ಬಿಜೆಪಿಯನ್ನು ಮೇಲ್ವರ್ಗದವರ ಪಕ್ಷ ಎಂದು ಕರೆಯುತ್ತಿದ್ದಾಗ ಅದಕ್ಕೆ ಟ್ವಿಸ್ಟ್ ಕೊಟ್ಟಿದ್ದು ಬಿ ಎಸ್ ವೈ: ಆರಗ ಜ್ಞಾನೇಂದ್ರ

Araga ಶಿವಮೊಗ್ಗ: ಬಿ.ಎಸ್. ಯಡಿಯೂರಪ್ಪನವರು ರಾಜಕಾರಣ ಆರಂಭ ಮಾಡುವ ಮೊದಲು ಬಿಜೆಪಿ ಪಕ್ಷವನ್ನು ಮೇಲ್ವರ್ಗದವರ ಪಕ್ಷ ಎಂದು ಕರೆಯುತ್ತಿದ್ದರು, ಆದರೆ ಸತತ ಹೋರಾಟದ ಮೂಲಕ ಅದಕ್ಕೆ ಟ್ವಿಸ್ಟ್ ಕೊಟ್ಟಿದ್ದು ಬಿ.ಎಸ್. ಯಡಿಯೂರಪ್ಪ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಮೇ 1 ರಿಂದ ಬೆಂಗಳೂರು-ಶಿವಮೊಗ್ಗ ಇಂಡಿಗೋ ಸೇವೆ ಸ್ಥಗಿತ, ಖಾಸಗಿ ನಿರ್ವಹಣೆ ಬಗ್ಗೆ ಚರ್ಚೆ, ಬಿವೈಆರ್ ಹೇಳಿದ್ಧೇನು 

ಮೇ 09 ರಂದು ಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರಾಜಕೀಯದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಬಿ.ಎಸ್.ವೈ ಅಭಿಮಾನೋತ್ಸವದ ಅಂಗವಾಗಿ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪನವರ ಹೋರಾಟದ ದಿನಗಳನ್ನು ಸ್ಮರಿಸುತ್ತಾ ಅವರು ಮಾತನಾಡಿದರು.

ಯಡಿಯೂರಪ್ಪ ಹಾಗೂ ನಾವು ಇಬ್ಬರೂ ಸಹ ಜೊತೆಯಾಗಿಯೇ ಸಾರ್ವಜನಿಕ ಜೀವನವನ್ನು ಆರಂಭಿಸಿದೆವು. ಯಡಿಯೂರಪ್ಪನವರು ಅನೇಕ ಜನಪರ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಹೋರಾಟದ ಸಿದ್ಧಾಂತದಿಂದ ಸಂಘಟನೆಯನ್ನು ಕಟ್ಟಿದ್ದು ಯಡಿಯೂರಪ್ಪನವರು. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಎಂದರೆ ಮೇಲ್ವರ್ಗದ ಪಾರ್ಟಿ ಎಂಬಂತೆ ಬಿಂಬಿತವಾಗಿತ್ತು. ಆದರೆ ಯಡಿಯೂರಪ್ಪನವರು ಜೀತ ಪದ್ಧತಿ ಇದ್ದ ದಿನಗಳಲ್ಲಿ ಅದರ ವಿರುದ್ಧ ಹೋರಾಟವನ್ನು ಮಾಡಿ ದಲಿತರನ್ನು ತಲುಪಿದರು. ನಂತರದ ದಿನಗಳಲ್ಲಿ ಬಗರ್ ಹುಕುಂ ವಿಚಾರವಾಗಿ ರೈತರ ಪರವಾಗಿ ಹೋರಾಟವನ್ನು ಮಾಡಿದ್ದರು. ಅದರ ಮೂಲಕ ಅವರು ಬಿಜೆಪಿ ಪಕ್ಷವನ್ನು ರೈತರ ಹೊಲಕ್ಕೆ ತಲುಪಿಸಿದರು. ಈ ಮೂಲಕ ಜನರ ಮನಸ್ಸಿನಲ್ಲಿದ್ದ ಬಿಜೆಪಿ ಮೇಲ್ವರ್ಗದವರ ಪಾರ್ಟಿ ಎಂಬ ಭಾವನೆಗೆ ಟ್ವಿಸ್ಟ್ ಕೊಟ್ಟಿದ್ದೇ ಯಡಿಯೂರಪ್ಪನವರು ಎಂದರು.

ಹಾಗೆಯೇ ಪ್ರಸ್ತುತ ರಾಜಕಾರಣ ಪ್ರವೇಶಿಸುತ್ತಿರುವ ಯುವಕರ ಬಗ್ಗೆ ಮಾತನಾಡಿದ ಅವರು, ರಾಜಕಾರಣಕ್ಕೆ ಪ್ರವೇಶ ಮಾಡುವ ಅನೇಕ ಯುವಕರು ಬಂದ ಕೂಡಲೇ ನಾವು ತಕ್ಷಣ ಗದ್ದುಗೆಗೆ ಏರಬೇಕು ಎಂಬ ಹಂಬಲದಲ್ಲಿ ಇರುತ್ತಾರೆ ಮತ್ತು ಅದಕ್ಕಾಗಿ ಶಾರ್ಟ್‌ಕಟ್‌ಗಳನ್ನು ಹುಡುಕುತ್ತಾರೆ. ಸಿದ್ಧಾಂತದ ಜಾಗದಲ್ಲಿ ಇಂದು ಜಾತಿ ಮತ್ತು ಹಣ ಬಂದು ಕೂತಿದೆ. ಇದರ ಆಧಾರದ ಮೇಲೆ ಗೆಲ್ಲುವುದು ಹಾಗೂ ರಾಜಕಾರಣ ಮಾಡುವುದು ಸಹಜವಾಗಿದೆ. ಆದರೆ ಯಡಿಯೂರಪ್ಪನವರು ಹಾಗೆ ಮಾಡಲಿಲ್ಲ, ರಾಜಕಾರಣದಲ್ಲಿ ಅವರು ಯಾವುದೇ ಶಾರ್ಟ್‌ಕಟ್‌ಗಳನ್ನು ಹುಡುಕಲಿಲ್ಲ. ಯಡಿಯೂರಪ್ಪನವರು ತಮ್ಮ ಸುದೀರ್ಘ ಜೀವನವನ್ನು ಹೋರಾಟದ ಮೂಲಕವೇ ಕಳೆಯುವುದರೊಂದಿಗೆ ರಾಜಕೀಯದಲ್ಲಿ ಯಶಸ್ವಿಯಾದರು ಎಂದು ಸ್ಮರಿಸಿದರು. ಮೇ 09 ರಂದು ನಡೆಯುವ ಈ ಸಮಾವೇಶ ಎಷ್ಟೋ ಜನರಿಗೆ ಸ್ಫೂರ್ತಿಯಾಗಲಿದೆ. ಇದರ ಮೂಲಕ ಸಾರ್ವಜನಿಕ ವ್ಯಕ್ತಿಗಳಿಗೆ ಇಂತಹದೊಂದು ವ್ಯಕ್ತಿತ್ವ ಇತ್ತು ಎನ್ನುವುದು ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಇದೇ ಸಂದರ್ಭದಲ್ಲಿ ಬಿ.ಎಸ್.ವೈ ಅಧಿಕಾರದಲ್ಲಿದ್ದಾಗ ಬಡವರಿಗೆ ಮಾಡಿದ ಸಹಾಯದ ಬಗ್ಗೆಯೂ ಮೆಲುಕು ಹಾಕಿದರು.

Araga Praises BSY Changing BJP s Image 

Araga Praises BSY Changing BJP s Image 
Araga Praises BSY Changing BJP s Image