ಶಿವಮೊಗ್ಗ: ಕಂಪನಿಯ ಇಮೇಲ್ ಹ್ಯಾಕ್ ಮಾಡಿ 8.89 ಲಕ್ಷ ರೂ. ದೋಚಿದ ಸೈಬರ್ ವಂಚಕರು!

This Article Written by / Prathapa thirthahalli / ಫೆಬ್ರವರಿ 5, 2026

Email Hack Scam Shivamogga Firm Robbed 8.89 Lakh

ಶಿವಮೊಗ್ಗ | ಶಿವಮೊಗ್ಗದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಯೊಂದಕ್ಕೆ ಸೈಬರ್ ಖದೀಮರು ಬರೋಬ್ಬರಿ 8,89,950 ರೂಪಾಯಿಗಳನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.  ಈ ಹಿನ್ನೆಲೆ ಕಂಪನಿಯ ಮ್ಯಾನೇಜರ್​ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ  

ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿರುವ ಪ್ರೈವೇಟ್​ ಲಿಮಿಟೆಡ್​  ಕಂಪನಿಯು ಬೆಂಗಳೂರಿನ ಸಂಸ್ಥೆಯೊಂದಿಗೆ ಕಚ್ಚಾ ಸಾಮಗ್ರಿ ಖರೀದಿಗಾಗಿ ವ್ಯವಹಾರ ನಡೆಸುತ್ತಿತ್ತು. ವಾಡಿಕೆಯಂತೆ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಲಾಗುತ್ತಿತ್ತು. 

 ಆದರೆ ಜನೆವರಿ 27 ರಂದು ಬೆಂಗಳೂರಿನ ಕಂಪನಿಯ ಹೆಸರಿನಲ್ಲಿ ವಂಚಕರು ಇಮೇಲ್ ಒಂದನ್ನು ಕಳುಹಿಸಿದ್ದರು. ನಾವು ನಮ್ಮ ಬ್ಯಾಂಕ್ ಖಾತೆಯನ್ನು ಎಸ್‌ಬಿಐನಿಂದ ಸೌತ್ ಇಂಡಿಯನ್ ಬ್ಯಾಂಕ್‌ಗೆ ಬದಲಾಯಿಸಿದ್ದೇವೆ, ಮುಂದಿನ ಪಾವತಿಗಳನ್ನು ಈ ಹೊಸ ಖಾತೆಗೆ ಮಾಡಿ ಎಂದು ಅದರಲ್ಲಿ ತಿಳಿಸಲಾಗಿತ್ತು. ಇದನ್ನು ನಿಜವೆಂದು ನಂಬಿದ ಇಂಜಿನಿಯರಿಂಗ್ ಕಂಪನಿಯ ಅಕೌಂಟ್ಸ್ ಮ್ಯಾನೇಜರ್ ಜನೆವರಿ 28 ರಂದು 8.89 ಲಕ್ಷ ರೂಪಾಯಿಗಳನ್ನು ಆ ಖಾತೆಗೆ ವರ್ಗಾಯಿಸಿದ್ದಾರೆ. 

ನಂತರ ಪರಿಶೀಲಿಸಿದಾಗ, ಬೆಂಗಳೂರಿನ ಕಂಪನಿಯ ಮೂಲ ಇಮೇಲ್ ಐಡಿಯನ್ನು ಹೋಲುವಂತೆ ನಕಲಿ ಇಮೇಲ್ ಸೃಷ್ಟಿಸಿ ಅಥವಾ ಹ್ಯಾಕ್ ಮಾಡಿ ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ. ಅಪರಿಚಿತರು ಕಂಪನಿಯ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ನೀಡಿ ಹಣ ಲೂಟಿ ಮಾಡಿದ್ದಾರೆ. 

ಈ ಸಂಬಂಧ ಕಂಪನಿಯ ಅಕೌಂಟ್ ಮತ್ತು ಫೈನಾನ್ಸ್ ಮ್ಯಾನೇಜರ್ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Email Hack Scam Shivamogga Firm Robbed 8.89 Lakh

Email Hack Scam Shivamogga Firm Robbed 8.89 Lakh
Email Hack Scam Shivamogga Firm Robbed 8.89 Lakh

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Shivamogga cyber crime

ಮುಂದಿನ ಸುದ್ದಿ ಒದಿ