SHIVAMOGGA AIRPORT ನಲ್ಲಿ ಲ್ಯಾಂಡ್ ಆಗದ ವಿಮಾನ! ಬೆಂಗಳೂರಿಗೆ ವಾಪಸ್ ಹೋಗಿ ಮತ್ತೆ ಬಂದ ಇಂಡಿಗೋ ಪ್ಲೈಟ್!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS

ಶಿವಮೊಗ್ಗದ ಬೆಳವಣಿಗೆಗಳ ನಡುವೆ ಅತ್ತ ಶಿವಮೊಗ್ಗ ವಿಮಾನ ನಿಲ್ದಾಣದ ಲ್ಲಿ ಇಂಡಿಗೋ ವಿಮಾನ ಸುಲಭ ಲ್ಯಾಂಡಿಂಗ್ ಸಾಧ್ಯವಾಗದೇ ಬೆಂಗಳೂರಿಗೆ ವಾಪಸ್ ಹೋಗಿ ಮತ್ತೆ ಪುನಃ ಬಂದು ಲ್ಯಾಂಡ್ ಘಟನೆಯೊಂದರ ಬಗ್ಗೆ ವರದಿಯಾಗಿದೆ. 

ಏನಿದು ಘಟನೆ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕಳೆದ ಭಾನುವಾರ ಆಗಮಿಸಿದ ವಿಮಾನ, ಲ್ಯಾಂಡ್ ಆಗಲು ಸಾಧ್ಯವಾಗಲಿಲ್ಲ. ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ತುಂತುರು ಮಳೆಯಾಗುತ್ತಿತ್ತು ಹಾಗೂ ಮೋಡ ಆವರಿಸಿತ್ತು. ಹೀಗಾಗಿ  ಇಂಡಿಗೋ ವಿಮಾನ ಒಮ್ಮೆ ಏರ್‌ಪೋರ್ಟ್‌ನ ಸುತ್ತಮುತ್ತ ಹಾರಾಟ ನಡೆಸಿದೆ. ಲ್ಯಾಂಡಿಂಗ್ ಆಗಲು ರನ್​ವೇ ಕಾಣದ ಹಿನ್ನೆಲೆಯಲ್ಲಿ ವಾಪಸ್ ಬೆಂಗಳೂರಿಗೆ ಹೋಗಿದೆ. ಅಲ್ಲಿ ಲ್ಯಾಂಡ್ ಆದ ವಿಮಾನ 20 ನಿಮಿಷ ಉಳಿದು ಆನಂತರ ಮತ್ತೆ ಶಿವಮೊಗ್ಗದ ಕಡೆಗೆ ಹಾರಾಟ ನಡೆಸಿದೆ. ಶಿವಮೊಗ್ಗ ಏರ್‌ಪೋರ್ಟ್‌ಗೆ ವಾಪಸ್ ಬಂದು ಸುರಕ್ಷಿತವಾಗಿ ಲ್ಯಾಂಡ್ ಆಯಿತು. 

ಬೆಂಗಳೂರಿನಿಂದ ಶಿವಮೊಗ್ಗ ಏರ್‌ಪೋರ್ಟ್‌ಗೆ ಬೆಳಗ್ಗೆ 10.45ರ ಸುಮಾರಿಗೆ ವಿಮಾನ 10 ನಿಮಿಷ ಆಕಾಶದಲ್ಲಿ ಹಾರಾಟ ನಡೆಸಿತ್​ತು. ಆನಂತರ ಬೆಂಗಳೂರಿಗೆ ತೆರಳಿತು. ಅಲ್ಲಿಂದ  ಮಧ್ಯಾಹ್ನ 1.52ಕ್ಕೆ ಶಿವಮೊಗ್ಗ ಏರ್‌ಪೋರ್ಟ್‌ಗೆ ಬಂದು ವಿಮಾನವನ್ನು ಇಳಿಸಲಾಯ್ತು.  ಬಳಿಕ 2.29ಕ್ಕೆ ಶಿವಮೊಗ್ಗದಿಂದ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ತೆರಳಿತು. 


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor