ಹಬ್ಬದ ಸಂದರ್ಭದಲ್ಲಿ ಫ್ಲೆಕ್ಸ್, ಬ್ಯಾನರ್‌ಗಳಿಗೆ ಹೊಸ ನಿಯಮ: ಮಾಲಿಕರಿಗೆ ಎಸ್​ ಪಿ ಕೊಟ್ಟ ಎಚ್ಚರಿಕೆಯ ಸಂದೇಶವೇನು 

ganesha chaturthi : ಶಿವಮೊಗ್ಗ: ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಫ್ಲೆಕ್ಸ್, ಬ್ಯಾನರ್‌ಗಳ ಪ್ರಿಂಟರ್‌ಗಳು ಮತ್ತು ಅಂಗಡಿ ಮಾಲೀಕರ ಸಭೆ ನಡೆಸಿದರು. ಡಿಎಆರ್ ಮೈದಾನದಲ್ಲಿ ನಡೆದ ಈ ಸಭೆಯಲ್ಲಿ, ಹಬ್ಬದ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ಕಳೆದ 10-15 ವರ್ಷಗಳಿಂದ ಜಿಲ್ಲೆಯಲ್ಲಿ ನಡೆದಿರುವ ಕಾನೂನು ಸುವ್ಯವಸ್ಥೆ ಪ್ರಕರಣಗಳನ್ನು ಗಮನಿಸಿದಾಗ, ಹೆಚ್ಚಿನ ಪ್ರಕರಣಗಳು ಫ್ಲೆಕ್ಸ್ ಮತ್ತು ಬ್ಯಾನರ್‌ಗಳಿಗೆ ಸಂಬಂಧಿಸಿವೆ ಎಂದು ಎಸ್‌ಪಿ ಮಿಥುನ್ ಕುಮಾರ್ ತಿಳಿಸಿದರು. ಅನಧಿಕೃತವಾಗಿ ಬ್ಯಾನರ್‌ಗಳ ಅಳವಡಿಕೆ, ಪ್ರಚೋದನಕಾರಿ ಬರಹಗಳು, ಸಂಬಂಧವಿಲ್ಲದ ಸ್ಥಳಗಳಲ್ಲಿ ಬ್ಯಾನರ್ ಹಾಕುವುದು ಮತ್ತು ಕಿಡಿಗೇಡಿಗಳಿಂದ ಬ್ಯಾನರ್‌ಗಳನ್ನು ಹರಿಯುವಂತಹ ಘಟನೆಗಳು ಹೆಚ್ಚಾಗಿ ವರದಿಯಾಗಿವೆ. ಕಳೆದ ಮೂರು ವರ್ಷಗಳಲ್ಲಿ ಇಂತಹ ಸುಮಾರು 10 ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.

ganesha chaturthi : ಪ್ರಮುಖ ನಿಯಮಗಳು ಮತ್ತು ಸೂಚನೆಗಳು:

ಇನ್ನು ಮುಂದೆ ಯಾವುದೇ ಫ್ಲೆಕ್ಸ್ ಅಥವಾ ಬ್ಯಾನರ್ ಪ್ರಿಂಟ್ ಮಾಡುವ ಮುನ್ನ, ಅದರ ವಿಷಯ, ಬರಹ, ಚಿತ್ರಗಳ ಕುರಿತು ಕಡ್ಡಾಯವಾಗಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು.

ಪ್ರಿಂಟರ್‌ಗಳಿಗಾಗಿ ಈಗಾಗಲೇ ಪೊಲೀಸ್ ಉಪ ವಿಭಾಗವಾರು ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಲಾಗಿದೆ. ಯಾವುದೇ ಪ್ರಿಂಟ್ ಮಾಡುವ ಮೊದಲು, ಅದರ ಸಾಫ್ಟ್ ಕಾಪಿಯನ್ನು (ಇಮೇಜ್/ಪಿಡಿಎಫ್/ಫೋಟೋ) ಗ್ರೂಪ್‌ನಲ್ಲಿ ಹಂಚಿಕೊಂಡು ಅನುಮತಿ ಪಡೆಯುವುದು ಕಡ್ಡಾಯ.

ಪ್ರಿಂಟರ್‌ಗಳು ತಮ್ಮ ಗ್ರಾಹಕರ ಸಂಪೂರ್ಣ ವಿವರಗಳನ್ನು (ಹೆಸರು, ವಿಳಾಸ, ಫೋನ್ ನಂಬರ್) ಮತ್ತು ಅವರ ಐಡಿ ಪ್ರೂಫ್ ನ ನಕಲು ಪ್ರತಿಯನ್ನು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ದಾಖಲಿಸಿಕೊಳ್ಳಬೇಕು. ಈ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು.

ಫ್ಲೆಕ್ಸ್ ಮೇಲೆ ವಿವರ: ಪ್ರಿಂಟ್ ಮಾಡಲಾದ ಪ್ರತಿ ಫ್ಲೆಕ್ಸ್ ಮತ್ತು ಬ್ಯಾನರ್ ಮೇಲೆ ಪ್ರಿಂಟರ್‌ನ ಹೆಸರು, ಫೋನ್ ನಂಬರ್, ವಿಳಾಸ ಮತ್ತು ಪ್ರಿಂಟ್ ಮಾಡಲಾದ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ಮುದ್ರಿಸಬೇಕು.

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಸಮಯದಲ್ಲಿ ಪ್ರಿಂಟಿಂಗ್ ಅಂಗಡಿಗಳಿಗೆ ಭೇಟಿ ನೀಡಿ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆಯೇ ಎಂದು ಪರಿಶೀಲಿಸಲಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡಿರುವ ಸಾಫ್ಟ್ ಕಾಪಿ ಮತ್ತು ಪ್ರಿಂಟ್ ಮಾಡಿರುವ ಹಾರ್ಡ್ ಕಾಪಿ ನಡುವೆ ವ್ಯತ್ಯಾಸ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

ganesha chaturthi : ಈ ಕ್ರಮಗಳು ಪ್ರಿಂಟರ್‌ಗಳ ಮೇಲೆ ಯಾವುದೇ ನಿಯಂತ್ರಣ ಹೇರುವ ಉದ್ದೇಶದಿಂದಲ್ಲ, ಬದಲಾಗಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯ ಭಾಗವಾಗಿದೆ ಎಂದು ಎಸ್‌ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದರು. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ganesha chaturthi
ganesha chaturthi ಮಾಲೀಕರೊಂದಿಗೆ ಸಭೆ ನಡೆಸಿದ ಪೊಲೀಸರು

Leave a Comment