SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024
ಎಟಿಎಂನಲ್ಲಿ ಹಣ ಬಿಡಿಸಲು ಹೋದ ಮಹಿಳೆಗೆ ಶಾಕ್
ATM ನಲ್ಲಿ ಮಹಿಳೆಯೊಬ್ಬರಿಗೆ ಹಣ ಬಿಡಿಸಲು ಸಹಾಯ ಮಾಡುವ ನೆಪದಲ್ಲಿ ಬಂದ ಅಪರಿಚಿತರು ಕಾರ್ಡ್ ಬದಲಾಯಿಸಿಕೊಂಡು ಮಹಿಳೆಯ ಅಕೌಂಟ್‌ನಿಂದ 44 ಸಾವಿರ ರೂಪಾಯಿ ಎಗಿಸಿದ್ದಾರೆ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನೆಹರು ರಸ್ತೆಯಲ್ಲಿರುವ ATM ಗೆ ಮಹಿಳೆಯೊಬ್ಬರು ಹಣ ಬಿಡಿಸಲು ಬಂದಿದ್ದಾರೆ. ಅವರು ಮಷಿನ್‌ಗೆ ಕಾರ್ಡ್ ಹಾಕಿದಾಗ ಆ ಕಾರ್ಡ್ ವರ್ಕ್ ಆಗಿರಲಿಲ್ಲ. ಈ ವೇಳೆ ಅಲ್ಲಿದ್ದ ಅಪರಿಚಿತರು ಅವರಿಗೆ ಸಹಾಯಕ್ಕೆ ಬಂದಿದ್ದಾರೆ. ಆಗಲು ಅಮೌಂಟ್ ತೆಗೆಯಲಾಗಲಿಲ್ಲ. ಹೀಗಾಗಿ ಮಹಿಳೆ ಮನೆಗೆ ವಾಪಸ್ ಆಗಿದ್ದಾರೆ. ಬಳಿಕ ಪತಿಯ ಎಟಿಎಂ ಕಾರ್ಡ್‌ನಿಂದ ಹಣ ಬಿಡಿಸಿದ್ದಾರೆ. ಈ ನಡುವೆ ಪತ್ನಿಯ ಅಕೌಂಟ್‌ನಿಂದ 44 ಸಾವಿರ ರೂಪಾಯಿ ವಿತ್ ಡ್ರಾ ಆಗಿರುವುದು ಪತಿಯ ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ, ಎಟಿಎಂ ಕಾರ್ಡ್ ಎಕ್ಸೇಚೆಂಜ್ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಹೆಂಚು ತೆಗೆದು ಕಳ್ತನ ಮಾಡಿದ್ದ ಆರೋಪಿ ಅರೆಸ್ಟ್
ಸೊರಬ ಪೊಲೀಸರು ಕಳ್ಳತನ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆತನಿಂದ ಒಂದು ಲಕ್ಷ ರೂಪಾಯಿ ವ್ಯಾಲ್ಯು ಇರುವ ಚಿನ್ನ ಹಾಗೂ ನಗದನ್ನ ಜಪ್ತಿ ಮಾಡಿದ್ದಾರೆ. ಇಲ್ಲಿನ ಕಾನುಕೇರಿ ಬಡಾವಣೆಯಲ್ಲಿ ನಾಗರಾಜ್ ಎಂಬವರ ಮನೆಯ ಹೆಂಚು ತೆಗೆದು ಕಳ್ಳತನವೆಸಗಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಸೊರಬ ಪೊಲೀಸರು ಗೋಪಿ ದೇವೇಂದ್ರಪ್ಪ ಎಂಬಾತನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ನೀರು ಕೇಳಿ ದರೋಡೆ, 24 ಗಂಟೆಯಲ್ಲಿ ಸಿಕ್ಕಿಬಿದ್ದ ಅಪ್ರಾಪ್ತರು
ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿ ಮನೆಯೊಂದರ ಬಳಿಗೆ ಬಂದ ಅಪ್ರಾಪ್ತ ಬಾಲಕರು ಕುಡಿಯಲು ನೀರು ಕೇಳಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣವನ್ನು 24 ಗಂಟೆಯಲ್ಲಿ ಪೊಲೀಸರು ಭೇದಿಸಿದ್ದಾರೆ. ಅಪ್ರಾಪ್ತರು ವೃದ್ಧೆಯೊಬ್ಬರ ಮನೆಗೆ ಹೋಗಿ ನೀರು ಕೇಳಿದ್ದಾರೆ. ಆ ಬಳಿಕ ಅವರು ನೀರಲು ಒಳಗೆ ಹೋದ ಬೆನ್ನಲ್ಲೆ ಮನೆಯೊಳಗೆ ನುಗ್ಗಿ ಅವರ ಬಾಯಿಕಟ್ಟಿ ಚಿನ್ನ ಸರ ಕಿತ್ತುಕೊಂಡು ಹೋಗಿದ್ದರು. ಆ ಬಳಿಕ ಕೇಸ್ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು 24 ಗಂಟೆಯಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.
ಜಿಂಕೆ ಮಟನ್ ಬೇಯುತ್ತಿದ್ದಾಗಲೇ ಅರಣ್ಯ ಇಲಾಖೆ ದಾಳಿ
ಸಾಗರ ತಾಲ್ಲೂಕು ಸೂರನಗದ್ದೆಯಲ್ಲಿ ಜಿಂಕೆ ಶಿಕಾರಿ ಮಾಡಿದ ಆರೋಪದ ಅಡಿಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಜಿಂಕೆಯನ್ನ ಬೇಟೆ ಮಾಡಿ ಅದರ ಮಾಂಸ ಹಂಚಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾದ ಬೆನ್ನಲ್ಲೆ ಅರಣ್ಯ ಇಲಾಖೆ ಅಧಿಕಾರಿಗಳು ರೇಡ್ ನಡೆಸಿದ್ದಾರೆ. ಮನೆಯೊಂದರ ಮೇಲೆ ರೇಡ್ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಂಸವನ್ನ ಜಪ್ತು ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಆರೋಪಿ ಪರಾರಿಯಾಗಿದ್ದರು.

SUMMARY| Shivamogga crime news, sagara taluku news , soraba news today , kannada news online
KEY WORDS | Shivamogga crime news, sagara taluku news , soraba news today , kannada news online