ಲಂಡನ್ ಮ್ಯಾರಥಾನ್‌ನಲ್ಲಿ ಕನ್ನಡ ಧ್ವಜ ಹಾರಿಸಿದ ಭದ್ರಾವತಿ ಮೂಲದ ವೈದ್ಯ

ಹಂಚಿಕೊಳ್ಳಿ
WhatsApp Facebook X Telegram
Bhadravathi Doctor Completes London Marathon
Bhadravathi Doctor Completes London Marathon

ಶಿವಮೊಗ್ಗ : ಇಂಗ್ಲೆಂಡ್‌ನ ಲಂಡನ್ ನಗರದಲ್ಲಿ ನಡೆದ ಪ್ರತಿಷ್ಠಿತ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ವೈದ್ಯರೊಬ್ಬರು ಭಾರತ ಹಾಗೂ ಕರ್ನಾಟಕದ ಬಾವುಟವನ್ನು ಪ್ರದರ್ಶಿಸುವ ಮೂಲಕ ನಾಡಿನ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ. ಭದ್ರಾವತಿ ಮೂಲದ ಡಾ. ರಾಮಚಂದ್ರ ಮಡತಿ ಗೌಡ ಅವರು ಈ ಸಾಧನೆ ಮಾಡಿದ ಕನ್ನಡಿಗರಾಗಿದ್ದಾರೆ.

ಶಿವಮೊಗ್ಗ:  ಎರಡು ದಿನ ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಕರೆಂಟ್​​ ಇರಲ್ಲ. ಎಲ್ಲಿ, ಯಾವಾಗ

ಪ್ರಸ್ತುತ ಲಂಡನ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಡಾ. ರಾಮಚಂದ್ರ ಮಡತಿ ಗೌಡ ಅವರು, ಮೌತ್ ಕ್ಯಾನ್ಸರ್ ಫೌಂಡೇಶನ್ ಲಂಡನ್ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಈ ಓಟವನ್ನು ಅವರು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 

ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಇವರು, ಲಂಡನ್‌ನಲ್ಲಿ ಎಂಬಿಬಿಎಸ್, ಎಂ.ಆರ್.ಸಿ.ಎಸ್ ಹಾಗೂ ಎಫ್.ಆರ್.ಸಿ.ಎಸ್ ಸೇರಿದಂತೆ ಅತ್ಯುನ್ನತ ವೈದ್ಯಕೀಯ ಪದವಿಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಅವರು ಮ್ಯಾಕ್ಸಿಲೊಫೇಶಿಯಲ್ ಪುನರ್ನಿರ್ಮಾಣ ಶಸ್ತ್ರಚಿಕಿತ್ಸಕರಾಗಿ ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Bhadravathi Doctor Completes London Marathon


Bhadravathi Doctor Completes London Marathon

Bhadravathi Doctor Completes London Marathon

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor