SHIVAMOGGA NEWS TODAY

ನಿಯಂತ್ರಣ ತಪ್ಪಿ ಸೇತುವೆಗೆ ಬಿದ್ದ ಬೈಕ್​​ ಸವಾರ, ಮಾನವೀಯತೆ ಮೆರೆದ ERV ಸಿಬ್ಬಂದಿ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಭದ್ರಾವತಿ :  ಕಾಮಗಾರಿ ನಡೆಯುತ್ತಿದ್ದ ಸೇತುವೆಗೆ ಬೈಕ್​​​ ಸವಾರನೊಬ್ಬ ಆಕಸ್ಮಿಕವಾಗಿ ಬಿದ್ದ ಘಟನೆ ಭದ್ರಾವತಿ ಹುತ್ತ ಕಾಲೋನಿ ಫಿಶ್ ಮಾರುಕಟ್ಟೆ ಹತ್ತಿರ ನಿನ್ನೆ ರಾತ್ರಿ ಸಂಭವಿಸಿದೆ. ಈ ಸಂದರ್ಭದಲ್ಲಿ ಕೂಡಲೇ ಸ್ಥಳಕ್ಕಾಗಮಿಸಿದ  ಇ ಆರ್​ ವಿ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಶಿವಮೊಗ್ಗ ಬಸ್ಟ್ಯಾಂಡ್​​ನಲ್ಲಿ ಇದೇ ಮೊದಲು, LED ಪರದೆಯಲ್ಲಿ ಬಜೆಟ್ ನೇರ ಪ್ರಸಾರ

ಘಟನೆ ವಿವರ 

ನಿನ್ನೆ ಅಂದರೆ ಮಾರ್ಚ್​ 09 ರ ರಾತ್ರಿ ಸುಮಾರಿಗೆ ಬೈಕ್​ ಸವಾರನೊಬ್ಬ ಅತಿ ವೇಗವಾಗಿ ಬೈಕ್​  ಚಾಲನೆ ಮಾಡಿಕೊಂಡು ಬಂದು ಕಾಮಗಾರಿ ನಡೆಯುತ್ತಿರುವ ಸೇತುವೆಯ ಹತ್ತಿರ ಚಾನೆಲ್ ನೀರಿಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ  ಇ ಆರ್​ ವಿ ಪೊಲೀಸರು ಸಾರ್ವಜನಿಕರ ಸಹಾಯದಿಂದ ಚಾನಲ್​ಗೆ ಬಿದ್ದಿದ್ದ ವ್ಯಕ್ತಿಯನ್ನು ಮೇಲಕ್ಕೆ ಎತ್ತಿ, ಆ್ಯಂಬುಲೆನ್ಸ್​​ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇ ಆರ್​ ವಿ ಪೊಲೀಸರು ಈ ಕಾರ್ಯಕ್ಕೆ ಶಿವಮೊಗ್ಗದ ಎಸ್​ ಪಿ ನಿಖಿಲ್​ ಬಿ ಅಭಿನಂದಿಸಿದ್ದಾರೆ.  

Bhadravati Police Rescue Biker from Bridge Canal 

Bhadravati Police Rescue Biker from Bridge Canal  
Bhadravati Police Rescue Biker from Bridge Canal  
shivamogga car decor sun control house
shivamogga car decor sun control house

 

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.