ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಅಖಾಡದಲ್ಲಿ ಹೊಸ ಎಂಟ್ರಿ! ಅರ್ಜಿ ಸಲ್ಲಿಸಿದ ಕೆ.ರಂಗನಾಥ್​

ಹಂಚಿಕೊಳ್ಳಿ
WhatsApp Facebook X Telegram
K Ranganath Applies for Shivamogga District Congress President Post
K Ranganath Applies for Shivamogga District Congress President Post

K Ranganath / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಸ್ಥಾನಕ್ಕೆ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ವೀಕ್ಷಕರು ಆಗಲೇ ಶಿವಮೊಗ್ಗಕ್ಕೆ ಬಂದಿದ್ದು, ಸ್ಥಳೀಯರ ಮುಖಂಡರಿಂದ ಅಭಿಪ್ರಾಯಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್​ ಸಮಿತಿ ಅಧ್ಯಕ್ಷರಾಗಲು ಬಯಸಿ ಅಖಾಡಕ್ಕೆ ದುಮುಕಿದ್ದಾರೆ ಕೆ.ರಂಗನಾಥ್​.

ಹೌದು ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕಿನ ಹಾಲಿ ಅಧ್ಯಕ್ಷ ಕೆ. ರಂಗನಾಥ್ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ಕಚೇರಿಗೆ ಭೇಟಿ ನೀಡಿದ ಜಿಲ್ಲಾ ಕಾಂಗ್ರೆಸ್ ಆಡಳಿತ ಕಾರ್ಯದರ್ಶಿಯಾಗಿರುವ ಎಸ್.ಟಿ. ಹಾಲಪ್ಪ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ರು. ಕೆ. ರಂಗನಾಥ್ , ಈ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಜಿಲ್ಲಾ ಘಟಕದ ಸಾರಥ್ಯ ವಹಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿ ಈ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಕಾಂಗ್ರೆಸ್​ನಲ್ಲಿ ಅಧ್ಯಕ್ಷರಾಗಲು ಹಲವರು ತಮ್ಮದೆ ಆದ ಸ್ಟೈಲ್​ನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಅದರ ನಡುವೆ ಹೊಸಮುಖವಾಗಿ ಕೆ.ರಂಗನಾಥ್ ಎಂಟ್ರಿಯಾಗಿದ್ದಾರೆ. ಅಲ್ಲದೆ ಜೆಂಝಿ ಅಭಿಯಾನದ ನಡುವೆ ಕಾಂಗ್ರೆಸ್​ನಲ್ಲಿ ಯಂಗ್​ ಬ್ಲಡ್​ಗೆ ಅಧ್ಯಕ್ಷಗಿರಿ ನೀಡಿ ಎಂಬ ಹೋರಾಟವೂ ಸದ್ದಿಲ್ಲದೆ ನಡೆಯುತ್ತಿದೆ.

ಅದೇ ಹಳೆಯ ನಾಯಕರ ಬದಲಿಗೆ ಹೊಸ ಮುಖವನ್ನು ಆಯ್ಕೆ ಮಾಡಬೇಕು ಎಂಬ ಮಾತುಗಳು ಮುಂಚೂಣಿ ಕಾರ್ಯಕರ್ತರಿಂದ ವ್ಯಕ್ತವಾಗುತ್ತಿದೆಯಷ್ಟೆ ಅಲ್ಲದೆ ವೀಕ್ಷಕರ ಎದುರು ತಮ್ಮದೇ ವಿಶಿಷ್ಟ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಈ ನಡುವೆ ಕೆ.ರಂಗನಾಥ್​ ಕೂಡ ಒಂದು ಅವಕಾಶ ನೋಡ ಬಯಸಿದ್ದಾರೆ.

ಇನ್ನೂ ರಂಗನಾಥ್ ಉಮೇದು ವಾರಿಕೆ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರಾದ ಹೆಚ್.ಪಿ. ಗಿರೀಶ್, ಟಿ.ವಿ. ರಂಜಿತ್, ಬಿ. ಲೋಕೇಶ್, ಎಸ್. ಕುಮಾರೇಶ್, ಪುಷ್ಪಕ್ ಕುಮಾರ್ ಹಾಗೂ ಇಂಟೆಕ್ ಮಹಿಳಾ ವಿಭಾಗದ ಅಧ್ಯಕ್ಷರಾದ ಕವಿತಾ ರಾಘವೇಂದ್ರ ಅವರು ಈ ವೇಳೆ ಉಪಸ್ಥಿತರಿದ್ದರು. ಇವರೊಂದಿಗೆ ಕೆ.ಎಲ್. ಪವನ್, ಎಂ. ರಾಕೇಶ್, ಎಂ. ರಾಹುಲ್, ಮನ್ವಿಕ್ ಜೈನ್, ಅದ್ನಾನ್, ಮಿಥುನ್, ಸೈಯದ್, ಶಮ್ಮು ಸೇರಿದಂತೆ ಪಕ್ಷದ ಹಲವು ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದು, ಕೆ. ರಂಗನಾಥ್ ಅವರ ಉಮೇದುವಾರಿಕೆಗೆ ಬೆಂಬಲ ಸೂಚಿಸಿದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor