ಶಿವಮೂರ್ತಿ ಸರ್ಕಲ್​ ಬಳಿಯ ನಾರಾಯಣ ಕ್ಲಿನಿಕ್​ನಲ್ಲಿ ಹೊಸ ಸೇವೆ ಆರಂಭ : ಡಾ.ಅಪರ್ಣಾ ಶ್ರೀವತ್ಸಾ

ಹಂಚಿಕೊಳ್ಳಿ
WhatsApp Facebook X Telegram
Chemotherapy Services Inaugurated at Narayana Clinic Shivamogga by MP B.Y. Raghavendra

Chemotherapy Services ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ನಾರಾಯಣ ಕ್ಲಿನಿಕ್‌ / ಶಿವಮೊಗ್ಗ ಸಿಟಿಯು ಆಸ್ಪತ್ರೆಗಳ ಹಬ್ ಆಗುತ್ತಿರುವುದು ಗೊತ್ತಿರುವ ವಿಚಾರ. ಅದರಲ್ಲಿಯು ಕುವೆಂಪು ರಸ್ತೆಯ ಸುತ್ತಮುತ್ತ ಹೊಸ ಹೊಸ ಆಸ್ಪತ್ರೆಗಳು ರೋಗಿಗಳ ಸೇವೆಗೆ ಸಿದ್ಧವಾಗುತ್ತಿದೆ. ಇದೀಗ ಮತ್ತೊಂದು ಸೇವೆ ಶಿವಮೊಗ್ಗವೂ ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಸಿಗಲಿದೆ. ಹೌದು ನಿಜ, ನಗರದ ಹೃದಯಭಾಗದಲ್ಲಿರುವ ಶಿವಮೂರ್ತಿ ವೃತ್ತದ ಸಮೀಪವಿರುವ ನಾರಾಯಣ ಕ್ಲಿನಿಕ್‌ನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನವಾಗಿ ಕೀಮೋಥೆರಪಿ ಸೇವೆಗಳನ್ನು (Chemotherapy Services)ಆರಂಭಿಸಲಾಗಿದೆ.

ನಾರಾಯಣ ಕ್ಲಿನಿಕ್​ನಲ್ಲಿ ಕಿಮೋಥೆರಪಿ ವೈದ್ಯಕೀಯ ಸೌಲಭ್ಯವನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು ಉದ್ಘಾಟಿಸಿದರು. ಕ್ಯಾನ್ಸರ್ ಚಿಕಿತ್ಸೆಯು ರೋಗಿಗಳಿಗೆ ಹೆಚ್ಚು ಸವಾಲಿನದ್ದಾಗಿರುವುದರಿಂದ, ಅವರಿಗೆ ಅತ್ಯುತ್ತಮ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯವನ್ನು ನಗರದ ಕೇಂದ್ರ ಭಾಗದಲ್ಲಿಯೇ ಒದಗಿಸುವ ಉದ್ದೇಶದಿಂದ ಈ ಹೆಜ್ಜೆಯನ್ನು ಇಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿಕೊಂಡಿದೆ.

Whatsapp / https://chat.whatsapp.com/JrsZ8He4nN600n0r3tJItz

ಇನ್ನೂ ಈ ಬಗ್ಗೆ ಟ್ವೀಟ್ ಮಾಡಿರುವ Oncologist Dr Aparna Sreevatsa ರವರು, ಆಸ್ಪತ್ರೆಗಳ ಅಲೆದಾಟ, ಕ್ಯಾನ್ಸರ್​​ಗೆ ಒಳಗಾದ ರೋಗಿಗಳಿಗೆ ದೈಹಿಕವಾಗಿ, ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಹೆಚ್ಚು ಹೊರೆಯಾಗುತ್ತದೆ. ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿ, ನಗರದ ಕೇಂದ್ರ ಭಾಗದಲ್ಲಿಯೇ ಕೀಮೋಥೆರಪಿ ಸೌಲಭ್ಯವನ್ನು ಲಭ್ಯವಾಗುವಂತೆ ಮಾಡಲಾಗಿದೆ. ಇದರಿಂದಾಗಿ ರೋಗಿಗಳ ಮೇಲಿನ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ ಈ ಯೋಜನೆಯನ್ನು ಸಾಕಾರಗೊಳಿಸಲು ಶ್ರಮಿಸಿದ ಎಲ್ಲಾ ಸಹೋದ್ಯೋಗಿಗಳು, ಸಿಬ್ಬಂದಿ ವರ್ಗ ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅವರ ಟ್ವೀಟ್​ ಇಲ್ಲಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor