) ಅನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಮನೆಯಿಂದ ಹೊರಬಿದ್ದ 14 ವರ್ಷದ ಬಾಲಕನ ಸೇವ್​ ಮಾಡಿದ 112 ಪೊಲೀಸರು! ಕಾರ್ಯಾಚರಣೆ ಹೀಗಿತ್ತು

ಮನೆಯಿಂದ ಹೊರಬಿದ್ದ 14 ವರ್ಷದ ಬಾಲಕನ ಸೇವ್​ ಮಾಡಿದ 112 ಪೊಲೀಸರು! ಕಾರ್ಯಾಚರಣೆ ಹೀಗಿತ್ತು

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ವಿಶೇಷ ಚೇತನ ಬಾಲಕನನ್ನು ಇಆರ್​ಎಸ್​ಎಸ್​ 112 (ERSS-112) ಸಿಬ್ಬಂದಿ ಪತ್ತೆಹಚ್ಚಿ ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆ ಕೈಗೊಂಡು ಬಾಲಕನನ್ನು ರಕ್ಷಿಸಿದ 112 ಪೊಲೀಸರು

ಮೇ 19 ರಂದು ಈ ಘಟನೆ ನಡೆದಿದೆ. 13 ರಿಂದ 14 ವರ್ಷ ವಯಸ್ಸಿನ ವಿಶೇಷ ಚೇತನ ಬಾಲಕನೊಬ್ಬ ವಿಳಾಸ ತಪ್ಪಿ ಬಂದಿರುವುದಾಗಿ ಹಾಗೂ ಆತ ಪೋಷಕರ ಬಗ್ಗೆ ಯಾವುದೇ ಮಾಹಿತಿಯನ್ನು ಹೇಳುತ್ತಿಲ್ಲ ಎಂದು ಸ್ಥಳಿಯರೊಬ್ಬರು 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಕರೆಯ ಆಧಾರದ ಮೇಲೆ ಎಮರ್ಜೆನ್ಸಿ ರೆಸ್ಪಾನ್ಸ್ ವೆಹಿಕಲ್ (ERV) ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದರು.

ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಬಾಲಕನೊಂದಿಗೆ ಆತ್ಮೀಯವಾಗಿ ಸಂವಹನ ನಡೆಸುವ ಮೂಲಕ ಆತನ ವಿಳಾಸವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಪೋಷಕರನ್ನು ಸಂಪರ್ಕಿಸಿದ ಸಿಬ್ಬಂದಿ, ಬಾಲಕನನ್ನು ಅವರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ. ಅಲ್ಲದೆ, ವಿಶೇಷ ಚೇತನ ಮಗುವಿನ ಬಗ್ಗೆ ಇನ್ನು ಮುಂದೆ ಹೆಚ್ಚಿನ ಹಾಗೂ ವಿಶೇಷ ಕಾಳಜಿ ವಹಿಸುವಂತೆ ಪೋಷಕರಿಗೆ ಸೂಕ್ತ ತಿಳುವಳಿಕೆ ನೀಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.