KARNATAKA NEWS/ ONLINE / Malenadu today/ Sep 3, 2023 SHIVAMOGGA NEWS
ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಆಕ್ಸಿಡೆಂಟ್ ಮಾಡಿ ಕೊಲೆ
ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿ, ಇನ್ನೊಬ್ಬರ ಸಂಸಾರ ಹಾಳು ಮಾಡಬೇಡ ಎಂದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿರುವ ಘಟನೆ ಬಗ್ಗೆ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ವರದಿಯಾಗಿದೆ. ಚಂದ್ರನಾಯ್ಕ್ ಎಂಬವರು ಕೊಲೆಯಾದ ದುರ್ಧೈವಿ. ಈ ಮೊದಲು ಪ್ರಕರಣವನ್ನು ಹಿಟ್ ಆ್ಯಂಡ್ ರನ್ ಕೇಸ್ ಎಂದುಕೊಳ್ಳಲಾಗಿತ್ತು. ಆನಂತರ ಗಾಯಾಳು ಹೇಳಿದ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ಇದೊಂದು ಕೊಲೆ ಎಂದು ಪತ್ತೆಮಾಡಿದ್ದಾರೆ.
ಮೀನಿನ ವಿಷಾನಿಲಕ್ಕೆ ಇಬ್ಬರು ಅಸ್ವಸ್ಥ
ಬೋಟಿನಿಂದ ಮೀನು ತೆಗೆಯುವಾಗ ಹೊರಸೂಸಿದ ವಿಷಾನಿಲದಿಂದ ಈಶ್ವರ್ ಮಲ್ಪೆ ಸೇರಿ ಇಬ್ಬರು ಅಸ್ವಸ್ಥರಾಗಿದ್ದಾರೆ. ಉಡುಪಿ ಜಿಲ್ಲೆ ಮಲ್ಪೆಯಲ್ಲಿ ಈ ಘಟನೆ ಸಂಭವಿಸಿದೆ. ಮೊದಲು ಸ್ಟೋರೆಜ್ನಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದ ಯುವಕನನ್ನು ಮೇಲಕ್ಕೆತ್ತಲು ಈಶ್ವರ್ ಮಲ್ಪೆ ಬೋಟ್ ನ ಸ್ಟೋರೇಜ್ ಗೆ ಇಳಿದಿದ್ದಾರೆ. ಈ ವೇಳೆ ಅವರಿಗೂ ಉಸಿರಾಟದ ಸಮಸ್ಯೆಯಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಬಳಿಕ ಸಾವರಿಸಿಕೊಂಡು ಅವರು ಇನ್ನೊಬ್ಬನನ್ನು ಸಹ ಮೇಲಕ್ಕೆತ್ತಿಕೊಂಡು ಬಂದಿದ್ದಾರೆ.
ಗರ್ಭಕೋಶದ ಗಡ್ಡೆ ಆಪರೇಷನ್ ವೇಳೆ ಮಹಿಳೆ ಸಾವು
ತುಮಕೂರು ನಗರದಲ್ಲಿ ಮಕ್ಕಳಾಗಿಲ್ಲ ಎಂದು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಗರ್ಭಕೋಶಕ್ಕೆ ಸಂಬಂಧಿಸಿದ ಆಪರೇಷನ್ ವೇಳೆ ಸಾವನ್ನಪ್ಪಿದ್ದಾರೆ. 30 ವರ್ಷದ ಮಾನಸ ಮೃತ ದುರ್ದೈವಿ. ಅವರ ಕುಟುಂಬಸ್ಥರು ಮಹಿಳೆ ಸಾವಿಗೆ ಆಸ್ಪತ್ರೆಯವರು ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಇನ್ನಷ್ಟು ಸುದ್ದಿಗಳು
SHIVAMOGGA AIRPORT ನಿಂದ ವಿಮಾನಯಾನ! ಪ್ರತಿ ಟಿಕೆಟ್ಗೆ 500 ರೂಪಾಯಿ ಸಬ್ಸಿಡಿ!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ಇಂಡಿಗೋ ಪ್ಲೈಟ್