ಶಿವಮೊಗ್ಗ ನಗರದಲ್ಲಿ ನಿರ್ಮಾಣವಾಗುತ್ತಿರುವ ವಿವಿಧ ಕಾಮಗಾರಿಗಳು ಇದೇ ಫೆಬ್ರವರಿ 27 ಕ್ಕೆ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಸಾವಿರಾರು ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ಧಾರೆ. ಈ ಪೈಕಿ ಶಿವಮೊಗ್ಗ ನಗರದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆಗಳು ಮುಖ್ಯವಾದವು. ಸದ್ಯ ವಿದ್ಯಾನಗರದ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ (Railway Over Bridge) ಕಾಮಗಾರಿಯ ಡ್ರೋಣ್ ಫೋಟೊಗಳು ವೈರಲ್ ಆಗುತ್ತಿದೆ.
ಹೊಲಕ್ಕೆ ಬಿದ್ದ ಬೆಂಕಿ! 10 ಲಕ್ಷ ರೂಪಾಯಿ ನಷ್ಟ!
ಸುತ್ತಿಬಳಸಿ ಸಾಗುವ ಅನುಭವ ನೀಡುವ ಈ ಮೇಲ್ಸೇತುವೆ ಹೊಳೆಹೊನ್ನೂರು ರಸ್ತೆ ಹಾಗೂ ಬಿ.ಹೆಚ್.ರೋಡ್ಗೆ ಸಂಪರ್ಕ ರಸ್ತೆಯಾಗಿದೆ. ಇದು ಉದ್ಘಾಟನೆಗೊಂಡ ನಂತರ, ಈ ಭಾಗದಲ್ಲಿನ ಜನರು ನೇರವಾಗಿ ರೈಲ್ವೆ ಗೇಟ್ನ ಅಡೆತಡೆಯಿಲ್ಲ ಹೊಳೆಹೊನ್ನೂರು ರಸ್ತೆಯ ಕಡೆಗೆ ಸಾಗಬಹುದಾಗಿದೆ. ಪರಿಣಾಮ ಟ್ರಾಫಿಕ್ ಸಮಸ್ಯೆಯು ಬಗೆಹರಿಯಲಿದೆ. ಸುಮಾರು 40 ಕೋಟಿಯ ಕಾಮಗಾರಿ ಇದಾಗಿದೆ.
ಅತ್ತ ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಗೇಟ್ ಬಳಿ ನಡೆಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೂಡ ಅಂತಿಮ ಹಂತಕ್ಕೆ ಬಂದು ತಲುಪಿದೆ. ಕಳೆದೊಂದು ತಿಂಗಳಿನಿಂದ ಕಾಮಗಾರಿ ಗೆ ವೇಗ ನೀಡಲಾಗಿದ್ದು, ಹೊರರಾಜ್ಯಗಳ ಕಾರ್ಮಿಕರನ್ನು ಬಳಸಿಕೊಂಡು ಹಗಲಿರುಳು ಮೇಲ್ಸೆತುವೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
