SHIVAMOGGA NEWS TODAY

ತ್ಯಾವರೆಕೊಪ್ಪ ನೀರಾನೆ ದಾಳಿ: ವೆಟರ್ನರಿಗೆ ಕಳಿಸೋಕೆ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ – ಡಾ. ಸಮೀಕ್ಷಾ ತಾಯಿ ಕಣ್ಣೀರು

Prathapa thirthahalli ನವೀಕರಣ: 02 ಏಪ್ರಿಲ್ 2026, 3:25 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Dr. Samiksha Reddy ಶಿವಮೊಗ್ಗ :ತ್ಯಾವರೇ ಕೊಪ್ಪದಲ್ಲಿ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿಗೆ ಡಾ, ಸಮೀಕ್ಷಾ ರೆಡ್ಡಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ತಾಯಿ ಶೈಲಜಾ ರೆಡ್ಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. 

ಅಪ್​ಡೇಟ್ ಆದ ಶಿವಮೊಗ್ಗ ಪೊಲೀಸ್! ಏಪ್ರಿಲ್​ನಿಂದಲೇ ಜಾರಿ! ಹೊರಬಿದ್ದ ಪ್ರಕಟಣೆ ಓದಿ

ಏಪ್ರಿಲ್ 1 ರಂದು ನಗರದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷಾಗೆ ಪ್ರಾಣಿಗಳ ಮೇಲೆ ಅಪಾರ ಅನುಕಂಪವಿತ್ತು. ಆಕೆ ಪಶುವೈದ್ಯೆಯಾಗಬೇಕೆಂದು ಚಿಕ್ಕಂದಿನಿಂದಲೇ ಕನಸು ಕಂಡಿದ್ದಳು. ಅವಳು ಈ ವೃತ್ತಿಯನ್ನು ಆರಿಸಿಕೊಂಡಿದ್ದು ಹಣ ಗಳಿಸಲಿಕ್ಕಲ್ಲ, ಅದೊಂದು ಅವಳ ಪಾಲಿನ ಪ್ಯಾಷನ್ ಆಗಿತ್ತು. ಆದರೆ ಆಸೆಯೇ ಅವಳ ಪಾಲಿಗೆ ಮೃತ್ಯುವಾಯಿತು ಎಂದು ಕಣ್ಣೀರಿಟ್ಟರು.

ಮೃಗಾಲಯದ ಕಾರ್ಯವೈಖರಿಯನ್ನು ಪ್ರಶ್ನಿಸಿದ ಶೈಲಜಾ ರೆಡ್ಡಿ, ರಾತ್ರಿ 10 ಗಂಟೆಯ ವೇಳೆಗೆ ನನ್ನ ಮಗಳನ್ನು ಅಂತಹ ಅಪಾಯಕಾರಿ ಜಾಗಕ್ಕೆ ಕೆಲಸಕ್ಕೆ ಕಳುಹಿಸುವ ಅವಶ್ಯಕತೆ ಏನಿತ್ತು? ಅಲ್ಲಿನ ಅಧಿಕಾರಿಗಳ ಬೇಜವಾಬ್ದಾರಿತನವೇ ಇಂದಿನ ಈ ಅನ್ಯಾಯಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೃಗಾಲಯದಲ್ಲಿ ಕಟ್ಟುನಿಟ್ಟಾದ ಎಸ್‌ಒಪಿ (SOP) ನಿಯಮಗಳನ್ನು ಪಾಲಿಸದಿರುವುದೇ ಈ ದುರಂತಕ್ಕೆ ಮೂಲ ಕಾರಣ ಎಂದು ಅವರು ದೂರಿದರು.

ನನ್ನ ಮಗಳ ಜೀವನವಂತೂ ಮುಗಿದುಹೋಯಿತು. ಆದರೆ ಈ ಘಟನೆಯಿಂದಾಗಿ ಇನ್ನು ಮುಂದೆ ಪೋಷಕರು ತಮ್ಮ ಮಕ್ಕಳನ್ನು ಪಶುವೈದ್ಯಕೀಯ ಶಿಕ್ಷಣಕ್ಕೆ ಕಳುಹಿಸಲು ಹೆದರುವಂತಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ನಿರ್ವಹಿಸಬೇಕು ಮತ್ತು ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

Dr. Samiksha Reddy Case Mother Blames Management

Dr. Samiksha Reddy Case Mother Blames Management
Dr. Samiksha Reddy Case Mother Blames Management
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.