Cattle Theft in Thirthahalli ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತೀರ್ಥಹಳ್ಳಿ / ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಗಡಿಕಲ್ ಬಳಿಯಲ್ಲಿ (Cattle Theft in Thirthahalli) ಕಳೆದ ಜೂನ್ 10 ರಂದು ದನ ಕದಿಯುತ್ತಿದ್ದ ದೃಶ್ಯವೊಂದು ಕಾರೊಂದರ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಸ್ವತಃ ಕಾರಿನ ಮಾಲೀಕರು ಫೇಸ್ಬುಕ್ನಲ್ಲಿ ಪೋಸ್ಟ್ ವೊಂದನ್ನ ಬರೆದುಕೊಂಡಿದ್ದರು. ಅಲ್ಲದೆ ತಮ್ಮ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯದ ತುಣಕನ್ನ ಅವರು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಲೆನಾಡು ಟುಡೆ ವರದಿ ಮಾಡಿತ್ತು. ಈ ವರದಿಯು ಇಲ್ಲಿದೆ : ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಈ ವಿಡಿಯೋ ವೈರಲ್ ಆಗ್ತಿದೆ! ಕಾರಣ ಐತೆ!
ಸದ್ಯ ಈ ವಿಡಿಯೋ ಹಾಗೂ ನಡೆದ ಘಟನೆಗೆ ಸಂಬಂಧಿಸಿದಂತೆ ತೀರ್ಥಹಳ್ಳಿ ಪೊಲೀಸರು ಒಂದಿಷ್ಟು ಕ್ರಮ ಕೈಗೊಂಡಿದ್ದಾರೆ. ತೀರ್ಥಹಳ್ಳಿ: ತಾಲೂಕಿನ ಗಡಿಕಲ್
ಗ್ರಾಮದಲ್ಲಿ ಜಾನುವಾರು ಕಳವಿಗೆ ಪ್ರಯತ್ನಿಸಿದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಕಳವಿಗೆ ಬಳಸಿದ 4 ಲಕ್ಷ ರೂ. ಮೌಲ್ಯದ ಎರ್ಟಿಗಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ರೋಷನ್ ಬೇಗ್ (31), ಟಿಪ್ಪುನಗರದ ಇಮ್ರಾನ್ (39) ಬಂಧಿತರು. ಇವರನ್ನ ನ್ಯಾಯಾಗಂ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ , ಪಿಐ ಇಮ್ರಾನ್ ಬೇಗ್, ಪಿಎಸೈಗಳಾದ ಸುಷ್ಮಾ ಯುವರಾಜ್, ಸಿಬ್ಬಂದಿ ಲಿಂಗೇಗೌಡ, ಕುಮಾರ, ಪ್ರಸನ್ನ, ದೀಪಕ್, ಪ್ರದೀಪ್, ಹಂಪಿಹೊಳಿ, ಮಂಜುನಾಥ ಪ್ರಮೋದ್ ಭಾಗವಹಿಸಿದ್ದರು.
