ಶಿವಮೊಗ್ಗ ನ್ಯೂಸ್/ SHIVAMOGGA NEWS/ Malenadu today/ Apr 21, 2023/ KARNATAKA ONLINE NEWS / GOOGLE NEWS
ಶಿವಮೊಗ್ಗ/ ಪಕ್ಷ ಕೇಳಿದ ತಕ್ಷಣ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿ, ಮಗನಿಗೆ ಟಿಕೆಟ್ ನೀಡದಿದ್ದರೂ ಪಕ್ಷ ನಿಷ್ಟೆ ತೋರಿದ ಕೆ.ಎಸ್.ಈಶ್ವರಪ್ಪನವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ಸ್ವತಃ ಕೆಎಸ್.ಈಶ್ವರಪ್ಪನವರು ಮಾತನಾಡಿದ್ದಾರೆ.
ಆರೋಗ್ಯ ವಿಚಾರಿಸಿದ ಮೋದಿ
ಇವತ್ತು ಬೆಳಗ್ಗೆ ಕೆ.ಎಸ್. ಈಶ್ವರಪ್ಪ ಅವರಿಗೆ ಕರೆ ಮಾಡಿದ ನರೇಂದ್ರ ಮೋದಿಯವರು, ಮಾಜಿ ಸಚಿವರ ಆರೋಗ್ಯವನ್ನು ವಿಚಾರಿಸಿದರು. ಅಲ್ಲದೆ ಶಿವಮೊಗ್ಗದ ರಾಜಕಾರಣದ ಬಗ್ಗೆ ವಿಚಾರಿಸಿದರು.
ಈ ವೇಳೆ . ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೀರಿ ಎಂದ ಪ್ರಧಾನಿಯವರು ನಂತರ, ನಿಮ್ಮೊಂದಿಗೆ ಪಕ್ಷವಿರುತ್ತದೆ ಎಂದು ತಿಳಿಸಿದರು. ಅಲ್ಲದೆ ಕರ್ನಾಟಕಕ್ಕೆ ಬಂದಾಗ ನಿಮ್ಮನ್ನ ಭೇಟಿಯಾಗುತ್ತೇನೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಗೆದ್ದೇ ಗೆಲ್ಲುತ್ತೇವೆ
ಇನ್ನೂ ಕೆಎಸ್.ಈಶ್ವರಪ್ಪನವರು ನರೇಂದ್ರ ಮೋದಿಯವರು ಕರೆಮಾಡಿದ್ದಕ್ಕೆ ಧನ್ಯವಾದ ತಿಳಿಸ್ತಾ ಒಬ್ಬ ಕಾರ್ಯಕರ್ತನನ್ನು ನೆನಪಿಸಿಕೊಂಡು ಕರೆ ಮಾಡಿದ್ದಕ್ಕೆ ಸಂತೋಷವಾಯ್ತು, ಶಿವಮೊಗ್ಗ ನಗರದಲ್ಲಿ ನಾವು ಗೆಲ್ಲುತ್ತೇವೆ ಎಂದು ಭರವಸೆಯನ್ನು ಕೊಟ್ಟರು.
ಸಕ್ರಿಯ ರಾಜಕಾರಣದಿಂದ ನಿವೃತ್ತಿಯಿಲ್ಲ
ಇನ್ನೂ ಈ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಈಶ್ವರಪ್ಪನವರು ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಂಡಿದ್ದೇನೆ. ಸಕ್ರಿಯ ರಾಜಕಾರಣದಿಂದಲ್ಲ.
ನಾನು ಸಕ್ರಿಯ ರಾಜಕಾರಣದಿಂದ ಹಿಂದೇ ಸರಿಯೋದಿಲ್ಲ, ಸಂಘಟನೆಯ ಕೆಲಸದಿಂದ ನಿವೃತ್ತಿತೆಗೆದುಕೊಳ್ಳುವುದಿಲ್ಲ ಎಂದರು.
ಬೇಸರ ಶಮನ
ಮಗನಿಗೆ ಟಿಕೆಟ್ ಕೇಳಿದ್ದ ಈಶ್ವರಪ್ಪನವರು, ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಆಪ್ತ ಚನ್ನಬಸಪ್ಪರಿಗೆ ಆಗಿದ್ದಕ್ಕೂ ಬೇಸರಗೊಳ್ಳದೇ ಅವರ ಪರ ಪ್ರಚಾರಕ್ಕೆ ಹೊರಟಿದ್ದಾರೆ.
ಸದ್ಯ ರಾಜ್ಯ ರಾಜಕಾರಣದಲ್ಲಿ ಅಸಮಾಧಾನ ಬೇಗುದಿ ಕಾಣಿಸಿಕೊಂಡ ಹೊತ್ತಿನಲ್ಲಿಯೇ ಕೆಎಸ್ ಈಶ್ವರಪ್ಪನವರ ಪಕ್ಷ ನಿಷ್ಟೆಗೆ ಬಿಜೆಪಿಯಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಆ ನಿಟ್ಟಿನಲ್ಲಿ ನರೇಂದ್ರ ಮೋದಿ ಕರೆ ಮಾಡಿದ್ದು ಕೆಎಸ್ಇ ಕುಟುಂಬಕ್ಕೆ ಸಮಾಧಾನ ಮೂಡಿಸಿದೆ.
MUST READ /
Read /ಸಿದ್ದರಾಮಯ್ಯರೇ ವಿರೋಧವಾದ್ರಾ!? ಶಿಕಾರಿಪುರ ಬಂಡಾಯಕ್ಕೆ ಕೆಪಿಸಿಸಿಯಲ್ಲಿ ಸಿಗಲಿಲ್ಲ ಮನ್ನಣೆ! ಏನಿದು
Read / Soraba / ಸೊರಬ ಚುನಾವಣಾ ಕಣದಿಂದ ಹಿಂದೆ ಸರಿದ ನಮೋ ವೇದಿಕೆ ! ಕುಮಾರ್ ಬಂಗಾರಪ್ಪ್ರರಿಗೆ ತಪ್ಪಿತಾ ಕಂಟಕ!?
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್, #Kannada_News, #karnatakaassemblyelection2023, #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadda,

