SHIMOGA NEWS LIVE

ಅಪ್​ಡೇಟ್ ಆದ ಶಿವಮೊಗ್ಗ ಪೊಲೀಸ್! ಏಪ್ರಿಲ್​ನಿಂದಲೇ ಜಾರಿ! ಹೊರಬಿದ್ದ ಪ್ರಕಟಣೆ ಓದಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ /ಸಿಟಿಯಲ್ಲಿ ಮತ್ತೊಮ್ಮೆ ಟ್ರಾಫಿಕ್ ರೂಲ್ಸ್​ ಮತಷ್ಟು ಕಠಿಣಗೊಳ್ಳಲಿದೆ. ಈ ಸಂಬಂಧ  ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು (district police) ಮತ್ತೆ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ಶಿವಮೊಗ್ಗದಲ್ಲಿ ಈ ಹಿಂದೆಯೇ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ತಂತ್ರಾಂಶ ಜಾರಿಯಾಗಿತ್ತು. ಅದನ್ನ ಬಳಸಿಕೊಂಡು ಸ್ಮಾರ್ಟ್​ ಸಿಟಿ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಸವಾರರ ವಿರುದ್ಧ ಇ-ಚಲನ್ ವ್ಯವಸ್ಥೆ ಜಾರಿ ಮಾಡಲಾಗಿತ್ತು. ಇದೀಗ ಈ ಸಿಸ್ಟಮ್​ನ್ನ ಜಿಲ್ಲೆಯಾದ್ಯಂತ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆ ಮುಂಧಾಗಿದೆ. 

district police implementing the ITMS and GPS camera-based e-challan system

Shivamogga district police implementing the ITMS and GPS camera-based e-challan system
district police
  • 2026ರ ಏಪ್ರಿಲ್ ತಿಂಗಳಿನಿಂದಲೇ ಐಟಿಎಂಎಸ್ ಸಿಸ್ಟಮ್​ ಸ್ಟ್ರಿಟ್​ ಆಗಿ ಜಾರಿಯಾಗಲಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ಕೊಟ್ಟಿದೆ.  ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಹೊಸ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೆ ಬರಲಿವೆ. 
  • ವಿಸಿಬಲ್ ಅಫೆನ್ಸ್​ ಎಂದು ಕರೆಯಲಾಗುವ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವವರ ವಿರುದ್ಧ ಸ್ಥಳದಲ್ಲಿಯೇ ತಡೆದು ದಂಡ ಹಾಕಲಾಗುತ್ತದೆ. 
  • ಜಿಲ್ಲೆಯಾದ್ಯಂತ ಕರ್ತವ್ಯ ನಿರ್ವಹಿಸುವ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಜಿಪಿಎಸ್ ಆಧಾರಿತ ಕ್ಯಾಮೆರಾಗಳ ಮೂಲಕ ನಿಯಮ ಉಲ್ಲಂಘಿಸುವವರ ಭಾವಚಿತ್ರಗಳನ್ನು ಸೆರೆಹಿಡಿದು ಕೇಸ್ ದಾಖಲಿಸಲಿದ್ದಾರೆ.
  • ನಿಯಮ ಉಲ್ಲಂಘಿಸಿದವರ ಫೋಟೋಗಳನ್ನು ಐಟಿಎಂಎಸ್ ತಂತ್ರಾಂಶದಲ್ಲಿ ಅಳವಡಿಸಿ, ಇ-ಚಲನ್ ಮೂಲಕ ದಂಡದ ಪ್ರಕರಣಗಳನ್ನು ಮತ್ತಷ್ಟು ಖಚಿತವಾಗಿ ಹಾಗೂ ಕಟ್ಟುನಿಟ್ಟಾಗಿ ದಾಖಲಿಸಲಾಗತ್ತದೆ. 
  • ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಹಾಗೂ ಇತರರ ಪ್ರಾಣ ರಕ್ಷಣೆಗೆ ಸಹಕರಿಸಬೇಕು ಎಂದು ಇಲಾಖೆ ಸೂಚಿಸಿದೆ. 
  • ಇನ್ನೂ ವಾಹನ ಸವಾರರು ತಮ್ಮ ವಾಹನಗಳ ಮೇಲಿರುವ ಬಾಕಿ ದಂಡವನ್ನು ಪಾವತಿಸಲು ಹಾಗೂ ವಿವರಗಳನ್ನು ವೀಕ್ಷಿಸಲು ಹಾಗೂ ಪಾವತಿಸಲು ವಿವಿಧ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರು ದಂಡ ಪಾವತಿಸಬಹುದಾಗಿದೆ.
  • ಶಿವಮೊಗ್ಗ ಹಾಗೂ ಭದ್ರಾವತಿ ಸಂಚಾರ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯದಲ್ಲಿರುವ ಹಾಗೂ ಇ-ಚಲನ್ ಪಿಡಿಎ ಯಂತ್ರವನ್ನು ಹೊಂದಿರುವ ಎಎಸ್ಐ ಅಥವಾ ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಪೊಲೀಸ್ ಅಧಿಕಾರಿಗಳ ಬಳಿಯೂ ದಂಡ ಕಟ್ಟಲು ಅವಕಾಶವಿದೆ.
Shivamogga district police implementing the ITMS and GPS camera-based e-challan system

ಶಿವಮೊಗ್ಗ : ಅಸಲಿಗೆ ಅಡಿಕೆ ರೇಟು ಕರೆಕ್ಟ್​ ಆಗಿ ಎಷ್ಟಿದೆ!? ಏನಾಗ್ತಿದೆ?

ಆನ್‌ಲೈನ್ ಮೂಲಕ ದಂಡ ಪಾವತಿಸಲು ಇಚ್ಛಿಸುವವರು echallan.parivahan.gov.in/index/accused-challan ವೆಬ್‌ಸೈಟ್ ಲಿಂಕ್ ಬಳಸಿಕೊಂಡು ತಮ್ಮ ವಾಹನಗಳ ಮೇಲಿರುವ ಇ-ಚಲನ್ ವಿವರಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು ಮತ್ತು ದಂಡವನ್ನು ಪಾವತಿಸಲು ಅವಕಾಶವಿರುತ್ತದೆ.

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Why is the Shivamogga district police implementing the ITMS and GPS camera-based e-challan system to penalize traffic rule violators starting from April 2026?

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