POLITICS

ಜೂ 23, 24 ಕ್ಕೆ 100 ಪರ್ಸೆಂಟ್ ಫಾರೆಸ್ಟ್​ ಮಿನಿಸ್ಟರ್ ಪಟ್ಟ ಗ್ಯಾರಂಟಿ: ಬೇಳೂರು ಗೋಪಾಲಕೃಷ್ಣ

Gopalakrishna Beluru Expresses 100 Percent Confidence in Getting Ministerial Berth
ಶೇರ್ ಮಾಡಿ WhatsApp Facebook X

Gopalakrishna Beluru ಮಲೆನಾಡುಟುಡೆ ಸುದ್ದಿ/ ಶಿವಮೊಗ್ಗ/ ಸಾಗರ / ಬೇಳೂರು ಗೋಪಾಲಕೃಷ್ಣ / ಸದ್ಯ ಡಿಕೆಶಿ ಸಂಪುಟವನ್ನು ಸೇರುವವರು ಯಾರು? ಎಂಬುದರ ಬಗ್ಗೆ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸಮಾಲೋಚನೆಗಳು ನಿತ್ಯ ದಾಸೋಹದ ರೀತಿಯಲ್ಲಿ ನಡೆಯುತ್ತಿದೆ. ಈ ಮಧ್ಯೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶಾಸಕ ಬೇಳೂರು ಗೋಪಾಲಕೃಷ್ಣರವರು (Gopalakrishna Beluru) ತಮಗೆ 100 ಪರ್ಸೆಂಟ್ ಮಿನಿಸ್ಟರ್​ ಗಿರಿ ಸಿಗುತ್ತೆ ಎನ್ನುತ್ತಿದ್ದಾರೆ ಅಲ್ಲದೆ ಫಾರೆಸ್ಟ್​ ಮಿನಿಸ್ಟ್ರಿಯೇ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಈ ಬಗ್ಗೆ ಸಾಗರದಲ್ಲಿ ನಿನ್ನೆ ಸೋಮವಾರ ಮಾತನಾಡಿರುವ ಅವರು, ಸಚಿವ ಸಂಪುಟ ವಿಸ್ತರಣೆ ಜೂ. 23 ಅಥವಾ 24ರಂದು ನಡೆಯಲಿದೆ. ಆ ವೇಳೆ ತಮಗೆ ಸಚಿವ ಸ್ಥಾನ ಸಿಗುವ ಬಗ್ಗೆ ಶೇ.100 ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಮಲೆನಾಡು ಭಾಗಕ್ಕೆ ಅರಣ್ಯ ಖಾತೆ ನೀಡುವಂತೆ ಆಗ್ರಹಿಸಲಾಗಿದೆ. ಆದರೆ, ಯಾವುದೇ ಖಾತೆ ನೀಡಿ ದರೂ ಸಮರ್ಥವಾಗಿ ನಿರ್ವಹಿಸುವೆ ಎಂದಿದ್ದಾರೆ.

Whatsapp / https://chat.whatsapp.com/JrsZ8He4nN600n0r3tJItz

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತವಾಗಿದ್ದು, ಅಡ್ಡಮತದಾನ ತಡೆಯಲು ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುವುದರಲ್ಲಿ ತಪ್ಪಿಲ್ಲ . ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಯನ್ನು ನೈಜ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಪ್ರಕ್ರಿಯೆ ನಡೆಯುತ್ತಿದ್ದು, ಸರಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ರದ್ದುಪಡಿಸುವುದಿಲ್ಲ .

ಬೇಳೂರು ಗೋಪಾಲಕೃಷ್ಣ, ಸಾಗರ ಶಾಸಕರು

ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor