ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಉಪನ್ಯಾಸಕ! ದಾಖಲಾಯ್ತು ಮರ್ಡ*ರ್​ ಕೇಸ್! ಎಸ್​ಪಿ ನಿಖಿಲ್​ ಬಿ ಹೇಳಿದ್ದಿಷ್ಟು!

ಹಂಚಿಕೊಳ್ಳಿ
WhatsApp Facebook X Telegram
Shimoga Shivamogga police investigating the mysterious death of Akshara College lecturer Suresh Kumar,
Shimoga Shivamogga police investigating the mysterious death of Akshara College lecturer Suresh Kumar,

ಶಿವಮೊಗ್ಗ / ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತಪುರ ಗ್ರಾಮದ ಬಳಿ ಅಕ್ಷರ ಕಾಲೇಜಿನ ಉಪನ್ಯಾಸಕ ಸುರೇಶ್ ಕುಮಾರ್ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿತ್ತು. ಅವರದೇ ಅಡಿಕೆ ತೋಟದಲ್ಲಿ ನಡೆದಿದ್ದ ಈ ಘಟನೆ ಸಂಬಂಧ ಶಿವಮೊಗ್ಗ ಪೊಲೀಸರು ತನಿಖೆ ಆರಂಭಿಸಿದ್ದು, ಇದೊಂದು ಕೊಲೆ ಪ್ರಕರಣ ಎಂದು ಕೇಸ್ ದಾಖಲಿಸಿದ್ದಾರೆ

ಓದುಗರ ಗಮನಕ್ಕೆ : ಹೊಳೆಹೊನ್ನೂರುನಲ್ಲಿ ನಡೆದ ಘಟನೆಯ ವಿವರವನ್ನ ಈ ಲಿಂಕ್​ನಲ್ಲಿ ಓದಬಹುದು ಹೊಳೆಹೊನ್ನೂರು ತೋಟದಲ್ಲಿ, ಸುಟ್ಟ ಸ್ಥಿತಿಯಲ್ಲಿ ಶಿವಮೊಗ್ಗದ ಉಪನ್ಯಾಸಕರ ಶವ ಪತ್ತೆ! ನಿಗೂಢ!

Private College Lecturer Found Dead Under Suspicious Circumstances in Shivamogga
Shivamogga police investigating the mysterious death of Akshara College lecturer Suresh Kumar,

ಇನ್ನೊಂದೆಡೆ ಈ ಬಗ್ಗೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಶನಿವಾರ ಬೆಳಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಸುರೇಶ್ ಕುಮಾರ್ ಅವರ ದೇಹ ನಿನ್ನೆ ಭಾನುವಾರ ಬೆಳಿಗ್ಗೆ 7.30 ರಿಂದ 8 ಗಂಟೆಯ ಅವಧಿಯಲ್ಲಿ ಸುಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಾಹಿತಿ ತಿಳಿದ ತಕ್ಷಣ ERSS  112 ವಾಹನ ಸ್ಥಳಕ್ಕೆ ಧಾವಿಸಿತು. ಆ ಸಂದರ್ಭದಲ್ಲಿಯು ಮೃತದೇಹ ಉರಿಯುತ್ತಿತ್ತು ಮತ್ತು ಸುತ್ತಮುತ್ತಲಿನ ಗರಿಗಳು ಬೆಂಕಿಯಿಂದ ಉರಿಯುತ್ತಿತ್ತು ಎಂದು ಮಾಹಿತಿ ನೀಡಿದರು. 

ಅಲ್ಲದೆ  ಮೃತದೇಹ ಸಂಪೂರ್ಣವಾಗಿ ಕರಕಲಾಗಿದೆ. ಹೀಗಾಗಿ ತಜ್ಞ ವೈದ್ಯರಿಂದ ಶವಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಘಟನಾ ಸ್ಥಳದಲ್ಲಿ ಸುರೇಶ್ ಕುಮಾರ್ ಅವರಿಗೆ ಸೇರಿದ ಒಂದು ಮೊಬೈಲ್ ಫೋನ್ ಸಿಕ್ಕಿದ್ದು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ ಹಾಗೂ ತೋಟದ ಹೊಂಡದ ಪಕ್ಕದಲ್ಲಿಯೇ ಅವರ ದ್ವಿಚಕ್ರ ವಾಹನ ಮತ್ತು ಬ್ಯಾಗ್ ಕೂಡ ಪತ್ತೆಯಾಗಿದೆ. ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ ಹಾಗೂ ಕುಟುಂಬದವರೂ ಸದ್ಯಕ್ಕೆ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ ಎಂದಿದ್ದಾರೆ. 

Shivamogga police investigating the mysterious death of Akshara College lecturer Suresh Kumar,
Shivamogga police investigating the mysterious death of Akshara College lecturer Suresh Kumar,

ಈ ಪ್ರಕರಣ ಸಂಬಂಧ  ಇನ್ಸ್​ಪೆಕ್ಟರ್ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿದೆ. ಕೊಲೆ ಪ್ರಕರಣ ಎಂದು ಕೇಸ್ ರಿಜಿಸ್ಟರ್ ಮಾಡಿಕೊಳ್ಳಲಾಗಿದ್ದು, ಕುಟುಂಬಸ್ಥರು ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. ಆದಾಗ್ಯು ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ 

ನಿಖಿಲ.ಬಿ. ಎಸ್​ಪಿ , ಶಿವಮೊಗ್ಗ

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Shivamogga police investigating the mysterious death of Akshara College lecturer Suresh Kumar,
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor