Education Minister ನವದೆಹಲಿ: ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ತೀವ್ರಗೊಂಡ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶಿವಮೊಗ್ಗ : 23 ವರ್ಷದ ಯುವತಿ ಕಾಣೆ : ಪತ್ತೆಗಾಗಿ ಪೊಲೀಸ್ ಪ್ರಕಟಣೆ
ವಿದ್ಯಾರ್ಥಿಗಳು ಹಾಗೂ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್ ಅಭಿಯಾನದಲ್ಲಿ ಶಿಕ್ಷಣ ಸಚಿವರ ಪದತ್ಯಾಗವೇ ಪ್ರಮುಖ ಆಗ್ರಹವಾಗಿತ್ತು. ಸಚಿವರು ರಾಜೀನಾಮೆ ನೀಡದ ಹೊರತು ಸರ್ಕಾರದ ಜೊತೆ ಯಾವುದೇ ಹಂತದ ಮಾತುಕತೆ ನಡೆಸುವುದಿಲ್ಲ ಎಂದು ಹೋರಾಟಗಾರರು ಹಾಗೂ ವಿಪಕ್ಷಗಳು ಕಠಿಣ ಪಟ್ಟು ಹಿಡಿದಿದ್ದವು.
ತಮ್ಮ ನಿರ್ಧಾರದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿರುವ ಧರ್ಮೇಂದ್ರ ಪ್ರಧಾನ್, ದೇಶಾದ್ಯಂತ ಇರುವ ರಾಷ್ಟ್ರವಿರೋಧಿ ಶಕ್ತಿಗಳು ಈ ಸೂಕ್ಷ್ಮ ಸನ್ನಿವೇಶದ ದುರ್ಲಾಭ ಪಡೆಯದಂತೆ ತಡೆಯಲು ಈ ಹೆಜ್ಜೆ ಇಟ್ಟಿರುವುದಾಗಿ ತಿಳಿಸಿದ್ದಾರೆ. ದೇಶದ ಐಕ್ಯತೆ ಕಾಯ್ದುಕೊಳ್ಳಲು ಹಾಗೂ ಲಕ್ಷಾಂತರ ವಿದ್ಯಾರ್ಥಿಗಳು ಕಾನೂನು ಸಂಕಷ್ಟಕ್ಕೆ ಸಿಲುಕದೆ ತಮ್ಮ ಶೈಕ್ಷಣಿಕ ವೃತ್ತಿಜೀವನದತ್ತ ಗಮನಹರಿಸಲಿ ಎಂಬ ಹಿತದೃಷ್ಟಿಯಿಂದ ನಿರ್ಗಮಿಸುತ್ತಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
