ಶಿವಮೊಗ್ಗ :  ಶರಾವತಿ ಹಿನ್ನೀರಿನ ದಡದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ?

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಸೆ. 06 ರಂದು ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗಳಲೆ ಗ್ರಾಮದ ಶರಾವತಿ ಹಿನ್ನೀರಿನ ದಡದಲ್ಲಿ ಸುಮಾರು 30 ರಿಂದ 40 ವರ್ಷದ ಅನಾಮಧೇಯ ಗಂಡಸಿನ ಮೃತ ದೇಹಕಂಡು ಬಂದಿದ್ದು, ಈತನ ಹೆಸರು, ವಿಳಾಸ, ವಾರಸುದಾರರ ಬಗ್ಗೆ ಯಾವುದೇ ಸುಳಿವು ದೊರೆತಿರುವುದಿಲ್ಲ. 

ಮೃತ ದೇಹವು ಭಾಗಶಃ ಕೊಳೆತಿರುತ್ತದೆ. ಮೃತನ ಮೈ ಮೇಲೆ ಕಡು ನೀಲಿ, ಕೆಂಪು ಪಟ್ಟಿ ಇರುವ ತಿಳಿ ನೀಲಿ ಬಣ್ಣದ ತುಂಬು ತೋಳಿನ ರೆಡಿಮೇಡ್ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಇರುತ್ತದೆ. ಮುಖ ಸಂಪೂರ್ಣ ಕೊಳೆತು ಹೋಗಿದ್ದು ಮೇಲ್ನೋಟಕ್ಕೆ ಹಲ್ಲುಗಳು ಕಂಡು ಬಂದಿರುತ್ತದೆ. 

ಮೃತನ ಎತ್ತರ ಸುಮಾರು 5.6 ಅಡಿ ಇರಬಹುದು, ಈ ವ್ಯಕ್ತಿಯ ವಾರಸುದಾರರು ಯಾರೂ ಪತ್ತೆಯಾಗದಿರುವುದರಿಂದ ಮೃತ ದೇಹವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಕಾಯ್ದಿರಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಈ ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ  ದೂ.ಸಂ.: 08182-261400, 08181-220388, 9480803337/9480803364 ಗಳನ್ನು ಅಥವಾ ಹೊಸನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor