SAGARA

ಸಾಗರದ ರೂಫ್ ಟಾಪ್ ಕ್ಯಾಫೆಯಲ್ಲಿ ಬಿಹಾರದ ಕಾರ್ಮಿಕನ ಕೊಲೆ! ಎಸ್​ಪಿ ನಿಖಿಲ್ ಬಿ ಹೇಳಿಕೆ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡು ಟುಡೆ ಸುದ್ದಿ / ಸಾಗರ / ಹಣ ಕಳವು ಮಾಡಿದ ಶಂಕೆಯ ಹಿನ್ನೆಲೆಯಲ್ಲಿ ಮಾಲೀಕನೊಬ್ಬ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸಾಗರದಲ್ಲಿ ನಡೆದಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾಹಿತಿ ನೀಡಿದ್ದಾರೆ.

ಸಾಗರ ಟೌನ್​ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ
Sagara Murder Case Cafe Owner Kills Bihar Worker Over Suspected Theft

ಭದ್ರಾವತಿ ಶಿವಮೊಗ್ಗ ಸಾಗರ, ಇವತ್ತಿನ ಕ್ರೈಂ ಸುದ್ದಿ!

ಬಿಹಾರ ರಾಜ್ಯದ ಪಾಟ್ನಾ ಸಮೀಪದ ಬಲ್ಪುರ ಮೂಲದ 25 ರಿಂದ 26 ವರ್ಷ ವಯಸ್ಸಿನ ಪಿಂಕು ಎಂಬಾತನೇ ಕೊಲೆಯಾದ ಯುವಕ. ಸಾಗರ ಮೂಲದ ಇಮ್ರಾನ್ ಎಂಬಾತನೇ ಕೊಲೆಗೈದ ಆರೋಪಿ. ಇಮ್ರಾನ್ ಸಾಗರದಲ್ಲಿ ರೂಫ್ ಟಾಪ್ ಕ್ಯಾಫೆ ಹಾಗೂ ಗೇಮಿಂಗ್ ಝೋನ್ ನಡೆಸುತ್ತಿದ್ದ. ಮೃತ ಪಿಂಕು ಹಾಗೂ ಆತನ ಸಂಬಂಧಿ ಸೂರಜ್ ಎಂಬುವವರು ಕಳೆದ 6 ತಿಂಗಳಿನಿಂದ ಅಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಹಾಗೂ ಮೃತನ ನಡುವೆ ಈ ಹಿಂದಿನಿಂದಲೂ ಸಣ್ಣಪುಟ್ಟ ವಿಚಾರಗಳಿಗೆ ವಾಗ್ವಾದಗಳಿದ್ದವು ಎಂದು ಎಸ್​ಪಿ ತಿಳಿಸಿದ್ದಾರೆ.

ಸಾಗರ ಟೌನ್​ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ

ನಿನ್ನೆ ಪಿಂಕು ಹಣ ಕಳವು ಮಾಡಿದ್ದಾನೆ ಎಂಬ ಶಂಕೆಯ ವಿಚಾರವಾಗಿ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿದೆ. ಆರೋಪಿ ಇಮ್ರಾನ್ ಈ ಬಗ್ಗೆ ಎರಡು ಮೂರು ಬಾರಿ ಪ್ರಶ್ನಿಸಿ, ದೊಣ್ಣೆಯಿಂದ ಕಾರ್ಮಿಕನಿಗೆ ಹಲವು ಬಾರಿ ನಿರ್ದಯವಾಗಿ ಥಳಿಸಿದ್ದಾನೆ. ಮುಂಜಾನೆ ಮತ್ತೆ ಆತನ ಕಪಾಳಕ್ಕೆ ಹೊಡೆದಿದ್ದು, ಈ ವೇಳೆ ಪಿಂಕು ಕುಸಿದು ಬಿದ್ದಿದ್ದಾನೆ. ಆತನ ದೇಹದ ಮೇಲೆ ದೊಣ್ಣೆಯಿಂದ ಹೊಡೆದ ಗಾಯದ ಗುರುತುಗಳು ಕಂಡುಬಂದಿವೆ. ಜೊತೆಗೆ, ಆತ ಹೈಡ್ರೇಶನ್ ಆಗಿದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿ ಪ್ರಾಣಾಪಾಯ ಸಂಭವಿಸಿದೆ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ ಎಂದು ಎಸ್ಪಿ ವಿವರಿಸಿದ್ದಾರೆ.

ಮಲೆನಾಡು ಟುಡೆಯ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ : ಮಲೆನಾಡು ಟುಡೆ

ಕೆಲಸಗಾರ ಕುಸಿದು ಬಿದ್ದ ತಕ್ಷಣ ಗಾಬರಿಗೊಂಡ ಆರೋಪಿ ಇಮ್ರಾನ್, ಮೃತದೇಹವನ್ನು ವಾಹನವೊಂದರಲ್ಲಿ ಹಾಕಿಕೊಂಡು ತಂದಿದ್ದಾನೆ. ಘಟನೆ ಕುರಿತು ಮಾಹಿತಿ ಲಭ್ಯವಾದ ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೆಯೇ ಘಟನಾ ಸ್ಥಳವನ್ನು ಮಹಜರ್ ನಡೆಸಲಾಗಿದೆ. ಪ್ರಸ್ತುತ ಆರೋಪಿಯು ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾನೆ.

ಎಸ್​ಪಿ ನಿಖಿಲ್​. ಬಿ. ಶಿವಮೊಗ್ಗ ಎಸ್​ಪಿ

ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೃತ್ಯದಲ್ಲಿ ಇಮ್ರಾನ್ ಒಬ್ಬನೇ ಭಾಗಿಯಾಗಿರುವುದು ಕಂಡುಬಂದಿದೆ. ಪ್ರಕರಣದಲ್ಲಿ ಬೇರೆಯವರ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ. ಮೃತನ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಆತನ ಸಂಬಂಧಿ ಸೂರಜ್ ಎಂಬಾತ ಈ ಬಗ್ಗೆ ದೂರು ದಾಖಲಿಸಿದ್ದಾನೆ

Sagara Murder Case Cafe Owner Kills Bihar Worker Over Suspected Theft
Sagara Murder Case Cafe Owner Kills Bihar Worker Over Suspected Theft

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