ಶಿವಮೊಗ್ಗ ಪಾಲಿಕೆಯಿಂದ ಒತ್ತುವರಿ ಹಾಗೂ ಟವರ್ ಬ್ಯಾನರ್ ತೆರವು ಕಾರ್ಯಾಚರಣೆ, ನಿಯಮ ಮೀರಿದರೆ ಬೀಳಲಿದೆ ದಂಡದ ಬಿಸಿ!

Shimoga City Corp’s ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯು ನಗರದ ಶಿಸ್ತು ಮತ್ತು ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಸಂಚಾರ ಪೊಲೀಸರ ಸಹಯೋಗದೊಂದಿಗೆ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ಅನಧಿಕೃತ ಪ್ಲೆಕ್ಸ್ ಬ್ಯಾನರ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಾಗಿದೆ. 

ಶಿವಮೊಗ್ಗ ಸೋಗಾನೆ ಜೈಲಿನಲ್ಲಿ ಗೋಡೆ ಮೇಲಿಂದ ಹಾರಿಬಂತು 230 ಗ್ರಾಂ ಗಾಂಜಾ-ಮೊಬೈಲ್..?

ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪಾದಚಾರಿ ಮಾರ್ಗಗಳು ಬೀದಿಬದಿ ವ್ಯಾಪಾರಿಗಳ ಪಾಲಾಗಿದ್ದು, ಸಾರ್ವಜನಿಕರು ರಸ್ತೆಯಲ್ಲೇ ನಡೆದಾಡುವ ದುಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಆಡಳಿತವು ಪಾದಚಾರಿ ಸ್ನೇಹಿ ವಾತಾವರಣ ನಿರ್ಮಿಸಲು ಪಣ ತೊಟ್ಟಿದೆ. ಈ ಕುರಿತು ಮಲೆನಾಡು ಟುಡೆಯ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ನಮ್ಮೊಂದಿಗೆ ಹಲವು ವಿಷಯಗಳನ್ನ ಹಂಚಿಕೊಂಡಿದ್ದಾರೆ.

ನಗರದ ವಿವಿಧ ವಾರ್ಡ್‌ಗಳಲ್ಲಿ ಹಾಗೂ ಪ್ರಮುಖ ರಸ್ತೆ ಬದಿಗಳಲ್ಲಿ ದೀರ್ಘಕಾಲದಿಂದ ಅನಾಥವಾಗಿ ಬಿಟ್ಟುಹೋಗಿದ್ದ ಹಳೆಯ ತಳ್ಳುವ ಗಾಡಿಗಳು, ಐಸ್‌ ಕ್ರೀಂ ಹಾಗೂ ತಿಂಡಿ ಗಾಡಿಗಳು, ಉಪಯೋಗಕ್ಕೆ ಬಾರದ ವಾಹನದ ಬಿಡಿಭಾಗಗಳು ಮತ್ತು ಪಾದಚಾರಿಗಳಿಗೆ ಅಡ್ಡಿಯುಂಟುಮಾಡುತ್ತಿದ್ದ ತಟ್ಟೆಯಂತಹ ರಚನೆಗಳನ್ನು ತೆರವುಗೊಳಿಸಲು ಪಾಲಿಕೆ ಈಗಾಗಲೇ ಸಾರ್ವಜನಿಕ ಪ್ರಕಟಣೆ ಮೂಲಕ ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆಯ ನಲ್ಕ್ (NULM) ಶಾಖೆ ಮತ್ತು ಸಂಚಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮೆಗ್ಗಾನ್ ಆಸ್ಪತ್ರೆ ಸುತ್ತಮುತ್ತಲಿದ್ದ ಅನುಪಯುಕ್ತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಗುಜರಿ (Scrap) ಎಂದು ಪರಿಗಣಿಸಿ ವಿಲೇವಾರಿ ಮಾಡಲಾಗಿದೆ.

