CHIKKAMAGALURU | Dec 21, 2023 | ಮಾರುತಿ 800 ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾದ ಘಟನೆ ಬಗ್ಗೆ ಇಂದು ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಮುದ್ರೆಮನೆ ಸಮೀಪ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮಾರುತಿ 800 ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಕಾರು ನುಜ್ಜುಗುಜ್ಜಾಗಿದೆ.
READ : ನಾಳೆ ಶಿವಮೊಗ್ಗದ ಈ ಪ್ರಮುಖ ಪ್ರದೇಶಗಳಲ್ಲಿ ಪವರ್ ಕಟ್! ಕಾರಣವೇನು? ಎಲ್ಲೆಲ್ಲಿ Power Cut ? ವಿವರ ಇಲ್ಲಿದೆ
ಘಟನೆಯಲ್ಲಿ ಗಾಯಗೊಂಡಿರುವ ಚಾಲಕನನ್ನ ಸ್ಥಳೀಯರು ತಕ್ಷಣವೇ ವಾಹನ ವ್ಯವಸ್ಥೆ ಮಾಡಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನೂ ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಎರಡು ವಾಹನಗಳ ನಡುವಿನ ಡಿಕ್ಕಿಯಲ್ಲಿ ಮಾರುತಿ 800 ಬಹುತೇಖ ಅಪ್ಪಚ್ಚಿಯಾದಂತಿದೆ.
