ಟಾಪ್​ಗೆ ಹಾಕಿದ್ದ ಟೇಪ್​ನಿಂದ ಸಿಕ್ಕಿಬಿದ್ದ ಆಟೋ ಚಾಲಕ! ಬೊಮ್ಮನಕಟ್ಟೆ ಚಾನಲ್​ ಏರಿ ಮೇಲಿನ ಕ್ರೈಂನ ಸತ್ಯಕಥೆ

ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಪೊಲೀಸರು ಜಸ್ಟ್ 12 ಗಂಟೆಯಲ್ಲಿ ಕೇಸ್​ವೊಂದನ್ನ ಬಗೆಹರಿಸಿದ್ದರು. ಅದನ್ನ ಮಲೆನಾಡು ಟುಡೆ ಕೂಡ ಮಂಗಳಮುಖಿಯನ್ನು ಆಟೋದಲ್ಲಿ ಕರೆದೊಯ್ದು ಸುಲಿಗೆ 12 ಗಂಟೆಯಲ್ಲಿ ಆರೋಪಿ ಅರೆಸ್ಟ್ ಎಂಬ ಟೈಟಲ್​ನಲ್ಲಿ ಸುದ್ದಿ ಮಾಡಿತ್ತು. ಈ ಸುದ್ದಿಯಲ್ಲಿ ಕುತೂಹಲದ ದೃಷ್ಟಿಯಿಂದ ಕೇಸ್​ ಕೇಲವ 12 ಗಂಟೆಯಲ್ಲಿ ಬಗೆಹರಿದಿದ್ದೇಗೆ? ಎಂಬ ಪ್ರಶ್ನೆಯನ್ನ ಇಟ್ಟುಕೊಂಡು ಮಲೆನಾಡು ಟುಡೆಯ ಜೆಪಿ ಎನ್​ಕ್ವೈರಿ ಮಾಡಿದ್ರು. ಆಗ ಸಿಕ್ಕಿದ್ದು ರೋಚಕ ಅದೃಷ್ಟದ ತನಿಖಾ ಸುದ್ದಿ!

ಮಂಗಳಮುಖಿಯ ಸುಲಿಗೆ

ಸಾಮಾನ್ಯವಾಗಿ ಮಂಗಳಮುಖಿಯರು ಎಂದರೆ ಯಾರು ಅಷ್ಟಾಗಿ ಅವರ ವಿರುದ್ಧವಾಗಿ ಹೋಗುವುದಿಲ್ಲ! ಅವರುಗಳ ಮೇಲಿನ ಗೌರವಕ್ಕೋ ಅಥವಾ ಇತರೇ ಕಾರಣಕ್ಕೋ ವಿಶೇಷವಾಗಿ ಕಾಣುತ್ತಾರೆ. ಆದರೆ ಕಳೆದ ಏಪ್ರಿಲ್ 24 ನೇ ತಾರೀಖು, ರಾತ್ರಿ 1 ಗಂಟೆ ಸುಮಾರಿಗೆ ಮಂಗಳಮುಖಿಯೊಬ್ಬರನ್ನ ಆಟೊದಲ್ಲಿ ಬೊಮ್ಮನಕಟ್ಟೆಗೆ ಕರೆದೊಯ್ದಿದ್ದ ಇಬ್ಬರು, ಆಕೆಯನ್ನು ಸುಲಿಗೆ ಮಾಡಿದ್ದರು. ಈ ಕೇಸ್​ನಲ್ಲಿ 25 ಕ್ಕೆ ದೂರು ಪಡೆದುಕೊಂಡ ವಿನೋಬನಗರ ಪೊಲೀಸರು, ಜಸ್ಟ್ 12 ಗಂಟೆಯೊಳಗಾಗಿ ಕೇಸ್ ಮುಗಿಸಿ ಆರೋಪಿಗಳನ್ನ ಹಿಡಿದು, ಮಾಲ್ ಸೀಜ್ ಮಾಡಿದ್ದಾರೆ. ಹೇಗೆ? ಎನ್ನುವ ಕುತೂಹಲ ನಿಮಗೂ ಇರಬಹುದಾದರೆ, ಅದರ ಬಗ್ಗೆಯೇ ಹೇಳುತ್ತೇವೆ ಕೇಳಿ..

ಸ್ನೇಹಿತೆ ಮನೆಗೆ ಹೊರಟಿದ್ದರು

24 ನೇ ತಾರೀಖು ಬಸ್ ನಿಲ್ದಾಣದಿಂದ ಮಂಗಳಮುಖಿಯೊಬ್ಬರು ಬೊಮ್ಮನಕಟ್ಟೆಯಲ್ಲಿರುವ ತಮ್ಮ ಸ್ನೇಹಿತೆಯ ಮನೆಗೆ ಹೋಗಲು ಆಟೋ ಹತ್ತಿದ್ದರು. ಆಟೋದಲ್ಲಿ ಚಾಲಕ ಮತ್ತು ಆತನ ಸ್ನೇಹಿತನೊಬ್ಬ ಇದ್ದ. ಬಸ್​ಸ್ಟಾಪ್​ನಿಂದ ಬೊಮ್ಮನಕಟ್ಟೆಯ ನಡುವಿನ ಪ್ರಯಾಣದ ವೇಳೆ, ಇಬ್ಬರು ಸ್ನೇಹಿತರು ಮಂಗಳಮುಖಿಯ ಜೊತೆ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯ ನಡುವೆ ಒಬ್ಬಾತ ಮಂಗಳಮುಖಿಯ ಬಳಿ ಅನುಚಿತವಾಗಿ ಮಾತನಾಡಿದ್ದಾನೆ. ಅಲ್ಲದೆ ಒಬ್ಬರ ನಂಬರ್ ಕೇಳಿದ್ದ. ಅದಕ್ಕೆ ಮಂಗಳಮುಖಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾನಲ್ ಏರಿ ಬಳಿ ಸುಲಿಗೆ

ಹೀಗಾಗಿ ಸಿಟ್ಟಿಗೆದ್ದ ಆಟೋ ಚಾಲಕ ಹಾಗೂ ಇನ್ನೊಬ್ಬ ಮಂಗಳಮುಖಿಯನ್ನು ಬೊಮ್ಮನಕಟ್ಟೆಯ ಚಾನಲ್ ಏರಿ ಬಳಿ ಕರೆದೊಯ್ದು, ಹೆದರಿಸಿ ಬೆದರಿಸಿ ಆಕೆಯನ್ನು ಸುಲಿಗೆ ಮಾಡಿದ್ದರು. ಮಂಗಳಮುಖಿಯ ಬಳಿ ಇದ್ದ ವಿವೋ ಮೊಬೈಲ್ ಮತ್ತು 430 ರೂಪಾಯಿ ಕ್ಯಾಶ್​ ಕಸಿದುಕೊಂಡು ಪರಾರಿಯಾಗಿದ್ದರೆ.

ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು

ಈ ವಿಚಾರದ ಬಗ್ಗೆ ದೈರ್ಯ ಮಾಡಿದ ಮಂಗಳಮುಖಿ ವಿನೋಬನಗರ ಪೊಲೀಸ್ ಸ್ಟೇಷನ್​ಗೆ ಬಂದು ದೂರು ನೀಡಿದ್ದರು. ಆರಂಭದ ಹಂತದಲ್ಲಿ ಸೀರಿಯಸ್ ಅನಿಸದ ಪ್ರಕರಣ, ಮಂಗಳಮುಖಿಯನ್ನ ವಿಚಾರಿಸುತ್ತಾ ಹೋದಂತೆ ಗಂಭೀರ ಸ್ವರೂಪ ಪಡೆದುಕೊಂಡಿತು. ದುಡ್ಡಿನ ವಿಚಾರಕ್ಕಿಂತಲೂ, ನಡೆದ ಕ್ರೈಂ ಬಗ್ಗೆ ಸೀರಿಯಸ್ ನೋಟ್ ಮಾಡಿಕೊಂಡ ಎಸ್​ಐ ತಿರುಮಲೇಶ್​ ಆಂಡ್ ಟೀಂ ಆಕ್ಷನ್​ಗೆ ಇಳಿದಿದೆ.

ಸಿಸಿ ಕ್ಯಾಮರಾದಲ್ಲಿ ಸಿಗದ ಕ್ಲ್ಯೂ

ಮೊದಲು ಮಂಗಳಮುಖಿ ಆಟೋ ಹತ್ತಿದ ಸ್ಥಳದಿಂದ ಶುರುಮಾಡಿ ಬೊಮ್ಮನ ಕಟ್ಟೆಯವರೆಗೂ ಸಿಸಿ ಕ್ಯಾಮರಾಗಳನ್ನು ಕ್ರೈಂ ಟೀಂ ತಲಾಶ್ ಮಾಡಿದೆ. ಆದರೆ, ಏನೇ ಮಾಡಿ ಎಷ್ಟೆ ತಡಕಾಡಿದ್ರೂ ಪೊಲೀಸರಿಗೆ ಚಿಕ್ಕ ಕ್ಲ್ಯೂ ಸಿಕ್ಕಿರಲಿಲ್ಲ. ಈ ಮಧ್ಯೆ ಒಂದು ಸಣ್ಣ ನಿರ್ಲಕ್ಷ್ಯವೇ ಮಾಡಬಹುದಾಗಿದ್ದ ಸಂಗತಿಯೊಂದು ಇಡೀ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿತ್ತು. ಅದಕ್ಕೆ ಹೇಳಿದ್ದು ಇದೊಂದು ರೋಚಕ ಅದೃಷ್ಟದ ತನಿಖಾ ಸುದ್ದಿ ಎಂದು.

ಟೇಪ್​ ಹಾಕಿದ್ದ ತ್ಯಾಪೆ ಆಟೋ ಚಾಲಕ ನನ್ನ ಹಿಡಿದುಕೊಡ್ತು

ಸಿಸಿ ಕ್ಯಾಮರಾದಲ್ಲಿ ಮಂಗಳಮುಖಿ ಹತ್ತಿದ್ದ ಆಟೋದ ಟಾಪ್​ನಲ್ಲಿ ಸಣ್ಣ ತ್ಯಾಪೆ ಇತ್ತು, ಟೇಪ್ ಹಾಕಿ ತ್ಯಾಪೆಯನ್ನು ಮುಚ್ಚಲಾಗಿತ್ತು. ಏನೇನು ಕ್ಲೂ ಸಿಗದೆ ಹುಡುಕಾಡುತ್ತಿದ್ದ ಪೊಲೀಸರು ಟೇಪ್ ಹಾಕಿದ್ದ ತ್ಯಾಪೆಯನ್ನು ತಮ್ಮ ಕ್ಲ್ಯೂ ಆಗಿಸಿಕೊಂಡರು. ಅಂತಹ ಆಟೋಗಳು ಎಷ್ಟಿವೆ? ಯಾವುದಿವೆ? ಯಾವ ಏರಿಯಾದಲ್ಲಿದೆ ಎಂಬ ಹುಡುಕಾಟ ನಡೆಸಿದ್ರು. ಈ ಮಧ್ಯೆ ವಿನೋಬನಗರ ಕ್ರೈಂ ತಂಡದ ಸಿಬ್ಬಂದಿಯೊಬ್ಬರಿಗೆ ತ್ಯಾಪೆ ಹಾಕಿದ್ದ ಆಟೋವೊಂದು ಕಾಣ ಸಿಕ್ಕಿದೆ. ತಕ್ಷಣವೇ ಅವರು ತಮ್ಮ ಟೀಂಗೆ ಅಲರ್ಟ್ ಮೆಸೇಜ್​ ಕಳುಹಿಸಿದ್ದರು.

