ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಈ ವಿಡಿಯೋ ವೈರಲ್​ ಆಗ್ತಿದೆ! ಕಾರಣ ಐತೆ!

Thirthahalli Gadikal / ಮಲೆನಾಡು ಟುಡೆ ಸುದ್ದಿ / ಧನಕಳ್ತನ ನಡೆಯುತ್ತಲೇ ಇಲ್ಲವೇನೋ ಎಂಬಂತಿರುವ ವ್ಯವಸ್ಥೇಯ ನಡುವೆ, ಹಾಲಿಗಾಗಿ ದನ ಕಟ್ಟಿರುವವರ ಕಥೆ ದಿನರಾತ್ರಿ ಕಳ್ಳರನನ್ನು ಕಾಯವುದಾಗಿದೆ. ಇದಕ್ಕೆ ಸಾಕ್ಷಿ ಎಂಬಂತಹ ವಿಡಿಯೋವೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆಕಾಶ್ ನಾಯ್ಕ್​ ಮಕ್ಕಿಮನೆ ಎಂಬವರು ಈ ವಿಡಿಯೋವನ್ನು ಅಪ್​ಲೋಡ್ ಮಾಡಿದ್ದು, ತೀರ್ಥಹಳ್ಳಿಯಲ್ಲಿ ರಾತ್ರಿ ಕಾವಲಿನ ವ್ಯವಸ್ಥೆಯನ್ನ ಪ್ರಶ್ನಿಸುತ್ತಿದೆ.

ಆಕಾಶ್​ ನಾಯ್ಕ್​ರವರು ವಿವರಿಸಿದಂತೆ ತೀರ್ಥಹಳ್ಳಿ ಸಮೀಪದ ಗಡಿಕಲ್ ವೃತ್ತದಲ್ಲಿ ಜೂನ್ 9ರ ರಾತ್ರಿ ಸುಮಾರು 1 ಗಂಟೆಯ ಸಮಯದಲ್ಲಿ ದನ ಕಳ್ಳತನಕ್ಕೆ ಯತ್ನಿಸಲಾಗಿದೆ. ಇದೇ ಮಾರ್ಗದಲ್ಲಿ ಬರುತ್ತಿದ್ದ ಇವರ ಕಾರಿನ ಡ್ಯಾಶ್​ ಕ್ಯಾಮರಾದಲ್ಲಿ ದನಕಳ್ಳತನದ ದೃಶ್ಯ ಸೆರೆಯಾಗಿದೆ. ಕಾರು ಬರುತ್ತಲೇ ಆರೋಪಿಗಳು ತಮ್ಮ ವಾಹನದೊಂದಿಗೆ ಪರಾರಿಯಾಗಿದ್ದಾರೆ.

ಘಟನೆಯ ದಿನ ರಾತ್ರಿ ವಾಹನ ಸವಾರರು ತೀರ್ಥಹಳ್ಳಿಯಿಂದ ತಮ್ಮ ಮನೆಗೆ ತೆರಳುತ್ತಿದ್ದಾಗ ಗಡಿಕಲ್ ವೃತ್ತದ ಬಳಿ ರಸ್ತೆಯಲ್ಲಿ 3 ರಿಂದ 4 ದನಗಳು ನಿಂತಿದ್ದನ್ನ ಗಮನಿಸಿದ್ದಾರೆ. ಅಲ್ಲದೆ ಬಿಳಿ ಬಣ್ಣದ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು, ಅಲ್ಲಿದ್ದ ದನಗಳ ಪೈಕಿ ಒಂದು ದನವನ್ನು ಕಾರಿನೊಳಗೆ ತುಂಬಿಕೊಳ್ಳಲು ಯತ್ನಿಸುತ್ತಿದ್ದರು. ಆಕಾಶ್ ನಾಯ್ಕ್​ರ ಕಾರು ಬರುತ್ತಿರುವುದನ್ನ ನೋಡಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಈ ಮಧ್ಯೆ ಕಾರಿನೊಳಗೆ ಕರುವೊಂದನ್ನ ಅದಾಗಲೇ ಹೇರಿರುವವ ಬಗ್ಗೆ ಅನುಮಾನವೂ ಇದೆ.

Whatsapp : https://chat.whatsapp.com/JrsZ8He4nN600n0r3tJItz

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕಳ್ಳತನದ ಯತ್ನವನ್ನು ಕಣ್ಣಾರೆ ಕಂಡ ಆಕಾಶ್​ರವರು ತಮ್ಮ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ದಾಖಲಾಗಿದ್ದ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ,. ಈ ಮಧ್ಯೆ ಪೊಲೀಸರು ಪರಿಶೀಲನೆಯಲ್ಲಿದ್ದಾರೆ.