ಶಿವಮೊಗ್ಗದಲ್ಲಿ ನಾಳೆ ‘ಚೆಲುವೆ ಚಿತ್ರಾವತಿ’ ಯಕ್ಷಗಾನ ಪ್ರದರ್ಶನ! 20 ವರ್ಷಗಳ ನಂತರ ಹೊಸ ಪ್ರಯತ್ನ!

ಹಂಚಿಕೊಳ್ಳಿ
WhatsApp Facebook X Telegram
ಮಾಹಿತಿಗಾಗಿ ಸಾಂದರ್ಭಿಕ ಎಐ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜೆಸಿಐ ಶಿವಮೊಗ್ಗ ವಿವೇಕ್, ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಹಾಗೂ ಅತಿಥಿ ಕಲಾವಿದರು ಸೇರಿಕೊಂಡು ಇದೇ ಆ.23ರಂದು ಸಂಜೆ 5 ಗಂಟೆಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಕಂದಾವರ ರಘುರಾಮಶೆಟ್ಟಿ ವಿರಚಿತ ‘ಚೆಲುವೆ ಚಿತ್ರಾವತಿ’ ಯಕ್ಷಗಾನ ಪ್ರದರ್ಶನ (Cheluve Chitravati Yakshagana)ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಐ ಶಿವಮೊಗ್ಗ ವಿವೇಕ್‌ನ ಪ್ರಮುಖ ಉದಯ್ ಕಡಂಬ ತಿಳಿಸಿದರು.

ಈ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ದರ್ಶನ್ ಗೌಡ ಗೋಳಿಹೊಳೆ ಪಾಲ್ಗೊಳ್ಳಲಿದ್ದಾರೆ. ಅತಿಥಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆ ವಾದಕರಾಗಿ ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ ಹಾಗೂ ಚೆಂಡೆ ವಾದಕರಾಗಿ ಪ್ರಜ್ವಲ್ ಮುಂಡಾಡಿ ಆಗಮಿಸಲಿದ್ದಾರೆ ಅಂತಾ ಮಾಹಿತಿ ನೀಡಿದರು.

ಮುಮ್ಮೇಳದಲ್ಲಿ ನೀಲ್ಲೋಡು ಶಂಕರ ಹೆಗಡೆ, ವಿಶ್ವನಾಥ್ ಆಚಾರ್ಯ ತೊಂಬೊಟ್ಟು, ಉದಯ ಹೆಗಡೆ ಕಡಬಾಳ, ಕೆ.ಜಿ. ಕಾರ್ತಿಕ್, ಭಾಸ್ಕರ್ ಮರಾಠ ಮತ್ತು ದತ್ತು ಮರಾಠ ಭಾಗವಹಿಸಲಿದ್ದಾರೆ. ಅತಿಥಿ ಕಲಾವಿದರಾಗಿ ಕಾರ್ತಿಕ್ ಚಿಟ್ಟಾಣಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸ್ತ್ರೀ ಭೂಮಿಕೆಯಲ್ಲಿ ಸುಧೀರ್ ಉಳ್ಳೂರು, ಸಂತೋಷ್ ಹೆಂಗವಳ್ಳಿ ಮತ್ತು ಪುರುಷೋತ್ತಮ್ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ಶೇಖರ್‌ಶೆಟ್ಟಿ ಯಳಬೇರು ಹಾಗೂ ಪುರಂದರ ಮೂಡ್ಕಣಿ ಅಭಿನಯಿಸಲಿದ್ದಾರೆ. ಸುಮಾರು 20 ವರ್ಷಗಳ ನಂತರ ಇಂತಹ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ ಎಂದು ಉದಯ್ ಕಡಂಬ ತಿಳಿಸಿದರು.

ಯಕ್ಷಗಾನ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ದಾನಿಗಳಿಗೆ ವಿಶೇಷ ಪ್ರವೇಶ ಪಾಸ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 8884411009 ಅಥವಾ 8217318814 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾಟನ್ ಜಗದೀಶ್, ವಿಜಯಲಕ್ಷ್ಮಿ ಕಡಂಬ, ಡಾ. ಪರಿಸರ ನಾಗರಾಜ್, ಬದ್ರೀಶ್, ಭಾರತಿ, ಶ್ರೀನಿವಾಸ ಆಚಾರ್ಯ, ಜಯಕುಮಾರ್, ಶ್ಯಾಮಲಾ ಮೊದಲಾದವರು ಉಪಸ್ಥಿತರಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor