LPG Protest ಶಿವಮೊಗ್ಗ: ಕೇಂದ್ರ ಸರ್ಕಾರದ ಅಡುಗೆ ಅನಿಲ (ಸಿಲಿಂಡರ್) ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ನಗರದ ಶಿವಪ್ಪನಾಯಕ ವೃತ್ತದಲ್ಲಿ ವಿನೂತನ ಪ್ರತಿಭಟನೆ ಹಮ್ಮಿಕೊಂಡಿತ್ತು. ರಸ್ತೆಯಲ್ಲೇ ಸೌದೆ ಒಲೆ ಹಚ್ಚಿ ಚಹಾ ತಯಾರಿಸುವ ಮೂಲಕ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿರುವುದನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.
ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೀತು, ಇ-ಪೇಪರ್ ಓದಿ
ಪ್ರತಿಭಟನೆಯ ವೇಳೆ ತಯಾರಿಸಿದ ಚಹಾವನ್ನು ಸ್ಥಳೀಯರಿಗೆ ವಿತರಿಸಲಾಗುತ್ತಿತ್ತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಹೂವಿನ ವ್ಯಾಪಾರಿಯೊಬ್ಬರಿಗೆ ಚಹಾ ನೀಡಲು ಹೋದಾಗ, ಇಬ್ಬರ ನಡುವೆ ಬೆಲೆ ಏರಿಕೆ ವಿಚಾರವಾಗಿ ತೀವ್ರ ಸ್ವರೂಪದ ಚರ್ಚೆ ನಡೆಯಿತು. ಸಿಲಿಂಡರ್ ಬೆಲೆ ಗಗನಕ್ಕೇರಿದೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕಾರ್ಯಕರ್ತೆ ಪ್ರಶ್ನಿಸಿದಾಗ, ವ್ಯಾಪಾರಿ ಈ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ನೇರವಾಗಿ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಕಾರ್ಯಕರ್ತೆ, ನಮ್ಮ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡುತ್ತಿದೆ. ನಾವು ಜನಪರ ಕೆಲಸ ಮಾಡುತ್ತಿದ್ದೇವೆ ಎಂದು ಸರ್ಕಾರದ ಪರವಾಗಿ ಮಾತಡಿದರು. ಆಗ ವ್ಯಾಪಾರಿಯು, ಮಹಿಳೆಯರಿಗೆ ಹಣ ನೀಡುತ್ತಿದ್ದೀರಿ ಸರಿ, ಆದರೆ ಪುರುಷರಿಗೆ ನಿಮ್ಮ ಕೊಡುಗೆ ಏನು? ಎಂದು ಮರುಪ್ರಶ್ನೆ ಹಾಕಿದರು.
ಮಾತು ಮುಂದುವರಿಸಿದ ಕಾರ್ಯಕರ್ತೆ, ಮನೆಗೆ ಬರುವ 2,000 ರೂಪಾಯಿಯನ್ನು ನಿಮ್ಮ ಪತ್ನಿ ನಿಮಗೆ ನೀಡುತ್ತಾರೆ, ಅದರಿಂದ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸಹಕಾರಿಯಾಗುತ್ತದೆ ಎಂದರು. ಈ ಉತ್ತರಕ್ಕೆ ಅಸಮಾಧಾನಗೊಂಡ ವ್ಯಾಪಾರಿ, ನಾನು ವರ್ಷಕ್ಕೆ 3.5 ಲಕ್ಷ ರೂಪಾಯಿ ಶಾಲಾ ಫೀಸ್ ಕಟ್ಟುತ್ತೇನೆ. ನೀವು ನೀಡುವ ಹಣ ಯಾವುದಕ್ಕೂ ಸಾಲುವುದಿಲ್ಲ. ಕೇವಲ ಹಣ ನೀಡಿ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದ್ದೀರಿ ಎಂದು ಬೇಸರ ಹೊರ ಹಾಕಿದರು.
LPG Protest Vendor Slams Congress in Shimoga


