Bajaj Chetak Electric ಶಿವಮೊಗ್ಗ | ಐಕಾನಿಕ್ ಚೇತಕ್ ಹೆಸರನ್ನು ಎಲೆಕ್ಟ್ರಿಕ್ ರೂಪದಲ್ಲಿ ಮರಳಿ ತಂದ ಬಜಾಜ್ ಕಂಪನಿಯು ಇವಿ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಸದ್ಯ ಚೇತಕ್ ಸರಣಿಯಲ್ಲಿ ಐದು ವಿಭಿನ್ನ ವೇರಿಯಂಟ್‌ಗಳು ಲಭ್ಯವಿದ್ದು, ನಿಮ್ಮ ಬಜೆಟ್ ಮತ್ತು ಅಗತ್ಯಕ್ಕೆ ತಕ್ಕಂತೆ ಸರಿಯಾದ ಮಾದರಿಯನ್ನು ಆಯ್ಕೆ ಮಾಡುವುದು ಸ್ವಲ್ಪ ಗೊಂದಲಮಯವಾಗಿರಬಹುದು.
ಶಿವಮೊಗ್ಗ: ಬೈಕ್ ಅಪಘಾತ ,ಬಿಟಿವಿ ವರದಿಗಾರ ಅನಿಲ್ ನಿಧನ
ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಐದು ಮಾದರಿಗಳಲ್ಲಿ ಲಭ್ಯವಿದ್ದು, ಆರಂಭಿಕ ಬೆಲೆ ₹87,100 ರಿಂದ ಶುರುವಾಗುತ್ತದೆ. ಎಕ್ಸ್ ಶೋರೂಂ ಬೆಲೆಚೇತಕ್ 2501₹87,100 ಚೇತಕ್ 3001₹1,02,505 ಚೇತಕ್ 3503 ₹1,09,605 ಚೇತಕ್ 3502 ₹1,22,605 ಚೇತಕ್ 3501 ₹1,34,6052. ರೂಪಾಯಿ ಬೆಲೆಯನ್ನು ನಿಗದಿಪಡಿಸಲಾಗಿದೆ
ಇನ್ನೂ ಬ್ಯಾಟರಿ ಸಾಮರ್ಥ್ಯವನ್ನು ನೋಡುವುದಾದರೆ ಗಾತ್ರಕ್ಕೆ ಅನುಗುಣವಾಗಿ ಸ್ಕೂಟರ್ ಕ್ರಮಿಸುವ ದೂರ ಬದಲಾಗುತ್ತದೆ.
ಚೇತಕ್ 2501: 2.5 kWh ಬ್ಯಾಟರಿ | 113 ಕಿ.ಮೀ ರೇಂಜ್. ಚೇತಕ್ 3001: 3.0 kWh ಬ್ಯಾಟರಿ | 127 ಕಿ.ಮೀ ರೇಂಜ್. ಚೇತಕ್ 3503/3502/3501: 3.5 kWh ಬ್ಯಾಟರಿ | 151 ರಿಂದ 153 ಕಿ.ಮೀ ವರೆಗೆ ರೇಂಜ್ ನೀಡುತ್ತವೆ.
ಬ್ಯಾಟರಿ ಸಾಮರ್ಥ್ಯದ ಆಧಾರದ ಮೇಲೆ 0-80% ಚಾರ್ಜ್ ಆಗಲು ತೆಗೆದುಕೊಳ್ಳುವ ಸಮಯ ವ್ಯತ್ಯಾಸವಾಗುತ್ತದೆ. ಎಂಟ್ರಿ ಲೆವೆಲ್ 2501 ಮಾದರಿಯು ಕೇವಲ 2 ಗಂಟೆ 25 ನಿಮಿಷಗಳಲ್ಲಿ ಚಾರ್ಜ್ ಆದರೆ, ಟಾಪ್ ಎಂಡ್ 3501 ಮಾದರಿಯು 3 ಗಂಟೆ ತೆಗೆದುಕೊಳ್ಳುತ್ತದೆ.
ವೇಗದಲ್ಲೂ ಕೂಡ ವೇರಿಯಂಟ್‌ಗಳ ನಡುವೆ ವ್ಯತ್ಯಾಸವಿದೆ. 2501 ಮಾದರಿಯು ಗರಿಷ್ಠ 60 ಕಿ.ಮೀ ವೇಗ ಹೊಂದಿದ್ದರೆ, ಟಾಪ್ ವೇರಿಯಂಟ್‌ಗಳಾದ 3501 ಮತ್ತು 3502 ಗಂಟೆಗೆ 73 ಕಿ.ಮೀ ವೇಗದಲ್ಲಿ ಚಲಿಸಬಲ್ಲವು. ವಿಶೇಷವೆಂದರೆ, ಟಾಪ್ ಎರಡು ಮಾಡೆಲ್‌ಗಳಲ್ಲಿ ಮುಂಭಾಗದ ಡಿಸ್ಕ್ ಬ್ರೇಕ್ ನೀಡಲಾಗಿದ್ದು, ಉಳಿದವುಗಳಲ್ಲಿ ಡ್ರಮ್ ಬ್ರೇಕ್‌ಗಳಿವೆ.
ಇನ್ನೂ ಬೆಲೆ ಹೆಚ್ಚಾದಂತೆ ಸೌಲಭ್ಯಗಳೂ ಹೆಚ್ಚುತ್ತವೆ. 2501 ಮಾದರಿಯಲ್ಲಿ ಆಪ್ ಕನೆಕ್ಟಿವಿಟಿ ಇಲ್ಲದಿದ್ದರೆ, 3501 ಮತ್ತು 3502 ಮಾದರಿಗಳಲ್ಲಿ ಫುಲ್ ಆಪ್ ಕನೆಕ್ಟಿವಿಟಿ ಲಭ್ಯವಿದೆ. ಇಕೋ ಮತ್ತು ಸ್ಪೋರ್ಟ್ಸ್ ಮೋಡ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರಿವರ್ಸ್ ಮೋಡ್‌ಗಳು ಎಲ್ಲಾ ಮಾದರಿಗಳಲ್ಲೂ ಲಭ್ಯವಿವೆ.
Bajaj Chetak Electric Complete Guide to 5 Variants


