ಕಾರ್ಪೆಂಟರ್​ ಮನೆಯಲ್ಲಿ ನಡೆಯುತ್ತಿತ್ತು ಗನ್​ ಫ್ಯಾಕ್ಟರಿ! ಶಿಕಾರಿಪುರದಲ್ಲಿ ಪೊಲೀಸರ ರೋಚಕ ಆಫರೇಷನ್​! ಕೋವಿ ಕಥೆ ಓದ್ಬಿಡಿ

ಹಂಚಿಕೊಳ್ಳಿ
WhatsApp Facebook X Telegram
Shikaripura Illegal Country Made Gun Factory Raided
Shikaripura Illegal Country Made Gun Factory Raided

ಶಿವಮೊಗ್ಗ ಜಿಲ್ಲೆ | ಶಿಕಾರಿಪುರ ಪೊಲೀಸರು ದೊಡ್ಡ ಶಿಕಾರಿಯನ್ನೆ ಮಾಡಿದ್ದಾರೆ.  ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನ ತಯಾರಿಸ್ತಿದ್ದ ಘಟಕದ ಮೇಲೆ ರೇಡ್ ಮಾಡಿದ್ದಾರೆ. 

ಇಲ್ಲಿ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭದ್ರಾಪುರ ಗ್ರಾಮದ 3 ನೇ ಕ್ರಾಸ್ ನಿವಾಸಿ ಮಲ್ಲಪ್ಪ ಅವರ ಮಗ ಲಕ್ಷ್ಮಣಪ್ಪ ಎಂಬವರನ್ನ ಪೊಲೀಸರು ಬಂಧಿಸಿದ್ದಾರೆ. 

ಮೂಲತಃ ವೃತ್ತಿಯಲ್ಲಿ ಕಾರ್ಪೆಂಟರ್  ಆಗಿರುವ ಈತ ತನ್ನ  ಮನೆ ಪಕ್ಕದಲ್ಲಿರುವ ಹಳೆಯ ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನ ರೆಡಿಮಾಡಿಕೊಡ್ತಿದ್ದ. ಈ ಸಂಬಂಧ  04-02-2026 ರಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. 

Shikaripura Illegal Country Made Gun Factory Raided

ಪೊಲೀಸ್ ಇನ್ಫಾಮರ್​ರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ರೇಡ್ ಮಾಡಿದ್ದಾರೆ. ಈ ವೇಳೆ ಅಕ್ರಮವಾಗಿ ತಯಾರು ಮಾಡುತ್ತಿದ್ದ ಬಂದೂಕುಗಳು ಮತ್ತು ಅವುಗಳಿಗೆ ಬೇಕಿರುವ ಸಾಮಗ್ರಿಗಳು ಪತ್ತೆಯಾಗಿದೆ.

Shikaripura Illegal Country Made Gun Factory Raided

ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​

ಸದ್ಯ ಈ ಪ್ರಕರಣದ ಸಂಬಂಧ  ಶಸ್ತ್ರಾಸ್ತ್ರ ತಿದ್ದುಪಡಿ ಅಧಿನಿಯಮ 2019 ರ ಕಲಂ 25(1)(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನೂ ಈ ರೇಡ್ ಕಾರ್ಯಾಚರಣೆಯಲ್ಲಿ ಶಿಕಾರಿಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ  ಕೇಶವ ಕೆ.ಇ, ಶಿಕಾರಿಪುರ ನಗರ ವೃತ್ತದ ಸಿಪಿಐ ಸಂತೋಷ್ ಎಂ ಪಾಟೀಲ್, ಠಾಣೆಯ ಪಿ.ಎಸ್.ಐ  ಶರತ್ ಹೆಚ್ ಹಾಗೂ ಸಿಬ್ಬಂದಿಗಳಾದ ಕೊಟ್ರೇಶಪ್ಪ, ಪ್ರದೀಪ್ ಕೆ, ನಾಗರಾಜ, ರವಿನಾಯ್ಕ ಮತ್ತು ರವಿಕುಮಾರ್ ಪಾಲ್ಗೊಂಡಿದ್ದರು.

ಉಳಿದಂತೆ ದಾಳಿ ಸಂದರ್ಭದಲ್ಲಿ ಆರೋಪಿಯ ಮನೆಯಲ್ಲಿ 7 ಸಿಂಗಲ್ ಬ್ಯಾರಲ್ ನಾಡಬಂದೂಕು ಮತ್ತು ಅವುಗಳ ತಯಾರಿಕೆಗೆ ಸಂಬಂಧಿಸಿದ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಆರೋಪಿಯನ್ನು ಕೋರ್ಟ್ಗ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

Shikaripura Illegal Country Made Gun Factory Raided

[su_image_carousel source=”media: 31882,31883,31884″ controls_style=”light” crop=”16:9″ target=”self”]

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಚುನಾವಣೆಗಾಗಿ ಹೊಸ ಟೆಕ್ನಿಕ್​ ಬಳಸಿದ ಶಿವಮೊಗ್ಗ ಮಹಾನಗರ ಪಾಲಿಕೆ! ಏನದು ನೋಡಿ

ಶಿಕಾರಿಪುರದಲ್ಲಿ ಅಕ್ರಮ ನಾಡಬಂದೂಕು ತಯಾರಿಕಾ ಘಟಕದ ಮೇಲೆ ದಾಳಿ: 7 ಬಂದೂಕು ವಶ, ಆರೋಪಿ ಬಂಧನ Shikaripura Illegal Country Made Gun Factory Raided: 7 Weapons Seized, Accused Arrested
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor