KARNATAKA NEWS/ ONLINE / Malenadu today/ Oct 3, 2023 SHIVAMOGGA NEWS
ಶಿವಮೊಗ್ಗದ ರಾಗಿಗುಡ್ಡದಲ್ಲಿ ಯಾವುದೇ ವ್ಯಕ್ತಿಯ ಎನ್ಕೌಂಟರ್ ಆಗಿಲ್ಲ. ಈ ಬಗ್ಗೆ ಯಾವುದೇ ಫೇಕ್ ನ್ಯೂಸ್ ಹರಡಬೇಡಿ ಎಂದು ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಇಂತಹ ಸುಳ್ಳು ಸುದ್ದಿ ಹರಡಿಸುವ ಪ್ರಯತ್ನ ಮಾಡಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಟ್ರಿಟ್ ಆಗಿ ಹೇಳಿದ್ದಾರೆ.
ಯಾರೋ ವ್ಯಕ್ತಿಯೊಬ್ಬ ಎಲ್ಲಿಯೋ ಬಿದ್ದಿರುವ ದೃಶ್ಯವನ್ನು ವಾಟ್ಸಾಪ್ ಮಾಡಿ ಅದು ಎನ್ಕೌಂಟರ್ ಎಂದು ಸುಳ್ಳು ಹರಡುತ್ತಿದ್ದಾರೆ. ಅದರ ಚಿತ್ರ ಸಮೇತ ಪೋಸ್ಟ್ ಮಾಡಿರುವ ಎಸ್ಪಿ ಮಿಥುನ್ ಕುಮಾರ್, ಈ ರೀತಿಯ ಫೇಕ್ ನ್ಯೂಸ್ ಯಾರು ಸಹ ಹರಡ ಬಾರದು ಎಂದು ನೇರವಾಗಿ ಹೇಳಿದ್ದಾರೆ ಅಲ್ಲದೆ ಇಂತಹ ಸುಳ್ಳುಸುದ್ದಿ ಹರಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ
ಇನ್ನೂ ಈಗಾಗಲೇ ಫೋಟೋವೊಂದನ್ನು ಹಂಚಿಕೊಂಡು ಈ ರೀತಿಯಾಗುತ್ತಿದೆ ಎಂದು ಸುಳ್ಳು ಸುದ್ದಿ ಮೂಲಕ ಪ್ರಚೋದನೆ ನೀಡುತ್ತಿದ್ದ ವ್ಯಕ್ತಿವಿರುದ್ದ ಎಫ್ಐಆರ್ ದಾಖಲಿಸುವುದಾಗಿಯು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ಧಾರೆ
ಇನ್ನಷ್ಟು ಸುದ್ದಿಗಳು