ಇದೇ ವೇಳೆ ಬೀದಿಬದಿ ವ್ಯಾಪಾರಿಗಳು ಜೀವನೋಪಾಯಕ್ಕಾಗಿ ಶಿಸ್ತುಬದ್ಧವಾಗಿ ವ್ಯಾಪಾರ ನಡೆಸುವುದಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ, ನಿಯಮಾನುಸಾರ ಇರುವ ಗಾಡಿಗಳ ಮಾಲೀಕರಿಗೆ 1000 ರೂಪಾಯಿ ದಂಡ ವಿಧಿಸಿ, ಲಿಖಿತ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಹಿಂತಿರುಗಿಸಲಾಗಿದೆ. ಪಾದಚಾರಿ ಮಾರ್ಗಗಳ ಮೇಲೆ ಅಳವಡಿಸಲಾಗಿದ್ದ ಜಾಹೀರಾತು ಫಲಕಗಳನ್ನು ಸಹ ತೆರವುಗೊಳಿಸಲಾಗಿದ್ದು, ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.

Shimoga City Corp’s ಟವ‌ರ್ ಬ್ಯಾನರ್‌ಗಳಿಗೆ ಬೀಳಲಿದೆ ಬ್ರೇಕ್

ನಗರದ ಅಂದಗೆಡಿಸುತ್ತಿರುವ ಬೃಹತ್ ಟವ‌ರ್ ಬ್ಯಾನರ್‌ಗಳ ಮೇಲೂ ಪಾಲಿಕೆ ಕೆಂಪು ಕಣ್ಣು ಬೀರಿದೆ. ಇತ್ತೀಚೆಗೆ ನಗರದಲ್ಲಿ 20 ರಿಂದ 30 ಅಡಿ ಎತ್ತರದ ಟವರ್ ಬ್ಯಾನರ್‌ಗಳನ್ನು ಅಳವಡಿಸುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಬ್ಯಾನರ್‌ಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಬ್ಯಾನರ್ ಅಳವಡಿಸಲು ಇಚ್ಚಿಸುವವರು ಕಡ್ಡಾಯವಾಗಿ ಪಾಲಿಕೆಯಿಂದ ಅನುಮತಿ ಪಡೆಯಬೇಕು. ಪಾಲಿಕೆ ಗುರುತಿಸಿದ ನಿಗದಿತ ಸ್ಥಳಗಳಲ್ಲಿ ಮಾತ್ರ, ಸಂಚಾರಕ್ಕೆ ಅಡ್ಡಿಯಾಗದಂತೆ ಸಣ್ಣ ಗಾತ್ರದ ಪ್ಲೆಕ್ಸ್‌ಗಳನ್ನು ಹಾಕಲು ಅವಕಾಶ ನೀಡಲಾಗುವುದು. ನಿಯಮ ಮೀರಿ ಟವರ್ ಪ್ಲೆಕ್ಸ್ ಅಥವಾ ಕಟೌಟ್ ಹಾಕಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತ ಮಾಯಣ್ಣ ಗೌಡ ಸ್ಪಷ್ಟಪಡಿಸಿದ್ದಾರೆ.

ಐತಿಹಾಸಿಕ ಕೋಟೆ ಮಾರಿಕಾಂಬಾ ಜಾತ್ರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತು ಬೇಸಿಗೆಯ ಆರಂಭವಾಗುತ್ತಿರುವುದರಿಂದ ನಗರದಲ್ಲಿ ನೈರ್ಮಲ್ಯ ಕಾಪಾಡಲು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರು ವಿಶೇಷ ಆದ್ಯತೆ ನೀಡಿದ್ದಾರೆ. ಸಾಂಕ್ರಾಮಿಕ ರೋಗಗಳನ್ನು ತಡೆಯಲು ಎಲ್ಲಾ ವಾರ್ಡ್‌ ಗಳಲ್ಲಿ ಕ್ರಿಮಿನಾಶಕ ಮತ್ತು ಕೀಟನಾಶಕ ಸಿಂಪಡಿಸಲಾಗುತ್ತಿದೆ. ಮುಂಬರುವ ಮಳೆಗಾಲಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮವಾಗಿ ರಾಜಕಾಲುವೆ ಮತ್ತು ಚರಂಡಿಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸ್ವಚ್ಛತೆ ವಿಚಾರದಲ್ಲಿ ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಬೇಕು. ತಪ್ಪಿದಲ್ಲಿ ದಂಡ ವಿಧಿಸುವ ಮೂಲಕ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.

Shimoga City Corp’s ‘Operation Clean’ Begins

Shimoga City Corp's 'Operation Clean' Begins
Shimoga City Corp’s ‘Operation Clean’ Begins
shivamogga car decor sun control house
shivamogga car decor sun control house