ಡೆವಿಲ್​​ ಚಿತ್ರದಿಂದ ಬಂತು ಹೊಸ ಅಪ್ಡೇಟ್ : ಹಾಡಿನ ಟೈಟಲ್​ ಕೇಳಿ ಥ್ರಿಲ್​ ಆದ ಅಭಿಮಾನಿಗಳು​

Devil movie update :  ಡೆವಿಲ್​​ ಚಿತ್ರದಿಂದ ಬಂತು ಹೊಸ ಅಪ್ಡೇಟ್ : ಹಾಡಿನ ಟೈಟಲ್​ ಕೇಳಿ ಥ್ರಿಲ್​ ಆದ ಅಭಿಮಾನಿಗಳು​

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಡೆವಿಲ್​ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರೀಕರಣವನ್ನು ಮುಗಿಸಿದೆ. ಇದರ ನಡುವೆ ಚಿತ್ರತಂಡ ಒಂದರ ಮೇಲೊಂದು ಅಪ್ಡೇಟ್​ ನೀಡುತ್ತಿದ್ದು, ಇದೀಗ ಡೆವಿಲ್​ ಚಿತ್ರತಂಡದಿಂದ ಮತ್ತೊಂದು ಅಪ್ಡೇಟ್​ ಹೊರಬಿದ್ದಿದೆ.

ಹೌದು ಡೆವಿಲ್​ ಚಿತ್ರತಂಡ ಇದೀಗ  ಹೊಸ ಹಾಡೊಂದನ್ನು ಆಗಸ್ಟ್​ 15 ರಂದು  ರಿಲೀಸ್​ ಮಾಡಲು ಹೊರಟಿದ್ದು, ಅದರ ಹೆಸರು ಕೇಳಿ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಅದಕ್ಕೆ ಕಾರಣವೆಂದರೆ ಈ ಹಿಂದೆ ದರ್ಶನ್​ ಹೇಳಿದ್ದ ಹಾಗೂ ಹೆಚ್ಚು ವೈರಲ್​ ಆಗಿದ್ದ  ಇದ್ರೆ ನೆಮ್ದಿಯಾಗ್​ ಇರ್ಬೇಕು ಎಂಬ ಮಾತನ್ನೇ ಹಾಡಿನ ಟೈಟಲ್​ ಆಗಿ ಇಡಲಾಗಿದೆ. ಕೆಲವರು ಈ ಹಾಡಿನ ಟೈಟಲ್​ ಕೇಳಿದಾಗ ಆಶ್ಚರ್ಯದಿಂದ ಇದು ಫ್ಯಾನ್​ ಮೇಡ್​ ಸಾಂಗ್​  ಎಂದುಕೊಂಡಿದ್ದೂ ಇದೆ.

ಈ ಹಾಡು ಆಗಸ್ಟ್​ 15 ರಂದು ಬೆಳಿಗ್ಗೆ 10;05 ಕ್ಕೆ ಸರಿಗಮಪ ಯೂಟ್ಯೂಬ್​ ಚಾನಲ್​ನಲ್ಲಿ ರಿಲೀಸ್​ ಆಗಲಿದ್ದು, ಇದಕ್ಕೆ ಅಜನೀಶ್​ ಬಿ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ. ಆದರೆ ಹಾಡನ್ನು ಯಾರು ಹಾಡಲಿದ್ದಾರೆ. ಹಾಗೂ ಯಾರ ಸಾಹಿತ್ಯವಿದೆ ಎಂದು ಚಿತ್ರತಂಡ ಮಾಹಿತಿ ನೀಡಿಲ್ಲ. 

ಎಲ್ಲ ಅಂದುಕೊಂಡಂತೆ ಆಗಿದ್ದರೆ 2024 ರ ಡಿಸೆಂಬರ್​​ನಲ್ಲಿಯೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರೀಕರಣ ಸ್ವಲ್ಪ ವಿಳಂಬವಾಗಿತ್ತು. ಇದೀಗ ಚಿತ್ರತಂಡ ಚಿತ್ರೀಕರಣ ಹಾಗೂ ಡಬ್ಬಿಂಗ್​ ಕಾರ್ಯವನ್ನು ಮುಗಿಸಿ ರಿಲೀಸ್​ಗೆ ರೆಡಿಯಾಗಿದೆ. 

ಹಾಡಿನ ಬಿಡುಗಡೆಯ ನಂತರ, ಚಿತ್ರತಂಡ ಮುಂಬರುವ ಗಣೇಶ ಹಬ್ಬದಂದು ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆಯೇ ಎಂದು ಕಾದು ನೋಡಬೇಕಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Devil movie update
Devil movie update

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು