ಹೋದ ಸಲ ಬಹುತೇಕ ತುಂಬಿದ್ದ ಡ್ಯಾಮ್​ಗಳಲ್ಲಿ ಈ ಸಲ ನೀರಿಗೆ ಬರ! ಎಷ್ಟಿದೆ ನೀರಿನ ಮಟ್ಟ ಓದಿ

ಹಂಚಿಕೊಳ್ಳಿ
WhatsApp Facebook X Telegram
malnad rain and dam levels linganamakki dam level today linganamakki dam Water Level Today Report
linganamakki dam Water Level Today Report

Bhadra Linganamakki and Tunga Dam / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಳೆ ಇಲ್ಲ, ಬರುವ ಸೂಚನೆಯು ಕಾಣುತ್ತಿಲ್ಲ, ಪರಿಣಾಮ ಡ್ಯಾಮ್​ಗಳು ಒಣಗುತ್ತಿದೆ. ಈ ನಿಟ್ಟಿನಲ್ಲಿ ಜಲಾಶಯಗಳಲ್ಲಿ ನೀರೆಷ್ಟಿದೆ ಅಂಥಾ ಹುಡುಕಿದಾಗ ಸಿಕ್ಕ ವಿವರ ಹೀಗಿದೆ.

ಭದ್ರಾ, ಲಿಂಗನಮಕ್ಕಿ ಮತ್ತು ತುಂಗಾ ಜಲಾಶಯಗಳಲ್ಲಿ ಇವತ್ತಿನ ಅಂದರೆ 29.07.2026 ರಂದು ಲಭ್ಯವಾಗಿರುವ ಮಾಹಿತಿ ಪ್ರಕಾರ, ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ 154’5″ (2126.41 ಎಂಎಸ್‌ಎಲ್) ನಷ್ಟಿದ್ದು, 37.937 ಟಿಎಂಸಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಗೆ 5920 ಕ್ಯೂಸೆಕ್ಸ್ ಒಳಹರಿವು ಇದ್ದು, ಒಟ್ಟು 179 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಭದ್ರಾ ಜಲಾಶಯದ ನೀರಿನ ಮಟ್ಟ 180’3 ಇತ್ತು ಹಾಗೂ 64.478 ಟಿಎಂಸಿ ನೀರು ಸಂಗ್ರಹವಾಗಿತ್ತು.

ಇನ್ನೂ ಲಿಂಗನಮಕ್ಕಿ ಜಲಾಶಯದ ಇಂದಿನ ನೀರಿನ ಮಟ್ಟ 1774.15 ಅಡಿಗಳಷ್ಟಿದ್ದು, ಕಳೆದ 24 ಗಂಟೆಗಳಲ್ಲಿ 1.00 ಅಡಿಯಷ್ಟು ಏರಿಕೆಯಾಗಿದೆ. ಜಲಾಶಯಕ್ಕೆ 19047.00 ಕ್ಯೂಸೆಕ್ಸ್ ಒಳಹರಿವು ಇದ್ದು, ಸ್ಲೂಯಿಸ್ ಮೂಲಕ 2863.00 ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ, ಒಟ್ಟು ಹೊರಹರಿವು 2863.00 ಕ್ಯೂಸೆಕ್ಸ್ ಇದೆ. ಜಲಾಶಯದ ವ್ಯಾಪ್ತಿಯಲ್ಲಿ 36.4 ಎಂಎಂ ಮಳೆಯಾಗಿದೆ. ಕಳೆದ ವರ್ಷ ಇದೇ ದಿನದಂದು ಲಿಂಗನಮಕ್ಕಿ ಜಲಾಶಯದ ಮಟ್ಟ 1810.85 ಅಡಿಗಳಷ್ಟಿತ್ತು ಹಾಗೂ 125.64 ಟಿಎಂಸಿ (ಶೇಕಡಾ 82.85) ನೀರು ಸಂಗ್ರಹವಾಗಿತ್ತು.

ತುಂಗಾ ಜಲಾಶಯದ ಇಂದಿನ ಮಾಹಿತಿಯ ಪ್ರಕಾರ, ಪ್ರಸ್ತುತ ಜಲಾಶಯ 588.24 ಮೀಟರ್ ಗರಿಷ್ಠ ಮಟ್ಟದಲ್ಲೆ ಇದ್ದು, ಒಟ್ಟು 16219.0 ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಈ ಪೈಕಿ ನದಿಗೆ 14023.0 ಕ್ಯೂಸೆಕ್ಸ್, ಯುಟಿಪಿ ನಾಲೆಗೆ 1700.0 ಕ್ಯೂಸೆಕ್ಸ್, ಎಡದಂಡೆ ನಾಲೆಗೆ 321.0 ಕ್ಯೂಸೆಕ್ಸ್, ಬಲದಂಡೆ ನಾಲೆಗೆ 140.0 ಕ್ಯೂಸೆಕ್ಸ್, ಗೃಹಬಳಕೆಗೆ 35.0 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor