MALENADUTODAY.COM |SHIVAMOGGA| #KANNADANEWSWEB
ಮಧು ಬಂಗಾರಪ್ಪ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಾರತುರಾಯಿ ಹಾಕಿ ನೆಚ್ಚಿನ ನಾಯಕನನ್ನು ಅಭಿನಂಧಿಸಿದರು. ಕಾಂಗ್ರೆಸ್ ಮುಖಂಡರ ಪ್ರೀತಿ ವಿಶ್ವಾಸಕ್ಕೆ ಫಿದಾ ಆದ ಮಧು ಬಂಗಾರಪ್ಪ ನಂತರ ಮಾತನಾಡ್ತಾ, ಜನರು ಬಂಗಾರಪ್ಪನವರ ಮೇಲೆ ಇಟ್ಟ ಅಭಿಮಾನದಿಂದಲೇ ನನಗೂ ಸಹ ಆಶಿರ್ವಾದ ಮಾಡಿದ್ದಾರೆ. ಹುಟ್ಟುಹಬ್ಬದ ದಿನ ಎಲ್ಲರು ನನಗೆ ಶುಭಾಶಯ ಕೋರುತ್ತಿದ್ದಾರೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಏನು ಮಾಡಿರಲಿಲ್ಲ. ಕೇವಲ ಬಂಗಾರಪ್ಪನ ಮಗನಾಗಿ ಪಕ್ಷ ಸೇರಿಕೊಂಡೆ. ನಿಜವಾಗಿ ಹೇಳಬೇಕೆಂದರೆ ಹನ್ನೊಂದು ವರ್ಷ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ನಾನು ಕೆಲಸ ಮಾಡಿಕೊಂಡು ಬಂದವನು. ಆದರೆ ಇಂದು ಕಾಂಗ್ರೆಸ್ ಮುಖಂಡರನ್ನು ನೋಡಿದಾಗ ಇದು ನನ್ನ ಭಾಗ್ಯ ಎನಿಸುತ್ತದೆ. ಹುಟ್ಟಹಬ್ಬದ ಸಂದರ್ಭದಲ್ಲಿ ನನಗೆ ಆಶಿರ್ವಾದ ಮಾಡಲು ನನ್ನ ತಂದೆ ತಾಯಿ ಇಲ್ಲದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರ ಮೂಲಕ ನನಗೆ ಆಶಿರ್ವಾದ ಸಿಕ್ಕಿದೆ. ನನಗೆ 56 ವರ್ಷವಾದರೂ ನಾನೀಗ 26 ವರ್ಷದ ಯುವಕ. ಇನ್ನು ಮೂವತ್ತು ವರ್ಷ ಹಿಂದಿದ್ದೇನೆ ಎಂದು ತಂದೆ ಬಂಗಾರಪ್ಪನವರ ಯೌವ್ವನನದ ಮಾತುಗಳನ್ನು ಮೆಲಕು ಹಾಕಿ ಹಾಸ್ಯ ಮಾಡಿದರು. ತಂದೆಯವರಂತೆ ನನಗೂ ವಯಸ್ಸಾಗಿಲ್ಲ ಎಂದು ಹಾಸ್ಯ ಮಾಡುತ್ತಲೇ..ಎಂದಿದ್ದರೂ ವಯಸ್ಸಿನ ಗುಟ್ಟನ್ನು ಮುಚ್ಚಿಡಲು ಸಾಧ್ಯವಿಲ್ಲ. ನನಗೆ ಈಗ 56 ವರ್ಷ ಎಂದು ನಗೆ ಬೀರಿದರು.
ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ್ ರವರು ರಾಜ್ಯಕ್ಕೆ ಆಗಮಿಸಿದ್ದು. ಇಂದು ಚಾಮರಾಜನಗರದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಮಡಿಕೆರೆ ಮಂಗಳೂರು ಉಡುಪಿ ಚಿಕ್ಕಮಗಳೂರು ಹಾಸನ ನಾಲ್ಕನೇ ತಾರೀಖು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಲಗಾನ್ ಕಲ್ಯಾಣ ಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ ಕೊಡುಗೆಗಳ ಅಭಿಯಾನವನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಚುನಾವಣೆ ಸನಿಹವಾಗುತ್ತಿದೆ. ಇನ್ನು ಒಂದು ವಾರ ಇಲ್ಲವೇ ಎರಡು ವಾರಗಳಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುತ್ತದೆ. ರಾಜ್ಯದ ಜನತೆ ರಾಜ್ಯದ ದಿಕ್ಕನ್ನು ಬದಲಾಯಿಸುವ ಹಕ್ಕು ಅವರಿಗಿದೆ. ನಾನು ಕೂಡ ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಪಕ್ಷದಲ್ಲಿ ಮಹತ್ವದ ಜವಬ್ದಾರಿ ನನಗೆ ನೀಡಿದ್ದಾರೆ. ಸೊರಬ ಕ್ಷೇತ್ರದಲ್ಲಿ ಜನರು ನನ್ನ ಕೈಹಿಡಿಯುವ ವಿಶ್ವಾಸವಿದೆ. ಸೊರಬದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿ ಹೋಗಿದೆ. ಸೊರಬದಲ್ಲಿ ನನಗೆ ವಾತಾವರಣ ಚೆನ್ನಾಗಿದೆ. ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಇಂದು ಎಲ್ಲಾ ಹಳ್ಳಿಗಳಲ್ಲಿ ಸ್ವಯಂ ಪ್ರೇರಿತರಾಗಿ ಬ್ಯಾನರ್ ಕಟ್ಟಿ ಹಿರಿಯರಿಗೆ ಸನ್ಮಾನ ಮಾಡಿ, ಹುಟ್ಟು ಹಬ್ಬ ಆಚರಿಸಿದ್ದಾರೆ. ಇದು ಜನರು ನನ್ನ ಮೇಲೆ ಇಟ್ಟಿರುವ ಅಪಾರ ಪ್ರೀತಿಗೆ ಸಾಕ್ಷಿಯಾಗಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹಳ ಸುಲಭವಾಗಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಮಲ್ಲಿಕಾರ್ಜುನ್ ಖರ್ಗೆ ರಾಹುಲ್ ಗಾಂಧಿ ಸೋನಿಯಾ ಗಾಂಧಿ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುತ್ತದೆ.ಎಂದು ಮಧು ಬಂಗಾರಪ್ಪ ಹೇಳಿದ್ದಾರೆ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #