾಗಿದೆ.

ಬಂದ್ ಮಾಡಲು ಕಾರಣವೇನು? ಯಾವಾಗಿನವರೆಗೆ ಇರಲಿದೆ?

ಕಳೆದ ಕೆಲವು ದಿನಗಳ ಹಿಂದೆ ಕೊಡಗಿನ ದುಬಾರೆ ಆನೆ ಬಿಡಾರದಲ್ಲಿ ಆನೆಗಳ ನಡುವಿನ ಗುದ್ದಾಟದ ಸಂದರ್ಭದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆಯು, ಆನೆ ಬಿಡಾರಗಳಲ್ಲಿ ಕಟ್ಟುನಿಟ್ಟಿನ ಎಸ್‌ಒಪಿ (SOP) ನಿಯಮಗಳನ್ನು ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದೆ.ಸಕ್ರೆಬೈಲಿಗೂ ಸಹ ವಿವಿಧೆಡೆಯಿಂದ ಆನೆಗಳನ್ನು ನೋಡಲು ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲದೆ ಆನೆಗಳಿಗೆ ಸ್ನಾನ ಮಾಡಿಸುವುದು ಮತ್ತು ಅವುಗಳನ್ನು ಮುಟ್ಟುವುದು ಮಾಡುತ್ತಾರೆ. ದುಬಾರೆಯಲ್ಲಿ ನಡೆದಂತಹ ಅಹಿತಕರ ಘಟನೆಗಳು ಇಲ್ಲಿ ಮರುಕಳಿಸಬಾರದು ಎಂಬ ಮುನ್ನೆಚ್ಚರಿಕೆಯಿಂದ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಹೊಸ ಎಸ್‌ಒಪಿ (SOP) ನಿಯಮಗಳು ಸಂಪೂರ್ಣವಾಗಿ ಜಾರಿಗೆ ಬರುವವರೆಗೂ ಸಕ್ರೆಬೈಲು ಆನೆ ಬಿಡಾರವು ಮುಚ್ಚಿರಲಿದೆ.ಸಕ್ರೆಬೈಲು ಆನೆ ಬಿಡಾರವು ಇಂದಿನಿಂದಲೇ ಮುಚ್ಚಬೇಕಿತ್ತು. ಆದರೆ ಇಂದು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು (ಓಪನ್ ಮಾಡಲಾಗಿತ್ತು). ಆದರೆ ಇನ್ಮುಂದೆ ಕೆಲ ದಿನಗಳ ಕಾಲ ಇದು ಬಂದ್ ಆಗಿರಲಿದೆ.

Sakrebyle Elephant Camp Closed For Tourists;

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor