ಫ್ರೀ ಟಿಕೆಟ್​ನಲ್ಲಿ ತಮ್ಮನ ಜೊತೆ ಬೆಂಗಳೂರಿನಿಂದ ಶಿವಮೊಗ್ಗ ಬಸ್​ ಹತ್ತಿದ ಬಾಲಕಿ ಭದ್ರಾವತಿಯಲ್ಲಿ ಪತ್ತೆ ! ಪೊಲೀಸರ ಕಾರ್ಯಾಚರಣೆಯೇ ರೋಚಕ

This Article Written by / ajjimane ganesh / ಫೆಬ್ರವರಿ 5, 2026

Bengaluru Teens Run Away to Bhadravati After Scolding

ಈ ಜೆಂಜಿ, ಆಲ್ಪಾ ಯುಗದಲ್ಲಿ ಮಕ್ಕಳಿಗೆ ಹೆತ್ತವರು ಏನು ಸಹ ಹೇಳದಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂಬುದಕ್ಕೆ ಸಾಕ್ಷಿಯಾದ ಘಟನೆಯೊಂದು ಬೆಂಗಳೂರಲ್ಲಿ ನಡೆದಿದೆ. ಕೇವಲ ಟ್ಯೂಷನ್​ಗೆ ಹೋಗು ಅಂತಾ ಹೇಳಿದ್ದಕ್ಕೆ ಇಬ್ಬರು ಮಕ್ಕಳು ಮನೆ ಬಿಟ್ಟು ಆಧಾರ್ ಕಾರ್ಡ್ ಹಿಡ್ಕೊಂಡು ಬೆಂಗಳೂರಿನಿಂದ ಶಿವಮೊಗ್ಗದ ಕಡೆಗೆ  ಬಂದ ಪ್ರಕರಣ ಕೊನೆಗೆ ಸುಖಾಂತ್ಯ ಕಂಡಿದೆ.  

13 ವರ್ಷದ ಬಾಲಕಿಯೊಬ್ಬಳು ತನ್ನ 9 ವರ್ಷದ ಕಿರಿಯ ಸಹೋದರನೊಂದಿಗೆ ಮನೆಬಿಟ್ಟು ಕೆಂಪೇಗೌಡ ಬಸ್​ನಿಲ್ದಾಣದಲ್ಲಿ ಸಾರಿಗೆ ಬಸ್ ಹತ್ತಿಕೊಂಡು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರೆಗೂ ಬಂದಿದ್ದಾಳೆ. ನಿರಂತರ ಟ್ರೇಸಿಂಗ್ ಮೂಲಕ ಇವರಿಬ್ಬರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.. ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣೆ ಲಿಮಿಟ್ಸ್​ನ ಘಟನೆ ಇದಾಗಿದೆ 

Bengaluru Teens Run Away to Bhadravati After Scolding
Bengaluru Teens Run Away to Bhadravati After Scolding

ಶಿವಮೊಗ್ಗ ಪಾಲಿಕೆಯಿಂದ ಒತ್ತುವರಿ ಹಾಗೂ ಟವರ್ ಬ್ಯಾನರ್ ತೆರವು ಕಾರ್ಯಾಚರಣೆ, ನಿಯಮ ಮೀರಿದರೆ ಬೀಳಲಿದೆ ದಂಡದ ಬಿಸಿ!

ಮನೆಯಲ್ಲಿ ಬೈದರು ಎನ್ನುವ ಕಾರಣಕ್ಕೆ ಮನೆಯಿಂದ ಆಧಾರ್​ ಕಾರ್ಡ್​ ತಗೊಂಡು ಹೊರಟ ಇಬ್ಬರು ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯ ಅಡಿಯಲ್ಲಿ ಆಧಾರ್ ಕಾರ್ಡ್ ತೋರಿಸಿ ತನಗೆ ಉಚಿತ ಟಿಕೆಟ್  ಮಾಡಿಸಿಕೊಂಡ ಬಾಲಕಿ, ತಮ್ಮನಿಗೆ ಉಚಿತ ಪ್ರಯಾಣದ ಟಿಕೆಟ್ ಮಾಡಿಸಿದ್ದಳು. ತಮ್ಮನ ಜೊತೆಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರೆಗೂ ಪ್ರಯಾಣ ಬೆಳೆಸಿದ್ದಳು. ಈ ಮಧ್ಯೆ ಪೋಷಕರು ಮಕ್ಕಳು ಕಾಣದೇ ಪೊಲೀಸರ ಮೊರೆ ಹೋಗಿದ್ದರು. ಇನ್ನೂ ಪೊಲೀಸರು ಸಹ ತಡಮಾಡದೇ  ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಕ್ಕಳು ಬ್ಯಾಗ್ ಹಿಡಿದುಕೊಂಡು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗಿರುವುದು ಕಾಣಿಸಿದೆ. ಬಸ್​ನಿಲ್ದಾಣದ ದೃಶ್ಯಗಳನ್ನ ಪರಿಶೀಲಿಸಿದ ಅವರಿಗೆ ಇಬ್ಬರು ಮಕ್ಕಳು ಶಿವಮೊಗ್ಗದ ಬಸ್ ಹತ್ತಿರುವುದು ಗೊತ್ತಾಗಿತ್ತು. 

ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​

ಬಸ್​ ನಂಬರ್​ ಪಡೆದು ಸಾರಿಗೆ ಇಲಾಖೆಯ ಸಹಾಯದೊಂದಿಗೆ ಪೊಲೀಸರು ಅಲರ್ಟ್ ಆಗಿ ಎಲ್ಲಾ ಸ್ಟೇಷನ್​ಗೆ ಮಾಹಿತಿ ನೀಡಿದ್ರು. ಈ ಮಧ್ಯೆ ಭದ್ರಾವತಿಯಲ್ಲಿ ಮಕ್ಕಳನ್ನು ಗಮನಿಸಿದ ಸಾರ್ವಜನಿಕರು, ಬಸ್​ನಲ್ಲಿದ್ದ ಮಕ್ಕಳನ್ನ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬೆಂಗಳೂರು ಪೊಲೀಸರು ಮಕ್ಕಳನ್ನ ರಕ್ಷಣೆ ಮಾಡಿ ಸುರಕ್ಷಿತವಾಗಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬಳಿಕ ಮಕ್ಕಳಿಗೆ ಕೌನ್ಸಿಲಿಂಗ್ ನಡೆಸಿ ಪೋಷಕರ ಸುಪರ್ಧಿಗೆ ಒಪ್ಪಿಸಲಾಗಿದೆ. 

Bengaluru Teens Run Away to Bhadravati After Scolding
Bengaluru Teens Run Away to Bhadravati After Scolding

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಬೆಂಗಳೂರಿನಿಂದ ಭದ್ರಾವತಿಗೆ ಓಡಿ ಹೋದ ಅಕ್ಕ-ತಮ್ಮ: ಶಕ್ತಿ ಯೋಜನೆ ಬಳಸಿ ಬಸ್ ಪ್ರಯಾಣ, ಮಕ್ಕಳು ಸುರಕ್ಷಿತ
Bengaluru Teens Run Away to Bhadravati After Scolding: Found Safe Using Shakti Scheme

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ಮುಂದಿನ ಸುದ್ದಿ ಒದಿ