ತನಿಖೆಯ ಕ್ಲೈಮ್ಯಾಕ್ಸ್ , ಸಿಕ್ಕಿಬಿದ್ದ ಆಟೋ ಚಾಲಕ

ಯಾವಾಗ ಟೇಪ್​ನಲ್ಲಿ ತ್ಯಾಪೆಹಾಕಿದ್ದ ಆಟೋ ಪತ್ತೆಯಾಗಿದೆ ಎಂಬ ವಿಚಾರ ಗೊತ್ತಾಯ್ತೋ ತಕ್ಷಣವೇ ಇಡೀ ಟೀಂ ಆ ಆಟೋದ ಹಿಂದೆ ಬಿದ್ದು, ಆಟೋ ಚಾಲಕನನ್ನು ಸ್ಟೇಷನ್​ಗೆ ಕರೆತಂದು ವಿಚಾರಿಸಿದ್ದಾರೆ. ಮೊದಲು ಆರೋಪಿಯ ಗುರುತು ಗ್ಯಾರಂಟಿ ಮಾಡಿಕೊಂಡ ಪೊಲೀಸರು, ಆಮೇಲೆ ಎನ್​​​ಕ್ವೈರಿ ಆರಂಭಿಸಿದ್ದರು. ತನಿಖೆಯ ಆರಂಭದಲ್ಲಿಯೇ ಆರೋಪಿಯು ಹೌದು ಸರ್ ನಾನೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದ.

ಬಾಟಮ್ ಸಿಪ್

ಇಷ್ಟಾದ ಮೇಲೆ ಇನ್ನೇನಿದೆ.. ಕೇಸ್​ ಖಲ್ಲಾಸ್, ತಕ್ಷಣವೇ ಮಹಜರ್​ ನಡೆಸಿದ ಪೊಲೀಸರು, ಅರೆಸ್ಟ್​ ಪ್ರಕ್ರಿಯೆ ನಡೆಸಿ ಆರೋಪಿಯನ್ನು ಬಂಧಿಸಿ, ಆಟೋ, ಮೊಬೈಲ್ ಹಾಗೂ ಕ್ಯಾಶ್ ಸೀಜ್ ಮಾಡಿದ್ರು. ಈ ಮೂಲಕ ಮಂಗಳಮುಖಿಗೆ ನ್ಯಾಯವನ್ನು ಒದಗಿಸಿದ್ರು. ಜಸ್ಟ್​ 12 ಗಂಟೆಯಲ್ಲಿ ಕೇಸ್​ ಕ್ಲಿಯರ್ ಮಾಡಿದ ಸಾಧನೆಗಾಗಿ ಎಸ್​ಪಿ ನಿಖಿಲ್​ ಬಿ ಬಳಿಯಲ್ಲಿ ವೆಲ್​ಡನ್​ ಎನಿಸಿಕೊಂಡ್ರು. ಅಷ್ಟೆ ಅಲ್ಲದೆ, ಇಡೀ ಕ್ರೈಂ ತಂಡ ಕರ್ತವ್ಯದ ಶ್ರಮಕ್ಕೆ ಸಿಗಲೇಬೇಕಾದ ಆತ್ಮತೃಪ್ತಿಯನ್ನೊಳಗೊಂಡ ಸಮಾಧಾನದ ನಗು ಬೀರಿದ್ರು!..

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಟಾಪ್​ಗೆ ಹಾಕಿದ್ದ ಟೇಪ್​ನಿಂದ ಸಿಕ್ಕಿಬಿದ್ದ ಆಟೋ ಚಾಲಕ! ಬೊಮ್ಮನಕಟ್ಟೆ ಚಾನಲ್​ ಏರಿ ಮೇಲಿನ ಕ್ರೈಂನ ಸತ್ಯಕಥೆ How did Shivamogga police track down the auto driver and his accomplice who robbed a transgender person near Bommanakatte late at night using CCTV
ಟಾಪ್​ಗೆ ಹಾಕಿದ್ದ ಟೇಪ್​ನಿಂದ ಸಿಕ್ಕಿಬಿದ್ದ ಆಟೋ ಚಾಲಕ! ಬೊಮ್ಮನಕಟ್ಟೆ ಚಾನಲ್​ ಏರಿ ಮೇಲಿನ ಕ್ರೈಂನ ಸತ್ಯಕಥೆ How did Shivamogga police track down the auto driver and his accomplice who robbed a transgender person near Bommanakatte late at night using CCTV