SHIVAMOGGA NEWS TODAY

ಗೃಹಸಚಿವ ತವರಲ್ಲಿ ನಡೆದ ಕೊಲೆ, ಮಲ್ನಾಡ್​ನಲ್ಲಾಗದೇ ಇರಲಿ!  ಚುರುಕಾಗಲೇ ಬೇಕು ಮನೆ-ಮನೆಗೆ ಪೊಲೀಸ್  ಜೆಪಿ ಬರೆಯುತ್ತಾರೆ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Asare Scheme ಶಿವಮೊಗ್ಗ : ಗೃಹ ಮಂತ್ರಿ ಜಿ. ಪರಮೇಶ್ವರ್ ತವರು ಜಿಲ್ಲೆ ತುಮಕೂರಿನ ಕುಣಿಗಲ್ ತಾಲೂಕು ಹುಲಿಯೂರು ದುರ್ಗ ಹೋಬಳಿ ಉಜ್ಜನಿ ಗ್ರಾಮದಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ನಾಗಮ್ಮ (70) ವಯೋವೃದ್ದೆಯನ್ನು ನೆನ್ನೆ  ಹಣದಾಸೆಗೆ ಕೊಲೆ ಮಾಡಿದ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಪೊಲೀಸ್ ವ್ಯವಸ್ಥೆಯನ್ನು ಕೂಡ ಪ್ರಶ್ನಿಸುವಂತೆ ಮಾಡಿದೆ. ಇದಕ್ಕೆ ಕಾರಣ ಮನೆ- ಮನೆಗೆ ಪೊಲೀಸ್ ಮತ್ತು ಅದರಡಿ ಬರುವ ಆಸರೆ ಕಾರ್ಯಕ್ರಮ. ವೃದ್ಧೆ ಒಬ್ಬಂಟಿಯಾಗಿರುವುದರಿಂದ ಮನೆಗೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ವೃದ್ಧೆಯ ಮನೆಗೆ ಈ ಹಿಂದೆ ಬೀಟ್ ಪೊಲೀಸರು ಹೋಗಿದ್ದೇ ಆಗಿದ್ದಲ್ಲಿ ನಾಗಮ್ಮರ ಮನೆ ಮುಂದೆ ಪೊಲೀಸ್ ನಂಬರ್ ಚೀಟಿ ಹಚ್ಚಿ ಬಂದಿರುತ್ತಾರೆ. ಆದರೆ ಗ್ರಾಮೀಣ ಪ್ರದೇಶಗಳ ಪ್ರತಿ ಮನೆಗಳನ್ನು ಪೊಲೀಸರು ಭೇಟಿ ಮಾಡಿದ್ದಾರಾ ಎಂಬ ಅನುಮಾನಗಳಿಗೆ ಈಗ ರೆಕ್ಕೆಪುಕ್ಕಗಳು ಗರಿಗೆದರಿವೆ.

ಶಿವಮೊಗ್ಗ: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ ; ಮಿಸ್ ಮಾಡ್ಕೋಬೇಡಿ!

ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ನಗರ ಪ್ರದೇಶದಲ್ಲಿ ಪೊಲೀಸರು ಕೆಲಸ ಮಾಡಿರುವುದು ಕಣ್ಣಿಗೆ ಕಾಣುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಈ ಕಾರ್ಯಕ್ರಮ ಅಷ್ಟೊಂದು ಯಶಸ್ಸನ್ನು ಕಂಡಿಲ್ಲ.ಹೊಸನಗರ, ಸಾಗರ,ತೀರ್ಥಹಳ್ಳಿ ಸೊರಬ ತಾಲೂಕಿನ ದುರ್ಗಮ ಪ್ರದೇಶದಲ್ಲಿರುವ ಪ್ರತಿ ಮನೆಗಳನ್ನು ಪೊಲೀಸರು ಭೇಟಿ ಮಾಡಿ ಬೀಟ್ ಪೊಲೀಸರ ಮೊಬೈಲ್ ನಂಬರ್ ಇರುವ ಚೀಟಿ ಅಂಟಿಸಿರುವುದೇ ಅನುಮಾನವಾಗಿದೆ. 

ಅದರಲ್ಲೂ ಒಂಟಿ ಮನೆಗಳಲ್ಲಿರುವ ವೃದ್ಧರಿಗೆ, ಒಬ್ಬಂಟಿಯಾಗಿ ಬದುಕು ಸಾಗಿಸುತ್ತಿರುವವರಿಗೆ ಸಹಾಯ ಮಾಡುವ ಆಸರೆ ಯೋಜನೆ ಸಮರ್ಪಕವಾಗಿ ಕಾರ್ಯಗತವಾಗಿಲ್ಲ. ತುಮಕೂರು ಜಿಲ್ಲೆಯಲ್ಲಿ ಒಂಟಿ ಮನೆಯಲ್ಲಿದ್ದ ವೃದ್ಧೆ ನಾಗಮ್ಮ ಕೊಲೆ ಪ್ರಕರಣ ಗಮನಿಸಿದಾಗ, ಅದಕ್ಕೂ ಮುನ್ನ ಆಸರೆ ಕಾರ್ಯಕ್ರಮದಡಿ ನಾಗಮ್ಮರ ಹೆಸರು ರಿಜಿಸ್ಟರ್ ಆಗಿತ್ತಾ ಎಂಬುದು ಪ್ರಶ್ನೆಯಾಗಿ ಉಳಿಯುತ್ತದೆ. ಒಂದು ವೇಳೆ ನಾಗಮ್ಮರ ಹೆಸರು ನೊಂದಣಿಯಾಗಿದ್ದರೆ, ಬೀಟ್ ಪೊಲೀಸರು ಆ ಮನೆಯನ್ನು ಎಷ್ಟು ಬಾರಿ ಭೇಟಿ ಮಾಡಿದ್ದರು. ನಾಗಮ್ಮರ ಸಮಸ್ಯೆಗೆ ಸ್ಪಂಧಿಸಿದ್ದರೇ ..ನಾಗಮ್ಮರ ಪೂರ್ವಾಪರದ ವಿವರಗಳನ್ನು ದಾಖಲಿಸಿದ್ದರಾ ಎಂಬುದನ್ನು ಬಹಿರಂಗಪಡಿಸಬೇಕಾಗುತ್ತದೆ. 

ಆಸರೆ ಎನ್ನುವ ಕಾರ್ಯಕ್ರಮ ಸಮರ್ಪಕವಾಗಿ ಜಾರಿಯಾದರೆ, ಪೊಲೀಸರೇ ನಿಜವಾದ ಹೀರೋ ಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಆಸರೆ ಕಾರ್ಯಕ್ರಮದಲ್ಲಿ ವಯೋವೃದ್ಧರಿಗೆ ಎಲ್ಲಾ ರೀತಿಯ ಸ್ಪಂದನೆ, ನೆರವು, ಸಹಾಯ ಮಾಡುವುದು ಪೊಲೀಸರ ಆದ್ಯ ಕರ್ತವ್ಯವಾಗಿದೆ. 

ಬಹುಮುಖ್ಯವಾಗಿ ಮಲೆನಾಡಿನಲ್ಲಿ ಒಂಟಿ ಮನೆ ಸಂಸ್ಕೃತಿ ಇದೆ. ಇಲ್ಲಿನ ಮನೆಗಳಲ್ಲಿ ಯುವಜನತೆ ಎಲ್ಲಾ ಹೊರದೇಶ, ಹೊರರಾಜ್ಯ ಸೇರಿದಂತೆ ಬೆಂಗಳೂರಿನಲ್ಲಿ ನೆಲೆಸಿದೆ. ಬಹುತೇಕ ವಯಸ್ಸಾದ ತಂದೆ ತಾಯಂದಿರು ಒಂಟಿ ಮನೆಗಳಲ್ಲಿ ವಾಸವಾಗಿದ್ದಾರೆ. ಕೆಲವರು ಒಬ್ಬಂಟಿಯಾಗಿ ಒಂಟಿ ಮನೆಗಳಲ್ಲಿದ್ದಾರೆ. ಆಸರೆ ಕಾರ್ಯಕ್ರಮದಡಿಯಲ್ಲಿ ಪೊಲೀಸರು ಎಷ್ಟು ಒಂಟಿ ಮನೆಗಳನ್ನು ಪತ್ತೆ ಮಾಡಿದ್ದಾರೆ. ಎಷ್ಟು ವಯೋವೃದ್ಧರನ್ನು ಗುರುತಿಸಿ ದಾಖಲಿಸಿದ್ದಾರೆ. ಎಷ್ಟು ವಯೋವೃದ್ಧರಿಗೆ ಪೊಲೀಸರು ನೆರವಾಗಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕಿದೆ. 

Asare Scheme ಈಗಾಗಲೇ ಮಲೆನಾಡಿನ ಒಂಟಿ ಮನೆಗಳಲ್ಲಿ ನಡೆದಿರುವ ಜೋಡಿ ಕೊಲೆಗಳನ್ನು ಪೊಲೀಸರು ಈವರೆಗೂ ಭೇದಿಸಲು ಸಾಧ್ಯವಾಗಿಲ್ಲ, ಸಾಗರ ತಾಲೂಕಿನ ಬ್ಯಾಕೋಡು, ಸೊರಬದ ಆವನಟ್ಟಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಗಳನ್ನು ಪೊಲೀಸರು ಈವರೆಗೂ ಭೇದಿಸಲು ಸಾಧ್ಯವಾಗಿಲ್ಲ. ಸಾಗರ ಹೊಸನಗರ ತೀರ್ಥಹಳ್ಳಿ ತಾಲೂಕಿನ ಗ್ರಾಮೀಣ ಭಾಗಗಳ ಪ್ರತಿ ಮನೆಗಳು ಪೊಲೀಸರ ಹದ್ದಿನ ಕಣ್ಣಿನಲ್ಲಿರಬೇಕು. ಒಂಟಿ ಮನೆಗಳಲ್ಲಿರುವ ಜನರಿಗೆ ಧೈರ್ಯ ಸ್ಥೈರ್ಯ ತುಂಬಬೇಕು ಆಸರೆ ವ್ಯಾಪ್ತಿಗೆ ಬರುವ ವೃದ್ದರಿಗೆ ಸಹಾಯ ಹಸ್ತ ನೀಡಬೇಕಿದೆ.

Asare Scheme Ensuring Safety for Malnad

Asare Scheme Ensuring Safety for Malnad
Asare Scheme Ensuring Safety for Malnad
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.