ಹುಲಿ ಉಗುರಿನ ಹಾರ | ಅರಣ್ಯ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಇಬ್ಬರು! ಮತ್ತಿಬ್ಬರು ಎಸ್ಕೇಪ್​

Here is the operation carried out by Mudigere Zonal Forest Officers ಮೂಡಿಗೆರೆ ವಲಯ ಅರಣ್ಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ಇಲ್ಲಿದೆ

ಹುಲಿ ಉಗುರಿನ ಹಾರ | ಅರಣ್ಯ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಇಬ್ಬರು! ಮತ್ತಿಬ್ಬರು ಎಸ್ಕೇಪ್​

KARNATAKA NEWS/ ONLINE / Malenadu today/ Oct 24, 2023 SHIVAMOGGA NEWS

ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರೆಸ್ಟ್​ ಮಾಡಿದ ಸುದ್ದಿ ನಿನ್ನೆ ದೊಡ್ಡಮಟ್ಟಿಗೆ ಚರ್ಚೆಯಾಗಿತ್ತು. ಇದರ ಬೆನ್ನಲ್ಲೆ ಚಿಕ್ಕಮಗಳೂರು ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಉಗುರು ಸಂಗ್ರಹಿಸಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. 

ಮೂಡಿಗೆರೆ ರೇಂಜ್​ನಲ್ಲಿ ಭಾರತಿ ಬೈಲ್ ಕುಂಡ್ರಾದ ನಿವಾಸಿ ಸತೀಶ್ ಬಳಿ ಬೆಳ್ಳಿ ಸರದಲ್ಲಿ ಹುಲಿ ಉಗುರು ಪತ್ತೆಯಾಗಿದೆ. ಈತ, ಮತ್ತೋರ್ವ ಆರೋಪಿ ಹುಲ್ಲೇಮನೆ ಕುಂದೂರಿನ ಕೆ.ಎಸ್.ರಂಜಿತ್ ಜೊತೆ ಸೇರಿ ಹುಲಿ ಉಗುರು ಸಂಗ್ರಹಿಸಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಲೇ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ಪ್ರಕರಣ ಸಂಬಂಧ ಇನ್ನಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದು, ಹುಲಿ ಉಗುರನ್ನ ಏತಕ್ಕಾಗಿ ಸಂಗ್ರಹಿಸಿದ್ದರು ಎಂಬುದು ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದೆ.

  

ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಹಾಗೂ ಮೂಡಿಗೆರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು ಅವರ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ವಲಯ ಅರಣ್ಯ ಅಧಿಕಾರಿಗಳಾದ ಚರಣ್ ಕುಮಾರ್, ಆಲ್ದೂರು ವಲಯ ಅರಣ್ಯ ಅಧಿಕಾರಿ ಹರೀಶ್,ಮೂಡಿಗೆರೆ ಉಪ ವಲಯ ಅರಣ್ಯ ಅಧಿಕಾರಿಗಳಾದ ಶಿವಕುಮಾರ್,ಚೇತನ್ ಕುಮಾರ್,  ಆರ್.ಹರೀಶ್,ಚೇತನ್ ಕುಮಾರ್ ಸುಮಂತ್ ಭಾಗವಹಿಸಿದ್ದರು


ಇನ್ನಷ್ಟು ಸುದ್ದಿಗಳು 

ದುರ್ಗಾಷ್ಟಮಿಯ ದಿನದಂತೆ 3 ಕಡೆಗಳಲ್ಲಿ ಕಳ್ಳತನ | ಎರಡು ದೇಗುಲದ ಭೀಗ ಮುಗಿದ ಕಳ್ಳರು

ರಾಗಿಗುಡ್ಡ ಕೇಸ್​ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್​ !

ಭದ್ರಾವತಿ ಕೇಸ್ | ಕೊಲೆಯಾದ ಟಿಪ್ಪು ನಗರ ನಿವಾಸಿ ಬಗ್ಗೆ SP ಮಿಥುನ್ ಕುಮಾರ್ ಹೇಳಿದ್ದೇನು?