ಶಿಕಾರಿಪುರದಲ್ಲಿ ಮಾಳೂರು ಪೊಲೀಸರ ಫೈರಿಂಗ್

ಹಂಚಿಕೊಳ್ಳಿ
WhatsApp Facebook X Telegram
Shivamogga Power Cable Theft bhadravati
Shivamogga Power Cable Theft bhadravati

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 10, 2025

ಮಹಿಷಿ ಮಠದಲ್ಲಿ ಇತ್ತೀಚೆಗೆ ನಡೆದ ಡಕಾಯಿತಿ ಪ್ರಕರಣದಲ್ಲಿ ಆರೊಪಿಯಾಗಿದ್ದ ಶ್ರೀನಿವಾಸ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಶಿಕಾರಿಪುರದ  ಟ್ಯಾಂಕ್ ಬಂಡ್ ಬಳಿಯಿರುವ ಕೆಂಗುಡ್ಡೆ ರಸ್ತೆಯ ಬಳಿಯಲ್ಲಿ  ಮಾಳೂರು ಪೊಲೀಸ್​ ಸ್ಟೇಷನ್​ ಪಿಎಸ್​ಐ ಕುಮಾರ್​  ಆರೋಪಿ ಶ್ರೀನಿವಾಸ್ ಎಂಬಾತನ ಎಡಗಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿದ್ದಾರೆ. 

ಏನಿದು ಪ್ರಕರಣ

ಏಪ್ರಿಲ್​ 6 ರಂದು ತೀರ್ಥಹಳ್ಳಿ ತಾಲೂಕಿನ ಮಹಿಶಿ ಮಠಕ್ಕೆ  12 ರಂದು 15 ಜನ ಡಕಾಯಿತರು ಮಾಸ್ಕನ್ನು ಧರಿಸಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಅಲ್ಲಿದ್ದ ಅರ್ಚಕರನ್ನು ಹೆದರಿಸಿ ಅವರ ಮೇಲೆ ಹಲ್ಲೆ ಮಾಡಿದರು. ಅಷ್ಟೇ ಅಲ್ಲದೆ ಸುಮಾರು 50 ಸಾವಿರ ನಗದು ಸೇರಿದಂತೆ ಇನ್ನಿತರೇ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿದ್ದರು. ಹಾಗೆಯೇ ನಮಗೆ 300 ಕೊಟಿ ರೂಪಾಯಿ ಹಣ ಬೇಕು ಎಂದು ಅವಾಚ್ಯ ಶಬ್ದಗಳಿಂದ ಅರ್ಚಕರನ್ನು ಬೆದರಿಸಿದ್ದರು. ಈ ಹಿನ್ನಲೆ ಮಾಳೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳ್ಳರ ಬೇಟೆಗೆ ಸಿದ್ದವಾಗಿದ್ದ ಖಾಕಿಗೆ ಇಂದು ಮಹಿಷಿ ಡಕಾಯಿತಿ ಪ್ರಕರಣದಲ್ಲೊಬ್ಬನಾದ  ಶಿಕಾರಿಪುರ ಪಟ್ಟಣದ ಶ್ರೀನಿವಾಸ್ ಸಿಕ್ಕಿದ್ದಾನೆ. ಅವನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ  ಆತ ಪೊಲೀಸರ ಮೇಲೆರ ಹಲ್ಲೆಗೆ ಮಾಡಲು ಯತ್ನಿಸಿದ್ದಾನೆ. ಪೊಲೀಸರು ಪದೇ ಪದೆ ಆತನಿಗೆ ಎಚ್ಚರಿಕೆ ನೀಡಿದರೂ ಸಹ ಶರಣಾಗದ ಕಾರಣ ಮಾಳೂರು ಪಿಎಸ್ ಐ ಕುಮಾರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.

ಈ ಬಗ್ಗೆ ಮಾದ್ಯಮ ಗ್ರೂಪ್​ನಲ್ಲಿ ವಾಟ್ಸಾಪ್ ಸಂದೇಶ ರವಾನಿಸಿರುವ ಎಸ್​ಪಿ ಮಿಥುನ್ ಕುಮಾರ್ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

SUMMARY | Srinivas, an accused in the recent dacoity case at Hishi Mutt, was shot in the leg by the police.

KEYWORDS |  Srinivas, malur, police, firing,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor