KARNATAKA NEWS/ ONLINE / Malenadu today/ Aug 25, 2023 SHIVAMOGGA NEWS
ಚಂದ್ರಯಾನ 3 ನಲ್ಲಿರುವ ವಿಜ್ಞಾನಿಗಳಿಗೆ ಇದೀಗ ನಾಡಿನೆಲ್ಲೆಡೆ ವಿಶೇಷ ಗೌರವ ಸಲ್ಲಿಕೆಯಾಗುತ್ತಿದೆ. ಪ್ರತಿಯೊಬ್ಬರು ಚಂದ್ರಯಾನ್ 3 ನಲ್ಲಿ ಪಾಲ್ಗೊಂಡ ಇಸ್ರೋ ಸಿಬ್ಬಂದಿಯನ್ನು ಗುರುತಿಸಿ ಸೋಶಿಯಲ್ ಮೀಡಿಯಾದಲ್ಲಿ ಹೊಗಳುತ್ತಿದ್ದಾರೆ. ಅಲ್ಲದೆ ಇವರು ನಮ್ಮೂರಿನವರು ನಮ್ಮೂರಿನ ಹೆಮ್ಮೆ ಎಂದು ಪೋಸ್ಟ್ ಗಳನ್ನು ಹಾಕಿಕೊಳ್ಳುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಶಿವಮೊಗ್ಗದವರು ಸಹ ಚಂದ್ರಯಾನ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ. ಅವರುಗಳ ಪೈಕಿ ಓರ್ವರು ಕೋಣಂದೂರು ಲಿಂಗಪ್ಪನವರ ಪುತ್ರಿಯಾಗಿದ್ದಾರೆ. ತೀರ್ಥಹಳ್ಳಿ ತಾಲೂಕು ಕೋಣಂದೂರಿನ ಕೆ.ಎಲ್.ಶಿವಾನಿ ಅವರು ಇಸ್ರೋದ ಚಂದ್ರಯಾನ 3 ಯೋಜನೆ ಯಲ್ಲಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಇಸ್ರೋದ ಟೆಲಿಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್‌ವರ್ಕ್ ವಿಭಾಗದ ಡೆಪ್ಯೂಟಿ ಡೈರೆಕ್ಟರ್ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ವಿಜ್ಞಾನಿ ಕೆ.ಎಲ್.ಶಿವಾನಿ ಅವರು ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರ ಪುತ್ರಿ. ಚಂದ್ರಯಾನ 3 ಯಶಸ್ವಿ ಆಗುತ್ತಿದ್ದಂತೆ ಕೋಣಂದೂರು ಲಿಂಗಪ್ಪ ಅವರಿಗೆ ಸಂಬಂಗಳು, ಸ್ನೇಹಿತರು, ಹಿತೈಷಿಗಳು ಕರೆ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ.
ವಿಜ್ಞಾನಿ ಸುಬ್ರಮಣ್ಯ ಉಡುಪ ಸಹ ಸೇವೆ
ಇನ್ನೂ ಚಂದ್ರಯಾನ-3ರ ಯಶಸ್ಸಿಗೆ ಕಾರಣ ರಾದವರಲ್ಲಿ ತಾಲೂಕಿನ ಅರಳಸುರುಳಿ ಸಮೀಪದ ಈಚಲಸರ ಗ್ರಾಮದ ವಿಜ್ಞಾನಿ ಇ.ಜಿ.ಸುಬ್ರಮಣ್ಯ ಉಡುಪ ಕೂಡ ಒಬ್ಬರಾಗಿದ್ದಾರೆ. ಇಸ್ರೋ ಸಂಸ್ಥೆಯಲ್ಲಿ ಇವರು 35 ವರ್ಷಗಳಕಾಲ ಕಾರ್ಯನಿರ್ವಹಿಸಿ ಚಂದ್ರಯಾನ-3 ಉಪಗ್ರಹ ನಿರ್ಮಾಣದ ಕೊನೆಯ ಹಂತದಲ್ಲಿ ವಯೋನಿವೃತ್ತಿ ಹೊಂದಿದ್ದರು. ಸೇವೆಯಿಂದ ನಿವೃತ್ತರಾಗಿದ್ದರೂ ಇಸ್ರೋ ಸಂಸ್ಥೆ ಉಡುಪರನ್ನು ವಾಪಸ್ ಕರೆಸಿಕೊಂಡು, ಯಶಸ್ವಿ ಉಡಾವಣೆಗೆ ಇವರ ಸೇವೆ ಬಳಸಿಕೊಂಡಿದೆ. ಚಂದ್ರಯಾನ-2ರ ಉಡ್ಡಯನದಲ್ಲೂ ಇವರು ತಂತ್ರಜ್ಞರಾಗಿ ಕಾರ್ಯನಿರ್ವಹಿಸಿದ್ದರು. ಸುಬ್ರಮಣ್ಯ ಉಡುಪರ ತಂದೆ ಶಿಕ್ಷಕರಾಗಿದ್ದ ಗೊವಿಂದರಾಮ ಉಡುಪರ ಮೂವರು ಮಕ್ಕಳಲ್ಲಿ ಹಿರಿಯವರಾಗಿದ್ದು ಉತ್ತಮ ತಂತ್ರಜ್ಞರಾಗಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದರೂ ನಿವೃತ್ತಿ ನಂತರ ಈಚಲಸರದ ತಮ್ಮ ಕುಟುಂಬದ ಕೃಷಿ ಚಟುವಟಿಕೆಯಲ್ಲೂ ಸಕ್ರಿಯರಾಗಿದ್ದಾರೆ.
ರಾಮ್ ಎಸ್ಎನ್ ರವರ ಸೇವೆ!
ಇನ್ನೂ ಚಂದ್ರಯಾನದಲ್ಲಿ ಪಾಲ್ಗೊಂಡ ಮತ್ತೊಬ್ಬರು ಶಿವಮೊಗ್ಗದವರು ಯಾರು ಎಂದರೆ, ಅವರು ರಾಮ್ ಎಸ್.ಎನ್. ಇವರು ವಿಐಎಸ್‌ಎಲ್‌ನ ನಿವೃತ್ತ ನೌಕರ ನಾಗರಾಜ್ ಹಾಗೂ ಸಾವಿತ್ರಮ್ಮ ಅವರ ಪುತ್ರ . ಪ್ರಾಥಮಿಕ ಶಿಕ್ಷಣವನ್ನು ಶಿವಮೊಗ್ಗದ ಆರ್.ಸಿ.ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ಪೂರ್ಣ ಗೊಳಿಸಿದ್ದು, ಜೆಎನ್‌ಎನ್‌ಸಿಸಿ ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಇವರು ಸಹ ಚಂದ್ರಯಾನ ಪ್ರಾಜೆಕ್ಟ್ ನಲ್ಲಿ ಪಾಲ್ಗೊಂಡಿದ್ದರು.
ಇನ್ನಷ್ಟು ಸುದ್ದಿಗಳು
ಗಾಂಧೀಜಿ ಪ್ರತಿಮೆ ಧ್ವಂಸ! ಆರೋಪಿಗಳ ಪತ್ತೆಗೆ ಮೂರು ಟೀಂ! ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?ಉದ್ಯೋಗಕ್ಕಾಗಿ ಹುಡಕಾಡ್ತಿದ್ದೀರಾ?
ಇಲ್ಲಿದೆ ಅವಕಾಶ! ವಿದ್ಯಾರ್ಹತೆ ಎಸ್ಎಸ್ಎಲ್ಸಿ-ಪದವಿ! ಪೂರ್ತಿ ವಿವರ ಇಲ್ಲಿದೆ
ಬಾಂಬ್ ಇನ್ ದಿ ಸಿಟಿ ಗೇಮ್ ಆಡ್ತಿರಾ! ಮಹಿಳೆಯರಿಗೆ ಮಾತ್ರ ಅವಕಾಶ! ಪುರುಷರಿಗೂ ಇದೆ




